Header Ads
Header Ads
Breaking News

ಅಡ್ವೆ ಬ್ರಹ್ಮ ಬೈದರ್ಕಳ ಗರೋಡಿಯ ವಾರ್ಷಿಕೋತ್ಸವ : ವಿಶೇಷವಾಗಿ ನಡೆಯುವ ಕಂಚಿಲ್ ಸೇವೆ

ಅಡ್ವೆ ಬ್ರಹ್ಮ ಬೈದರ್ಕಳ ಗರೋಡಿಯ ವಾರ್ಷಿಕೋತ್ಸವ ಮಂಗಳವಾರ ರಾತ್ರಿ ಬಹಳ ವಿಜ್ರಂಭಣೆಯಿಂದ ನಡೆದಿದ್ದು, ಈ ಧಾರ್ಮಿಕ ಕಾರ್ಯಕ್ರಮಕ್ಕೆ ಊರ ಹಾಗೂ ಪರವೂರ ಸಹಸ್ರಾರು ಭಕ್ತಾಧಿಗಳು ಆಗಮಿಸಿ ಶ್ರೀ ದೇವರ ಸಿರಿಮುಡಿ ಗಂಧ ಪ್ರಸಾದ ಸ್ವೀಕರಿಸಿದರು.ಈ ಬಗ್ಗೆ ವಿ4 ನೊಂದಿಗೆ ಮಾತನಾಡಿದ ಗರೋಡಿ ಸಮಿತಿಯ ಕಾರ್ಯದರ್ಶಿ ನವೀನ್ ಎಸ್. ಸುವರ್ಣರವರು, ನವೆಂಬರ್ 25ರಂದ್ದು ಹಸಿರುವಾಣಿಯೊಂದಿಗೆ ಗರೋಡಿ ಪ್ರವೇಶ ಕಂಡು ಆರಂಭಗೊಂಡ ಈ ವರ್ಷದ ಗರೋಡಿಯ ವಾರ್ಷಿಕ ನೇಮೋತ್ಸವ, 26ರ ರಾತ್ರಿ ನೈವೇದ್ಯ ಸೇವೆ ಹಾಗೂ ಅನ್ನ ಸಂತರ್ಪಣೆ, 27ರ ಮಧ್ಯಾಹ್ನ ಅನ್ನ ಸಂತರ್ಪಣೆ ರಾತ್ರಿ ಬೈದರ್ಕಳ ನೇಮೋತ್ಸವ ಹಾಗೂ ಅಂತಿಮವಾಗಿ 28ರ ಮಧ್ಯಾಹ್ನ ಮಾಯಂದಾಲ ನೇಮೋತ್ಸವದೊಂದಿಗೆ ಈ ವರ್ಷದ ಜಾತ್ರಾ ಮಹೋತ್ಸವ ಅಂತ್ಯ ಕಾಣಲಿದೆ ಎಂದರು.ಬ್ರಹ್ಮ ಬೈದರ್ಕಳ ಗರೋಡಿಯಲ್ಲಿ ವಿಶೇಷವಾಗಿ ನಡೆಯುವ ಕಂಚಿಲ್ ಸೇವೆಯಲ್ಲಿ ಪುಟಾಣಿ ಮುದ್ದು ಮಕ್ಕಳು ಇದ್ದು, ಮದುಮಗ-ಮದುಮಗಳಂತ್ತೆ ಸಿಂಗಾರಿಸಿದ ಅವರನ್ನು ನೋಡುವುದೇ ಒಂದು ಸಂಭ್ರಮ. ಬಹಳಷ್ಟು ಕಟ್ಟುಪಾಡುಗಳನ್ನು ಒಳಗೊಂಡ ಈ ಕಂಚಿಲ್ ಸೇವೆ ನೀಡುವ ಪುಟಾಣಿಗಳಿಗೆ ಶುದ್ಧಾಚಾರ ಅತೀ ಮುಖ್ಯ.

ಈ ಸಂದರ್ಭ ಗರೋಡಿ ಸಮಿತಿಯ ಗೌರವ ಅಧ್ಯಕ್ಷ ಜಯ ಸಿ. ಸುವರ್ಣ, ಅಧ್ಯಕ್ಷ ಸುಂದರ ಯು. ಸುವರ್ಣ ಸಹಿತ ನೂರಾರು ಗಣ್ಯರು ಉಪಸ್ಥಿತರಿದ್ದರು.

Related posts

Leave a Reply