Header Ads
Header Ads
Breaking News

ಅತ್ಯಾಚಾರ ಆರೋಪಿಗಳಿಗೆ ಕಾನೂನಿನಡಿ ಕಠಿಣ ಕ್ರಮ ತೆಗೆದುಕೊಳ್ಳಿ : ಹಿಂಜಾವೇ ಮುಖಂಡ ರಾಧಾಕೃಷ್ಣ ಅಡ್ಯಂತಾಯ ಹೇಳಿಕೆ

ದೇಶದಲ್ಲಿ ಅಪ್ರಾಪ್ತ ಬಾಲಕಿಯರಿಗೆ, ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುವ ಆರೋಪಿಗಳನ್ನು ಮಾನಸಿಕ ಅಸಸ್ವಸ್ಥ, ಹುಚ್ಚ ಎಂದು ನಿರೂಪಿಸಿ ಕಾನೂನಿನ ಕಟಕಟೆಗೆ ಹತ್ತಿಸುವ ಮೊದಲು ನಿರಪರಾಧಿ ಮಾಡುವ ಕಾರ್ಯ ನಡೆಯುತ್ತಿದ್ದು, ಮುಡಿಪುವಿನಲ್ಲಿ ಅತ್ಯಾಚಾರಕ್ಕೆ ಯತ್ನಿಸಿದ ಆರೋಪಿಯ ವಿರುದ್ಧ ಕಾನೂನಿನಡಿಯಲ್ಲಿ ಕಠಿಣ ಕ್ರಮವನ್ನು ತೆಗೆದುಕೊಂಡು ಆತನಿಗೆ ಕಠಿಣ ಶಿಕ್ಷೆಯನ್ನು ನೀಡುವ ನಿಟ್ಟಿನಲ್ಲಿ ಪೊಲೀಸರು ಆರೋಪ ಪಟ್ಟಿ ಸಲ್ಲಿಸಬೇಕು ಎಂದು ಹಿಂದೂ ಜಾಗರಣಾ ವೇದಿಕೆ ಮುಖಂಡ ರಾಧಾಕೃಷ್ಣ ಅಡ್ಯಂತಾಯ ಅಭಿಪ್ರಾಯಪಟ್ಟರು.

ಮುಡಿಪುವಿನಲ್ಲಿ ಫ್ಯಾನ್ಸಿ ಮಾಲಕನಿಂದ ವಿದ್ಯಾರ್ಥಿನಿಯ ಅತ್ಯಾಚಾರ ಯತ್ನಕ್ಕೆ ಸಂಬಂಧಿಸಿದಂತೆ ನಡೆದ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಫ್ಯಾನ್ಸಿ ಮಾಲಕ ವ್ಯಾಪಾರ ಮಾಡುವುದನ್ನು ಬಿಟ್ಟು ಲೈಂಗಿಕ ಕಿರುಕುಳ ನೀಡುವ ಮೂಲಕ ಸಮಾಜ ತಲೆತಗ್ಗಿಸುವ ಕೆಲಸ ಮಾಡಿದ್ದಾನೆ ಇದು ಪ್ರತಿಭಟನೆಯಲ್ಲ ಜನಜಾಗೃತಿ ಕಾರ್ಯಕ್ರಮವಾಗಬೇಕು ಇಂತಹ ಘಟನೆಯನ್ನು ವಿದ್ಯಾರ್ಥಿ, ಸಂಘಟನೆಗಳು, ಒಂದು ಸಮುದಾಯದ ಜನರು ಮಾತ್ರವಲ್ಲದೆ ಇಡೀ ಸಮಾಜವೇ ಇದನ್ನು ಖಂಡಿಸಬೇಕು ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಹಿಂದೂ ಸಂಘಟನೆಯ ಮುಖಂಡ ಟಿ.ಜಿ.ರಾಜಾರಾಮ ಭಟ್, ಎಬಿವಿಪಿ ಮಂಗಳೂರು ವಿಭಾಗ ಸಂಚಾಲಕ ಆಶೀಶ್ ಉಪಸ್ಥಿತರಿದ್ದರು. ಕೊಣಾಜೆ ಸೇರಿದಂತೆ ಮಮಗಳೂರು ಕಮಿಷನರೇಟ್ ವಿಭಾಗದ ಪೊಲೀಸರು ಈ ಸಂದರ್ಭದಲ್ಲಿ ಬಂದೋಬಸ್ತ್ ಎರ್ಪಡಿಸಿದ್ದರು.

 

 

Related posts

Leave a Reply

Your email address will not be published. Required fields are marked *