Header Ads
Breaking News

ಅತ್ಯಾಚಾರ, ಕೊಲೆ ಎಸಗಿದ್ದ ಆರೋಪಿ ಪೊಲೀಸರ ಬಲೆಯಿಂದ ಎಸ್ಕೇಪ್!

ಅಪ್ರಾಪ್ತೆಯ ಮೇಲೆ ಅತ್ಯಾಚಾರ ಮಾಡಿ ಆಕೆಯನ್ನು ಕೊಲೆ ಮಾಡಿದ್ದ ಆರೋಪಿ ಪೊಲೀಸರ ಬಲೆಯಿಂದ ಎಸ್ಕೇಪ್ ಆದ ಘಟನೆ ನಡೆದಿದೆ. ಮಣಿಪಾಲ ಠಾಣಾ ವ್ಯಾಪ್ತಿಯ ಪೆರಂಪರ ಹಳ್ಳಿಯಲ್ಲಿ ಮೊನ್ನೆಯಷ್ಟೇ ಅಪ್ರಾಪ್ತೆಯ ಅತ್ಯಾಚಾ, ಕೊಲೆ ಪ್ರಕರಣದಲ್ಲಿ ಆರೋಪಿ ಹನುಮಂತಪ್ಪ ಎಂಬವನನ್ನು ಬಂಧಿಸಲಾಗಿತ್ತು. ನಿನ್ನೆ ನ್ಯಾಯಾಧೀಶರ ಸಮ್ಮುಖ ಹಾಜರು ಪಡಿಸಲಾಗಿತ್ತು. ನ್ಯಾಯಾಲಯ 14ದಿನದ ನ್ಯಾಯಾಂಗ ಬಂಧನ ಕೂಡಾ ವಿಧಿಸಿತ್ತು. ಆದ್ರೆ ಜೈಲಿಗೆ ಆರೋಪಿಯನ್ನು ಕರೆದೊಯ್ಯುವಾಗ ಎಸ್ಕೇಪ್ ಆಗಿದ್ದಾನೆ. ಜೈಲು ಆವರಣದ ಅರಣ್ಯ ಪ್ರದೇಶದಲ್ಲಿ ಆರೋಪಿ ಅಡಗಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

Related posts

Leave a Reply

Your email address will not be published. Required fields are marked *