Header Ads
Header Ads
Breaking News

ಅದಮಾರಿನಲ್ಲಿ ರೈಲು ಢಿಕ್ಕಿಯಾಗಿ ವ್ಯಕ್ತಿ ಮೃತ್ಯು

ಪಡುಬಿದ್ರಿ: ಅದಮಾರಿನ ರೈಲು ಹಳಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೋರ್ವರಿಗೆ ರೈಲು ಡಿಕ್ಕಿಯಾದ ಪರಿಣಾಮ ದಾರುಣಾವಾಗಿ ಮೃತಪಟ್ಟ ಘಟನೆ ನಡೆದಿದೆ. ಮೃತ ವ್ಯಕ್ತಿ ಎಲ್ಲೂರು ಗ್ರಾ.ಪಂ. ವ್ಯಾಪ್ತಿಯ ಕುಂಜೂರು ನಿವಾಸಿ ಸೋಮನಾಥ ದೇವಾಡಿಗ(೪೩) ಎಂದು ತಿಳಿದು ಬಂದಿದೆ.ಅವಿವಾಹಿತ ರಾಗಿದ್ದು ಕೂಲಿ ಕೆಲಸ ಮಾಡಿಕೊಂಡು ತನ್ನ ಸಹೋದರಿಯೊಂದಿಗೆ ಜೀವಿಸುತ್ತಿದ್ದ ಇವರು ನಿತ್ಯದಂತೆ ಅದಮಾರಿಗೆ ಬಂದಿದ್ದ ಇವರು ರೈಲು ಹಳಿಯಲ್ಲಿ ತನ್ನ ಮನೆ ಕುಂಜೂರಿಗೆ ನಡೆದುಕೊಂಡು ಹೋಗುತ್ತಿದ್ದ ಸಂದರ್ಭ ಈ ದುರ್ಘಟನೆ ಸಂಭವಿಸಿದೆ. ಒಂದು ಕಾಲು ಕೂಡಾ ನೋವು ಇದ್ದು ಸರಿಯಾದ ಸಮಯಕ್ಕೆ ಮನೆಗೆ ಬಾರದ ಸೋಮನಾಥನನ್ನು ಹುಡುಕಿಕೊಂಡು ಬಂದಾಗ ರೈಲು ಡಿಕ್ಕಿಯಾಗಿ ಛಿಂದಿಯಾದ ವಿಚಾರ ಗಮನಕ್ಕೆ ಬಂದಿದೆ. ಸ್ಥಳಕ್ಕೆ ಬಂದ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಶವವನ್ನು ಶವಾಗಾರಕ್ಕೆ ಸಾಗಿಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Related posts

Leave a Reply