Header Ads
Header Ads
Breaking News

ಅಡ್ಯಾರ್ ಗ್ರಾ.ಪಂ. ವ್ಯಾಪ್ತಿಯ ವಿವಿಧ ಕಾಮಗಾರಿಗಳ ಉದ್ಘಾಟನೆ ಕಾರ್ಯಕ್ರಮ

ಅಡ್ಯಾರ್ ಮತ್ತು ಅರ್ಕುಳ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯಿಂದ96 ಲಕ್ಷ ರೂ, ಕಾಮಗಾರಿ, ಎರಡೂ ಗ್ರಾಮಗಳಿಗೂ ನರೇಗಾ ನಿಧಿಯ ಯೋಜನೆಯಿಂದ 12 ಲಕ್ಷ ರೂ. ಕಾಮಗಾರಿ ಮತ್ತು ಮಳೆ ಹಾನಿ ನಿಧಿಯಿಂದ 20 ಲಕ್ಷ ರೂ ಕಾಮಗಾರಿ ಒಟ್ಟು 1.28 ಕೋಟಿ ರೂ.ವೆಚ್ಚದಲ್ಲಿ ಈಗಾಗಲೇ ಹಲವು ಕಾಮಗಾರಿ ಪೂರ್ಣಗೊಂಡಿದ್ದು ಉಳಿದ ಕಾಮಗಾರಿ ಹಂತ ಹಂತವಾಗಿ ನಡೆಸಲಾಗುತ್ತದೆ ಎಂದು ಶಾಸಕ ಡಾ.ಭರತ್ ಶೆಟ್ಟಿ ವೈ ಹೇಳಿದರು.ಅಡ್ಯಾರ್ ಗ್ರಾಮ ಪಂಚಾಯತ್ ವ್ಯಾಪ್ತಿಯ ದಿಡ್ಡುವಿನಲ್ಲಿ ನೂತನ ಕಾಂಕ್ರಿಟ್ ರಸ್ತೆ ಉದ್ಘಾಟಿಸಿ ಮಾತನಾಡಿದರು. ಅರ್ಕುಳ ಗ್ರಾಮದಲ್ಲಿ ಮುಂದಿನ ದಿನಗಳಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು ಎಂದರು. ಇದೇ ಸಂದರ್ಭ ದೇವಿ ನಗರ, ಹೊಳೆ ಬದಿ, ಸೇರಿದಂತೆ ವಿವಿಧೆಡೆ ಶಾಸಕರು ಭೇಟಿ ನೀಡಿ ಶಂಕುಸ್ಥಾಪನೆ ನೆರವೇರಿಸಿದರು. ಈ ಸಂದರ್ಭ ಮುಖಂಡರಾದ ಸುಧಾಕರ್ ಅಡ್ಯಾರ್, ಪ್ರದೀಪ್ ಕುಮಾರ್ ಶೆಟ್ಟಿ, ಮಹಾಬಲ ಅಡ್ಯಾರ್, ಪ್ರಸನ್ನ ಕುಮಾರ್, ಅಜಿತ್ ಶೆಟ್ಟಿ, ಸಾಮಾಜಿಕ ಜಾಲತಾಣದ ಕಿರಣ್ ಕೋಡಿಕಲ್, ಗ್ರಾಮ ಪಂಚಾಯತ್ ಅಧ್ಯಕ್ಷೆ ಪ್ರತಿಮಾ, ಉಪಾಧ್ಯಕ್ಷೆ ಆಶಾ, ಪಿಡಿಒ ಕೃಷ್ಣ ನಾಯಕ್ ಮೊದಲಾದವರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *