Header Ads
Breaking News

ಅದಮಾರು ಮಠ ಶಿಕ್ಷಣ ಮಂಡಳಿಯಿಂದ ಶಾಲಾ ಶುಲ್ಕ ತಾವೇ ಭರಿಸಲು ನಿರ್ಧಾರ

ಕೊರೊನಾ ಮಹಾಮಾರಿಯು ವಿಶ್ವವ್ಯಾಪಿಯಾಗಿ ವಿಶ್ವದ ಎಲ್ಲಾ ರಾಷ್ಟ್ರಗಳ ಆರ್ಥಿಕ ವ್ಯವಸ್ಥೆಯನ್ನೇ ಬುಡಮೇಲು ಮಾಡುತ್ತಿದೆ. ಈ ಸಂಕಷ್ಟದ ಕಾಲದಲ್ಲಿ ತೊಂದರೆಗೀಡಾಗಿರುವ ನಮ್ಮ ಗ್ರಾಮೀಣ ಭಾಗದ ಪೊಷಕರು ಮತ್ತಷ್ಟು ಸೋಲಬಾರದೆನ್ನುವ ಉದ್ದೇಶದಿಂದ ನಮ್ಮ ಶ್ರೀ ಅದಮಾರು ಮಠ ಶಿಕ್ಷಣ ಮಂಡಳಿಯ ಅಧ್ಯಕ್ಷನಾಗಿ ಸಾಮಾಜಿಕ ಜವಾಬ್ದಾರಿಯೊಂದಿಗೆ ನಮ್ಮ ಗ್ರಾಮೀಣ ಭಾಗದ ಪಡುಬಿದ್ರಿ ಮತ್ತು ಅದಮಾರು ಶಿಕ್ಷಣ ಸಂಸ್ಥೆಗಳಲ್ಲಿನ ಪ್ರಸಕ್ತದ ಮತ್ತು ಹೊಸತಾಗಿ ಸೇರ್ಪಡೆಗೊಳ್ಳುವ ವಿದ್ಯಾರ್ಥಿಗಳೂ ಸೇರಿದಂತೆ ಸುಮಾರು 2000ದಷ್ಟು ವಿದ್ಯಾರ್ಥಿಗಳ ಸುಮಾರು ರೂಪಾಯಿ 21 ಲಕ್ಷ ಮೊತ್ತದ ಒಂದು ತಿಂಗಳ ಶಾಲಾ ಶುಲ್ಕವನ್ನು ತಾವೇ ಭರಿಸಲು ನಿರ್ಧರಿಸಿದ್ದೇವೆ ಎಂದು ಉಡುಪಿ ಶ್ರೀ ಅದಮಾರು ಮಠ ಶಿಕ್ಷಣ ಮಂಡಳಿಯ ಅಧ್ಯಕ್ಷ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ಹೇಳಿದರು.

ಆವರು ಅದಮಾರು ಪೂರ್ಣ ಪ್ರಜ್ಞ ಪದವಿ ಪೂರ್ವ ಕಾಲೇಜಿನ ತನ್ನ ಕಚೇರಿಯಲ್ಲಿ ವಿದ್ಯಾರ್ಥಿಗಳಿಗೆ ಸೌಲಭ್ಯವನ್ನು ಹಸ್ತಾಂತರಿಸಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿ ಮಾತನಾಡಿದರು.ಅದಮಾರು ಶಿಕ್ಷಣ ಮಂಡಳಿಯ ಗೌರವ ಕಾರ್ಯದರ್ಶಿ ನ್ಯಾಯವಾದಿ ಪ್ರದೀಪ್ ಕುಮಾರ್ ಮಾತನಾಡಿ, ಪಡುಬಿದ್ರಿಯ ಎಸ್‍ಬಿವಿಪಿ ಹಿ. ಪ್ರಾ.ಶಾಲೆ, ಗಣಪತಿ ಪ್ರೌಢಶಾಲೆ, ಅದಮಾರು ಪೂರ್ಣಪ್ರಜ್ಞ ವಿದ್ಯಾಸಂಸ್ಥೆಗಳಲ್ಲಿನ ಎಲ್‍ಕೆಜಿಯ ಚಿಣ್ಣರಿಂದ ಆಂಗ್ಲ ಹಾಗೂ ಕನ್ನಡ ಮಾಧ್ಯಮ ಪ್ರೌಢ ಮತ್ತು ಪ್ರಥಮ ಹಾಗೂ ದ್ವಿತೀಯ ಪಿಯು ವಿದ್ಯಾರ್ಥಿಗಳು ಈ ಸೌಲಭ್ಯವನ್ನು ಪಡೆದುಕೊಳ್ಳಲಿರುವರು. ಈ ಸಂದರ್ಭ ಪ್ರಾಂಶುಪಾಲ ಎಂ. ರಾಮಕೃಷ್ಣ ಪೈ, ಉಪಪ್ರಾಂಶುಪಾಲೆ ಡಾ. ಒಲಿವಿಟಾ ಡಿಸೋಜ, ಮುಖ್ಯೋಪಾಧ್ಯಾಯರುಗಳಾದ ಶ್ರೀಕಾಂತ್ ರಾವ್, ಲಕ್ಷ್ಮೀ ಉಡುಪ, ಸತೀಶ್ ಮೊದಲಾದವರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *