Header Ads
Header Ads
Breaking News

ಅತಿವೃಷ್ಟಿ ಕಡಿಮೆಮಾಡುವಂತೆ ದೇವರ ಮೊರೆ : ನಾಗರೀಕ ಸಮಿತಿಯಿಂದ ವಿಶೇಷ ಪೂಜೆ

 ರಾಜ್ಯದಾದ್ಯಂತ ಮಳೆಯಿಂದಾಗಿ ಅತಿವೃಷ್ಟಿ ಉಂಟಾಗಿದೆ. ನೆರೆಯಿಂದಾಗಿ ಸಾವಿರಾರು ಮಂದಿ ಮನೆ ಮಠ ಕಳೆದುಕೊಂಡಿದ್ದು ಈ ಹಿನ್ನಲೆಯಲ್ಲಿ ಉಂಟಾಗಿರುವ ಅತಿವೃಷ್ಟಿಯನ್ನ ಸಮತೋಲನಕ್ಕೆ ತರಲು ಉಡುಪಿಯಲ್ಲಿ ದೇವರ ಮೊರೆ ಹೋಗಲಾಯಿತು. ಉಡುಪಿ ಜಿಲ್ಲಾ ನಾಗರೀಕ ಸಮಿತಿಯು ಉಡುಪಿಯ ಅನಂತೇಶ್ವರನಿಗೆ ಚಿತ್ರಾನ್ನ ಸೇವೆಯ ಮೂಲಕ ನೆರೆ ತಗ್ಗಿಸುವಂತೆ ಅನಂತೇಶ್ವರನಿಗೆ ವಿಶೇಷ ಪೂಜೆಯನ್ನೂ ಸಲ್ಲಿಸಲಾಯಿತು.

ನೆರೆ ಜಾಸ್ತಿಆದ ಸಂದರ್ಭದಲ್ಲಿ ಉಡುಪಿಯ ಅನಂತೇಶ್ವರನಿಗೆ ಚಿತ್ರಾನ್ನ ಸೇವೆ ಸಲ್ಲಿಸಿದರೆ, ನೆರೆ ಕಡಿಮೆ ಆಗುತ್ತದೆ ಎಂಬ ಪ್ರತೀತಿ ಇದೆ. ಈ ಹಿನ್ನಲೆಯಲ್ಲಿ ಹಿರಿಯರ ಮಾರ್ಗದರ್ಶನದಲ್ಲಿ ಈ ಚಿತ್ರಾನ್ನ ಸೇವೆ ನೀಡುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಪರ್ಯಾಯ ಮಠಾದೀಶ ವಿದ್ಯಾಧೀಶ ತೀರ್ಥ ಶ್ರೀಪಾದರು, ಪಲಿಮಾರು ಮಠದ ವಿದ್ಯ ರಾಜೇಶ್ವರ ತೀರ್ಥ ಸ್ವಾಮೀಜಿ, ಅನಂತೇಶ್ವರ ದೇವಸ್ಥಾನದ ಮುಖ್ಯ ಅರ್ಚಕ ಹರಿದಾಸ್ ಐತಾಳ್, ನಾಗರೀಕ ಸಮಿತಿಯ ನಿತ್ಯಾನಂದ ಒಳಕಾಡು ಚಿತ್ರಾನ್ನ ಸೇವೆಯಲ್ಲಿ ಭಾಗವಹಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಸಾರ್ವಜನಿಕರಿಗೆ ಪ್ರಸಾದದ ರೂಪದಲ್ಲಿ ಚಿತ್ರಾನ್ನ ವಿತರಿಸಲಾಯಿತು.

Related posts

Leave a Reply

Your email address will not be published. Required fields are marked *