Header Ads
Header Ads
Header Ads
Breaking News

ಅಧ್ಯಕ್ಷ ಮನು ಬಳಿಗಾರ್ ನೇತೃತ್ವದಲ್ಲಿ ಸುದ್ಧಿಗೋಷ್ಠಿ ನಡೆಯಿತು.

ಉಳ್ಳಾಲ: ಮೈಸೂರಿನಲ್ಲಿ ನಡೆಯಲಿರುವ 83 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಧ್ಯಕ್ಷರಾಗಿ ಚಿಂತಕ, ಸಾಹಿತಿ ಪ್ರೊ. .ಚಂದ್ರಶೇಖರ್ ಪಾಟೀಲ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಮನು ಬಳಿಗಾರ್ ಹೇಳಿದರು.

ಮಂಗಳೂರು ಸಮೀಪದ ತಲಪಾಡಿಯ ಶಾರದಾ ವಿದ್ಯಾನಿಕೇತನದಲ್ಲಿ ಸೋಮವಾರ ನಡೆದ ಕನ್ನಡ ಸಾಹಿತ್ಯ ಪರಿಷತ್‌ನ 101ನೇ ವಾರ್ಷಿಕ ಮಹಾ‌ಅಽವೇಶನದಲ್ಲಿ ನಿರ್ಣಯ ಪಡೆದುಕೊಳ್ಳಲಾಗಿದೆ ಎಂದು ನುಡಿದರು. ಮೈಸೂರಿನಲ್ಲಿ ನ. 24.25 ಹಾಗೂ 26 ರಂದು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿದ್ದು, ಅಧ್ಯಕ್ಷರಾಗಿ ರಾಜ್ಯ ಹಾಗೂ ಹೊರಭಾಗದಲ್ಲಿ ಕನ್ನಡ ಸಾಹಿತ್ಯದ ಕಂಪನ್ನು ಪಸರಿಸಿದ ಹಾಗೂ ಹೋರಾಟ ನಡೆಸಿದ ಪ್ರೊ. .ಚಂದ್ರಶೇಖರ ಪಾಟೀಲ (ಚಂಪ) ಅವರನ್ನು ಆಯ್ಕೆ ಮಂಡಳಿ ನಿರ್ಧರಿಸಿದೆ. ಸಮ್ಮೇಳನ ಅಧ್ಯಕ್ಷರ ಪಟ್ಟಿಯಲ್ಲಿ ಧಾರವಾಡದ ಡಾ. ವೀಣಾ ಶಾಂತೇಶ್ವರ್ , ಮೈಸೂರಿನ ಡಾ. ಲತಾ ರಾಜಶೇಖರ್, ಮಂಗಳೂರಿನ ಸಾರಾ ಅಬೂಬಕರ್ ಮತ್ತು ಉತ್ತರಕನ್ನಡದ ಡಾ.ಎನ್. ಆರ್. ನಾಯಕ್ ಹೆಸರು ಪ್ರಸ್ತಾವನೆಯಲ್ಲಿತ್ತು ಎಂದು ಹೇಳಿದರು.

ಪ್ರತಿ ಸಮ್ಮೇಳನಕ್ಕೆಸರಕಾರ ವಾರ್ಷಿಕ ಅನುದಾನ 10 ಕೋಟಿ ಬಿಡಿಗಡೆ ಮಾಡುತ್ತಿದ್ದು ಈ ಬಾರಿ 12 ಕೋಟಿ ರೂ. ಮಂಜೂರು ಮಾಡುತ್ತಿದ್ದು ಅದರಲ್ಲಿ ಪ್ರಾಥಮಿಕವಾಗಿ 6 ಕೋಟಿ ರೂ. ಈಗಾಗಲೇ ಬಿಡುಗಡೆಯಾಗಿದೆ. ಜಿಲ್ಲಾ ಮಟ್ಟದಲ್ಲಿಕೆಲವೇ ಜಿಲ್ಲೆಯಲ್ಲಿ ಸ್ವಂತ ಕಚೇರಿ ಇರುವುದರಿಂದ ಕಚೇರಿ ಇಲ್ಲದ ಜಿಲ್ಲೆಗಳಲ್ಲಿ ಕಚೇರಿ ತೆರೆದು ಈಗ ಸಿಗುತ್ತಿರುವ ಒಂದು ಲಕ್ಷರೂ. ಜೊತೆಗೆ ಸಿಬ್ಬಂದಿಯನ್ನು ನೇಮಿಸುವ ಸಲುವಾಗಿ ಹೆಚ್ಚುವರಿಯಾಗಿ ತಿಂಗಳಿಗೆ ಮಾಸಿಕಮೂರು ಸಾವಿರರೂ. ಒದಗಿಸುವ ಕುರಿತು ಚಿಂತನೆಯನ್ನು ನಡೆಸಲಾಗಿದೆ. ಭಾಷೆಯ ಅಭಿವೃದ್ಧಿ ಮತ್ತು ಸಂಶೋಧನೆ ನಡೆಸುವವರ ಕಾರ್ಯಕ್ರಮದ ಸ್ವರೂಪ ಹಾಗೂ ಕ್ರಿಯಾಯೋಜನೆಯನ್ನು ಪರಿಶೀಲಿಸಿ 15 ಸಾವಿರರೂ. ಗಳಿಂದ 1 ಲಕ್ಷರೂ. ವರೆಗೆ ಕ.ಸಾ.ಪದಿಂದ ನೀಡಲಾಗುವುದು.

ಸುಪ್ರೀಂ ಕೋರ್ಟ್ ತಿಳಿಸಿದಂತೆ ಭಾಷಾ ಕಡ್ಡಾಯ ನೀತಿಯಲ್ಲಿ ಭಾಷೆಯ ಆಯ್ಕೆ ಪೋಷಕರಿಗೆ ಬಿಟ್ಟದ್ದು. ಕಡ್ಡಾಯ ನೀತಿ ಅನುಸರಿಸುವಂತಿಲ್ಲ ಎಂಬ ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ, ಖ್ಯಾತ ನ್ಯಾಯವಾದಿಗಳಾದ ರಾಮಜೋಯಿಸ, ನಾಗಮೋಹನ್, ಎ.ಜೆ. ಸದಾಶಿವ ಸೇರಿದಂತೆ ನಾಡಿನ ಭಾಷಾ ತಜ್ಞಾರನ್ನು ಹಿರಿಯ ಭಾಷಾ ತಜ್ಞರನ್ನು ಮತ್ತು ನ್ಯಾಯಾಽಶರುಗಳ ತಂಡದೊಂದಿಗೆ ಚರ್ಚಿಸಲಾಗಿದೆ.
ಕಾವೇರಿ ನಿರ್ವಹಣಾ ಮಂಡಳಿ ಸ್ಥಾಪನೆಯ ಮೂಲಕರಾಜ್ಯದ ರೈತರ ಹಿತಾಸಕ್ತಿಗೆ ಧಕ್ಕೆಯಾಗುವುದರಿಂದ ಸಭೆಯಲ್ಲಿ ಕಾವೇರಿ ನಿರ್ವಹಣಾ ಮಂಡಳಿಯನ್ನು ವಿರೋಽಸುವ ನಿರ್ಣಯನ್ನು ರಾಮನಗರದ ರೈತ ಮುಖಂಡ ಎಂ.ಡಿ. ಶಿವಕುಮಾರ್ ಅವರ‌ಉತ್ತಮ ಅಭಿಪ್ರಾಯದಂತೆ ನಿರ್ಣಯ ಕೈಗೊಳ್ಳಲಾಗಿದೆ ಎಂದರು.

ಹೊಸ ಪ್ರಸ್ತಾವನೆಗಳು ಹಾಗೂ ಹಳೆಯ ಪ್ರಸ್ತಾವನೆಗಳ ಜೊತೆಗೆ ನವೆಂಬರ್‌ನಲ್ಲಿ ಕೆಂದ್ರ ಸರಕಾರದ ಜೊತೆಗೆ ಚರ್ಚಿಸುವ ಸಲುವಾಗಿ ಕೇಂದ್ರ ಸಚಿವ ಅನಂತ ಕುಮಾರ್ ಅವರನ್ನು ಬೇಟಿಯಾಗಲಿದ್ದು ಕನ್ನಡಕ್ಕೆ ಹೆಚ್ಚಿನ ಮಾನ್ಯತೆ ಸಿಗುವಂತೆ ಪ್ರಯತ್ನಿಸಲಾಗುವುದು ಎಂದು ನುಡಿದರು.

ಪತ್ರಿಕಾಗೋಷ್ಠಿಯಲ್ಲಿ ಗೌರವ ಕಾರ್ಯದರ್ಶಿ ಎಸ್.ಎ . ಚೆನ್ನೇಗೌಡ, ರಾಜ್ಯ ಸಮಿತಿ ಸಂಚಾಲಕ ಎನ್.ಕೆ. ನಾರಾಯಣ್ , ಡಾ. ರಾಜಶೇಖರ್, ರಾಜಣ್ಣ ಹಾಗೂ ಕಸಾಪ ವಿವಿಧಜಿಲ್ಲೆಗಳ ಜಿಲ್ಲಾಧ್ಯಕ್ಷರುಗಳು ಭಾಗಿಯಾಗಿದ್ದರು.

Related posts

Leave a Reply