Header Ads
Header Ads
Header Ads
Header Ads
Header Ads
Header Ads
Header Ads
Header Ads
Breaking News

ಅತ್ತಾವರದ ಸರೋಜನಿ ಮಧುಸೂಧನ್ ಕುಶೆ ಶಾಲಾ ವಾರ್ಷಿಕೋತ್ಸವ ಶಾಲೆಯ ವಾರ್ಷಿಕ ಸಂಚಿಕೆ ವಿದ್ಯಾ ಕುಂಜ್ ಬಿಡುಗಡೆ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ

ಮಂಗಳೂರಿನ ಅತ್ತಾವರದಲ್ಲಿರುವ ಸರೋಜನಿ ಮಧುಸೂಧನ್ ಕುಶೆ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮದ ಶಾಲೆಯ ಆವರಣದಲ್ಲಿ ಆಯೋಜಿಸಲಾಗಿತ್ತು. ಸಂಸ್ಥೆಯ ಸಂಸ್ಥಾಪಕರಾದ ಮಧುಸೂಧನ್ ಡಿ.ಕುಶೆ ಹಾಗೂ ಸರೋಜಿ ಎಂ ಕುಶೆ ಅವರ ಭಾವಚಿತ್ರಕ್ಕೆ ಪುಪ್ಪ ಅರ್ಪಿಸುವ ಮೂಲಕ ಶಾಲೆಯ ವಾರ್ಷಿಕೋತ್ಸವವನ್ನು ಉದ್ಘಾಟಿಸಲಾಯಿತು. ಮುಖ್ಯ ಅತಿಥಿಗಳಾದ ಉಡುಪಿ ವಿದ್ಯೋದಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎನ್.ನಾಗರಾಜ್ ಬಲ್ಲಾಳ್  ಭಾಗವಹಿಸಿದ್ದರು.  ಯೋಗಥೆರಪಿ ತಜ್ಞೆ ರೂಪ ಎನ್. ಬಲ್ಲಾಳ್ ಅವರು, ಶಾಲೆಯ ವಾರ್ಷಿಕ ಸಂಚಿಕೆ ವಿದ್ಯಾ ಕುಂಜ್ ಅನಾವರಣಗೊಳಿಸಿದರು

ಪ್ರಾಂಶುಪಾಲ ಕೆ.ಕೆ.ಉಪಾಧ್ಯಾಯ ಅವರು ವಾರ್ಷಿಕ ವರದಿಯನ್ನು ಮಂಡನೆ ಮಾಡಿದರು ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಅಕ್ಷತಾ ಎ.ಬಿ, ಶಿಕ್ಷಕಿ ಕವಿತಾ ರಾವ್ ಸ್ವಾಗತಿಸಿದರು.ಇದೇ ವೇಳೆ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.

Related posts

Leave a Reply