Header Ads
Header Ads
Header Ads
Breaking News

ಅದಮಾರು ಶ್ರೀಗಳ ಪರ್ಯಾಯಕ್ಕೆ ಕ್ಷಣಗಣನೆ : ಬಟ್ಟೆಯ ಬ್ಯಾನರ್ ಗಳನ್ನು ಹಾಕುವ ಬಗ್ಗೆ ನಿರ್ಧಾರ

ಮುಂದಿನ ಅದಮಾರು ಶ್ರೀಗಳ ಪರ್ಯಾಯಕ್ಕೆ ದಿನಗಣನೆ ಆರಂಭವಾಗಿದೆ. ಈಗಾಗಲೇ ಅದಮಾರು ಶ್ರೀಗಳ ಪರ್ಯಾಯವನ್ನು ವೈಶಿ?ಪೂರ್ಣವಾಗಿ ಸಂಪನ್ನಗೊಳಿಸಲು ಪರ್ಯಾಯೋತ್ಸವ ಸಮಿತಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಅದರಲ್ಲಿ ಪ್ರಮುಖವಾಗಿ ಪ್ಲಾಸ್ಟಿಕ್ ಬ್ಯಾನರ್ ಗಳನ್ನು ಅಳವಡಿಸದೇ ಬಟ್ಟೆಯ ಬ್ಯಾನರ್ ಗಳನ್ನು ಹಾಕುವ ಬಗ್ಗೆ ಪರ್ಯಾಯ ಸಮಿತಿ ನಿರ್ಧರಿಸಿದೆ.

ಈಬಗ್ಗೆ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಪರ್ಯಾಯ ಸಮಿತಿಯ ಅದ್ಯಕ್ಷ ಎಂಬಿ ಪುರಾಣಿಕ್ ಶ್ರೀ ಶ್ರೀ ಈಶ ಪ್ರಿಯ ಶ್ರೀಗಳ ಆಶಯದಂತೆ ಸ್ವಚ್ಚ ಪರಿಸರ ಜಾಗೃತಿ ಮೂಡಿಸಲು ಪರ್ಯಾಯ ಮಹೋತ್ಸವದ ಮೂಲಕ ಪ್ರಯತ್ನಿಸಲಾಗುವುದು. ಪರ್ಯಾಯ ಮಹೋತ್ಸವಕ್ಕೆ ಸಂಬಂಧಪಟ್ಟ ಯಾವುದೇ ಪ್ಲಾಸ್ಟಿಕ್ ಮತ್ತು ಪ್ಲಾಸ್ಟಿಕ್ ಮಿಶ್ರಿತ ಬ್ಯಾನರ್ ಅಥವಾ ಪ್ಲೆಕ್ಸ್ ಗಳನ್ನು ಹಾಕದೇ ಇರಲು ನಿರ್ಧರಿಸಿದ್ದು ಅದರ ಬದಲು ಸಂಪೂರ್ಣ ಬಟ್ಟೆಯ ಬ್ಯಾನರ್ ಅನ್ನು ಉಪಯೋಗಿಸಲು ನಿರ್ಧರಿಸಲಾಗಿದೆ ಎಂದರು. ಪರ್ಯಾಯದ ಪುರ ಪ್ರವೇಶ ಜನವರಿ 8ರಂದು ನಡೆಯಲಿದ್ದು ರಸ್ತೆಯ ಇಕ್ಕೆಲಗಳಲ್ಲಿ ತಳಿರು ತೋರಣ, ದೀಪ ರಂಗವಲ್ಲಿ ಮೂಲಕ ಸಿಂಗರಿಸಿ ಪುರಪ್ರವೇಶದ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿ ನೀಡಿದರು.

Related posts

Leave a Reply

Your email address will not be published. Required fields are marked *