Header Ads
Header Ads
Breaking News

ಅನಂತ್ ಕುಮಾರ್ ನಿಧನಕ್ಕೆ ಕೋಟ ಶ್ರೀನಿವಾಸ್ ಪೂಜಾರಿ ಸಂತಾಪ

ಇನ್ನು ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ್ ಪೂಜಾರಿಯವರು ಕೂಡ ಕೇಂದ್ರ ಸಚಿವ ಅನಂತ ಕುಮಾರ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಮಂಗಳೂರಿನಲ್ಲಿ ಮಾತನಾಡಿದ ಕೋಟಾ ಶ್ರೀನಿವಾಸ ಪೂಜಾರಿ, ರಾಜ್ಯಕ್ಕೆ ಕೇಂದ್ರದ ಅನುದಾನ ತರಲು ಅನಂತ್ ಕುಮಾರ್ ಪಾತ್ರ ಅಪಾರ. ಅನಂತ ಕುಮಾರ್ ಅಗಲಿಕೆ ರಾಷ್ಟ್ರ ಮತ್ತು ರಾಜ್ಯಕ್ಕೆ ತುಂಬಲಾರದ ನಷ್ಟ. ರಾಸಾಯನಿಕ ಮತ್ತು ರಸಗೊಬ್ಬರ ಸಚಿವರಾದ್ಮೇಲೆ ಅನಂತ್ ಕುಮಾರ್ ಸುಧಾರಣೆ ತಂದರು. ರಾಷ್ಟ್ರದಲ್ಲಿ ಒಂದು ದಿನವೂ ರಸಗೊಬ್ಬರದ ಕೊರತೆ ಕಂಡಿಲ್ಲ. ಅಟಲ್ ಜೀ ಚಿತಾಭಸ್ಮ ವಿಸರ್ಜನೆ ಸಂಧರ್ಭದಲ್ಲಿ ಅವರ ಆರೋಗ್ಯದಲ್ಲಿ ವ್ಯತ್ಯಾಸ ಇತ್ತು. ಅವರನ್ನು ಮುಟ್ಟಿದ ಸಂಧರ್ಭದಲ್ಲಿ ಅನುಭವವಾಗುತ್ತಿತ್ತು. ಅನಂತ ಕುಮಾರ್ ಆತ್ಮಕ್ಕೆ ದೇವರು ಸದ್ಗತಿ ನೀಡಲಿ ಎಂದು ಆಶಿಸಿದರು.

Related posts

Leave a Reply