
ಮಂಗಳೂರಿನ ಅತ್ತಾವರ ಬಾಬುಗುಡ್ಡೆಯಲ್ಲಿರುವ ಬಬ್ಬುಸ್ವಾಮಿ ಕ್ಷೇತ್ರ ಮತ್ತು ಸಮೀಪದ ಇನ್ನೊಂದು ದೈವಸ್ಥಾನದ ಕಾಣಿಕೆ ಡಬ್ಬಿಯಲ್ಲಿ ಅವಹೇಳನಕಾರಿ ಬರಹದ ನೋಟುಗಳು ಪತ್ತೆಯಾಗಿದೆ.
ಕಳೆದ ಗುರುವಾರ ದೈವಸ್ಥಾನದ ಕಾಣಿಕೆ ಡಬ್ಬಿ ತೆರೆಯುವ ವೇಳೆ ಈ ಬರಹವುಳ್ಳ ನೋಟು ಮತ್ತು ಚೀಟಿ ಪತ್ತೆಯಾಗಿದೆ. ಇದರಲ್ಲಿ ಪ್ರಚೋದನಕಾರಿ ಬರಹಗಳನ್ನು ನೋಟಿನಲ್ಲಿ ಬರೆಯಲಾಗಿದೆ.ಇಲ್ಲಿಗೆ ಸಮೀಪದ ಇನ್ನೊಂದು ದೈವಸ್ಥಾನದ ಕಾಣಿಕೆ ಹುಂಡಿಯಲ್ಲೂ ಇದೇ ರೀತಿಯ ಅವಹೇಳನಕಾರಿ ಬರಹಗಳನ್ನು ಹಾಕಲಾಗಿದೆ. ದೇವಸ್ಥಾನ ಮಂಡಳಿಯವರು ಪೊಲೀಸ್ರಿಗೆ ಮಾಹಿತಿ ನೀಡಿದ್ದು, ಪಾಂಡೇಶ್ವರ ಠಾಣಾ ಪೊಲೀಸ್ರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕಿಡಿಗೇಡಿಗಳ ಕೃತ್ಯವನ್ನು ಖಂಡಿಸಿ ಬಬ್ಬುಸ್ವಾಮಿ ದೈವಸ್ಥಾನದಲ್ಲಿ ಶುಕ್ರವಾರ ರಾತ್ರಿ ಊರ ಭಕ್ತಾದಿಗಳು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭ ನಗರ ಪಾಲಿಕೆ ಸದಸ್ಯರಾದ ಶೈಲೇಶ್ ಶೆಟ್ಟಿ, ಭರತ್ ಕುಮಾರ್ ಎಸ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರತೀಂದ್ರನಾಥ್ ಎಚ್, ಅಖಿಲ ಭಾರತ ಮುಂಡಾಲ ಯುವ ವೇದಿಕೆ, ವಿಶ್ವಹಿಂದು ಪರಿಷತ್, ಬಜರಂಗದಳ ಅತ್ತಾವರ ಚಕ್ರಪಾಣಿ ಶಾಖೆ ಮತ್ತು ಛತ್ರಪತಿ ಶಾಖೆ ಬಾಬುಗುಡ್ಡ ಶಾಖೆ ಸದಸ್ಯರುಗಳು ಉಪಸ್ಥಿತರಿದ್ದರು.