Header Ads
Breaking News

ಅತ್ತೂರು ಸಂತ ಲಾರೆನ್ಸ್ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವ : ವಂದನೆ ಸಲ್ಲಿಸಿದ ಸಾವಿರಾರು ಭಕ್ತರು

ಅತ್ತೂರು ಸಂತ ಲಾರೆನ್ಸ್ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವದ ಮೂರನೇ ದಿನವಾದ ಮಂಗಳವಾರ ನಿರಂತರವಾಗಿ ಬಲಿಪೂಜೆ ನಡೆಯಿತು. ಸಾವಿರಾರು ಭಕ್ತಾದಿಗಳು ಪಾಲ್ಗೊಂಡು ಸಂತ ಲಾರೆನ್ಸರಿಗೆ ವಂದನೆ ಸಲ್ಲಿಸಿ ಭಕ್ತಿ ಮೆರೆದರೆ ಇನ್ನೊಂದು ಕಡೆ ಸಂತ ಲಾರೆನ್ಸರ ಪವಾಡಮೂರ್ತಿ ಸ್ಪರ್ಶಿಸಿ ಕೃತಾರ್ಥರಾಗುತ್ತಿರುವುದು ಕಂಡುಬಂತು.

ಪವಾಡಮೂರ್ತಿ ಇದ್ದ ಜಾಗದಲ್ಲಿ ಜನತೆ ಸಾಲುಗಟ್ಟಿ ನಿಂತಿರುವುದು ಸಾಮಾನ್ಯವಾಗಿತ್ತು. ಪವಿತ್ರ ಪುಷ್ಕರಿಣಿಯ ನೀರು ಪಡೆದು ಭಕ್ತರು ಪುನೀತರಾಗುತ್ತಿದ್ದರು. ಪುತ್ತೂರಿನ ಧರ್ಮಾಧ್ಯಕ್ಷ ಡಾ| ಜೀವರ್ಗಿಸ್ ಮಾರ್ ಮಕಾರಿಯೊಸ್ ಕಲಯಿಲ್ ಅವರು ಹಾಗೂ ಶಿವಮೊಗ್ಗದ ಧರ್ಮಾಧ್ಯಕ್ಷ ಡಾ| ಫ್ರಾನ್ಸಿಸ್ ಸೆರಾವೊವರು ದಿನದ ವಿಶೇಷ ಪೂಜೆಗಳನ್ನು ಕನ್ನಡ ಭಾಷೆಯಲ್ಲಿ ನೆರವೇರಿಸಿದರು. ಎಂದಿನಂತೆ ಅಸ್ವಸ್ಥರಿಗಾಗಿ ವಿಶೇಷ ಪ್ರಾರ್ಥನೆಗಳನ್ನು ನಡೆಸಿದ್ದಲ್ಲದೆ, ಗುರುಗಳು ಹಾಗೂ ಸೇವಾದರ್ಶಿಗಳು ಸಕಲ ಭಕ್ತಾದಿಗಳ ಶಿರದ ಮೇಲೆ ಹಸ್ತವಿಟ್ಟು ಆಶೀರ್ವದಿಸಿದರು.

ಈ ಸಂದರ್ಭದಲ್ಲಿ ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ, ರಮನಾಥ ರೈ, ಪ್ರಮೋದ್ ಮಧ್ವರಾಜ್, ಐವನ್ ಡಿಸೋಜಾ ಇತರ ಗಣ್ಯರು ಪುಣ್ಯ ಕ್ಷೇತ್ರಕ್ಕೆ ಭೇಟಿ ಸಂದರ್ಭದಲ್ಲಿ ಉಡುಪಿ ಕ್ಷೇತ್ರದ ಧರ್ಮ ಧ್ಯಕ್ಷರಾದ ಬಿಶಾಪ್ ಜೆರಾಲ್ಡ್ ಐಸಾಕ್ ಲೋಬೊ ಆತ್ಮೀಯವಾಗಿ ಬರಮಾಡಿಕೊಂಡರು.

Related posts

Leave a Reply

Your email address will not be published. Required fields are marked *