Header Ads
Header Ads
Breaking News

ಅತ್ತಾವರದಲ್ಲಿ ರಾಯಲ್ ‘ಹೆವನ್ ರೋಸ್’ನ 5ನೇ ಶಾಖೆ ಉದ್ಘಾಟನೆ

 ನಗರದ ಸೌಂದರ್ಯಪ್ರಿಯರಿಗೊಂದು ಸಿಹಿಸುದ್ದಿ. ಸೌಂದರ್ಯವರ್ಧಕ ಸೇವೆಗಳಿಗಾಗಿ ಪ್ರಖ್ಯಾತಿ ಪಡೆದಿರುವ ಮಂಗಳೂರಿನ ರಾಯಲ್ ಹೆವನ್‌ರೋಸ್ ತನ್ನ 5ನೇ ಶಾಖೆ ಮಂಗಳೂರಿನಲ್ಲಿ ಉದ್ಘಾಟನೆಗೊಂಡಿತು.ಮಂಗಳೂರು ನಗರ ಪ್ರದೇಶದಲ್ಲಿಯೇ ಉದ್ದಿಮೆ ಕ್ಷೇತ್ರದಲ್ಲೇ ಹೆಗ್ಗಳಿಕೆ ಪಡೆದಿರುವ ರಾಯಲ್ ಹೆವನ್ ರೋಸ್’ ಇದೀಗ ಮತ್ತೊಂದು ಶಾಖೆಯನ್ನ ಆರಂಭಿಸಿದೆ.ಈಗಾಗಲೇ ಮಂಗಳೂರಿನ ವಿವಿಧ ಕಡೆಗಳಲ್ಲಿ ತನ್ನ ಶಾಖೆಯನ್ನ ತೆರೆದುಕೊಂಡಿದೆ.

ಮಂಗಳೂರಿನ ಅತ್ತಾವರ ಕಾಪ್ರಿಕುಡ್ಡದ ಐವರಿ ಎನ್‌ಕ್ಲೇವ್ ಕಟ್ಟಡದ ಮೊದಲನೇ ಮಹಡಿಯಲ್ಲಿ ಆರಂಭಗೊಂಡ ನೂತನ ರಾಯಲ್ ಹೆವನ್‌ರೋಸ್‌ನ 5ನೇ ಶಾಖೆಯನ್ನು ಹಾಜಿ ಲಡ್ಡನ್ ಮಿಯಾ ಅವರು ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿದ್ರು.ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾಜಿ ಶಾಸಕ ಜೆ.ಆರ್.ಲೋಬೋ ಪಾಲ್ಗೊಂಡು ಮಾತನಾಡಿದ್ರು, ನಗರ ಪ್ರದೇಶದಲ್ಲಿ ಈಗಾಗಲೇ ಅತ್ಯುತ್ತಮ ಸೇವೆಯನ್ನ ನೀಡುತ್ತಾ ಬಂದಿದೆ. ಗ್ರಾಹಕರಿಗೆ ಇನ್ನಷ್ಟು ಸೇವೆಯನ್ನ ನೀಡಲಿ ಎಂದು ಶುಭಾ ಹಾರೈಸಿದ್ರು.ವಿ4ನ್ಯೂಸ್ ಆಡಳಿತ ನಿದೇಶಕರಾದ ಲಕ್ಷ್ಮಣ್ ಕುಂದರ್ ಮಾತನಾಡಿ, ನಮ್ಮ ಯಾವುದೇ ಕಾರ್ಯಕ್ರಮಕ್ಕೂ ರಾಯಲ್ ಹೆವನ್ ರೋಸ್ ಎಲ್ಲಾ ರೀತಿಯಲ್ಲೂ ಸಹಕಾರ ನೀಡುತ್ತಿದ್ದಾರೆ.

ಮಂಗಳೂರು ನಗರದಲ್ಲೇ ಅತ್ಯುತ್ತಮ ಸಂಸ್ಥೆ ಎಂಬ ಹೆಸರು ಪಡೆದಿದೆ ಎಂದು ಹೇಳಿದರುರಾಯಲ್ ಹೆವನ್ ರೋಸ್ ಮಾಲಕ ಮುಸ್ತಫಾ ಪ್ರೇಮಿ ಮಾತನಾಡಿ, ಮಂಗಳೂರು ಜನತೆ ಹಾಗೂ ನೌಕರರು ತೋರಿಸಿದ ಪರಿಶ್ರಮದಿಂದ ಸಂಸ್ಥೆ ಬೆಳವಣಿಗೆ ಆಗಿದೆ. ಈಗಾಗಲೇ ಗ್ರಾಹಕರಿಗೆ ಉತ್ತಮ ಸೇವೆಯನ್ನ ನೀಡಲಾಗುತ್ತಿದೆ ಎಂದು ಅವರು ಹೇಳಿದರು.ಈ ವೇಳೆ ಮಿಸ್ ವಲ್ಡ್ ವಿಜೇತೆ ನಟಿ ಜೊಸಿತಾ ಅನೋಲಾ ರೊಡ್ರಿಗಸ್ , ಡೈಜಿವರ್ಲ್ಡ್ ಮಾರ್ಕೇಟಿಂಗ್ ಮುಖ್ಯಸ್ಥ ಪ್ರವೀಣ್ ಟಾರು, ಮೋತಿಶ್ಯಾಂ ಡೆವಲೆಪರ್‍ಸ್‌ನ ಆಡಳಿತ ನಿರ್ದೇಶಕ ಎಸ್.ಎಂ. ಅರ್ಷದ್, ಶನಕತ್ ಅಲಿ ಮತ್ತಿತರ ಗಣ್ಯರು ಭಾಗವಹಿಸಿದ್ರು.

ಈಗಾಗಲೇ ತನ್ನ ಗ್ರಾಹಕಸ್ನೇಹಿ ಸೇವೆಯ ಮೂಲಕ ಮನೆಮಾತಾಗಿರುವ ರಾಯಲ್ ಹೆವನ್ ರೋಸ್ ಯುನಿಸೆಕ್ಸ್ ಸೆಲೂನ್ ಮಂಗಳೂರಿನ ಸಿಟಿಸೆಂಟರ್, ಫೋರಂಫಿಝಾ ಮಾಲ್, ಎಂಪೈರ್ ಮಾಲ್ ಮತ್ತು ಕಂಕನಾಡಿ ಶಾಲಿಮಾರ್ ಕಾಂಪ್ಲೆಕ್ಸ್‌ನಲ್ಲಿ ತನ್ನ ಶಾಖೆಗಳನ್ನು ಹೊಂದಿದೆ. ಇಲ್ಲಿ ಚರ್ಮದ ಚಿಕಿತ್ಸೆಗಳು, ಹೇರ್ ಸ್ಪಾ, ಪೆಡಿಕ್ಯೂರ್, ಮೆನಿಕ್ಯೂರ್, ಬೈಡ್ರಲ್ ಮೇಕಪ್, ಇತ್ಯಾದಿ ಸೌಂದರ್ಯ ವರ್ದಕ ಸೇವೆಗಳನ್ನು ನೀಡಲಾಗುತ್ತಿದೆ. ಇದೀಗ5ನೇ ಶಾಖೆಯ ಮೂಲಕ ಗ್ರಾಹಕರಿಗೆ ನಗುಮೊಗದ ಸೇವೆ ನೀಡಲು ಸಿದ್ಧವಾಗಿದೆ.ಉದ್ಘಾಟನಾ ಸಮಾರಂಭದಲ್ಲಿ ಡಾನ್ಸ್ ಹಾಗೂ ಫ್ಯಾಶನ್ ಶೋ ನರೆದವರನ್ನು ಮತ್ತಷ್ಟು ರಂಜಿಸಿತು

Related posts

Leave a Reply