Header Ads
Header Ads
Breaking News

ಅನಘ ಸುಸುಕಿ ಶೋರೂಂನಲ್ಲಿ ಜಿಎಸ್‌ಎಕ್ಸ್-ಎಸ್750 ಸಿಸಿ ನೂತನ ಬೈಕ್ ಮಂಗಳೂರಿಗೆ

 

ಮಂಗಳೂರಿನ ಕೆಪಿಟಿಯಲ್ಲಿರುವ ಅನಘ ಸುಜುಕಿ ಶೋರೂಂನಲ್ಲಿ ಸುಜುಕಿ ಕಂಪೆನಿಯ 9.3 ಲಕ್ಷ ರೂಪಾಯಿಯ ನೂತನ ಸುಸುಕಿ ಜಿಎಸ್‌ಎಕ್ಸ್-ಎಸ್ 750 ಸಿಸಿ ಬೈಕನ್ನು ಮಂಗಳೂರಿನಲ್ಲಿ ಮೊದಲ ಗ್ರಾಹಕರಾದ ಕಾರ್ತಿಕ್ ಹೆಗಡೆಗೆಯವರಿಗೆ ಹಸ್ತಾಂತರಿಸಲಾಯಿತು.ಈ ನೂತನ ಬೈಕ್ ಮಂಗಳೂರಿನ ಮಳಿಗೆಗೆ ಮೊದಲ ಬಾರಿಗೆ ಪರಿಚಯಿಸಲಾಗಿದ್ದು ಬೈಕ್ ಪ್ರೇಮಿಗಳಿಗೆ ಮಾತ್ರ ಈ ಬೈಕ್‌ನ ಮಹತ್ವ ತಿಳಿಯುತ್ತದೆ

ಈಗಾಗಲೆ ಕೆಪಿಟಿ ಅನಘ ಶೋರೂಂನಲ್ಲಿ  ನಲ್ಲಿ ಆರು ಬೈಕ್ ಗಳ ಖರೀದಿ ಬಗ್ಗೆ ಗ್ರಾಹಕರು ಈಗಾಗಲೇ ಬೇಡಿಕೆಯಿಡ್ಡಿದ್ದಾರೆ ಇದು ನಮಗೆ ಹೆಮ್ಮೆಯ ವಿಷಯ ಎಲ್ಲಾ ಗ್ರಾಹಕರಿಗೆ ಧನ್ಯವಾದಗಳುನ ಎಂದು ಅನಘ ಸುಜಿಕಿ ಯ ನಿರ್ದೇಶಕ ವೆಂಕಟ್ ಪನಿ ಹೇಳಿದರು

ಇನ್ನೂ ಕಾವೇರಿ ಪೋರ್ಡ್‌ನಲ್ಲಿ ಟೀಮ್ ಲೀಡರ್ ಆಗಿ ಕೆಲಸ ನಿರ್ವಹಿಸುತ್ತಿರುವ ಕಾರ್ತಿಕ್ ಹೆಗಡೆ ಈ ನೂತನ ವಾಹನ ಖರೀದಿಸಿದ ಮಂಗಳೂರಿನ ಮೊದಲ ಗ್ರಾಹಕ ಎನ್ನುವ ಹೆಗ್ಗಳಿಕೆಗೆ ಪಾತ್ರವಾದರು ಬಳೀಕ ಮಾತನಾಡಿದ ಅವರು ಅನಘ ಸುಜುಕಿಯಲ್ಲಿ ಗ್ರಾಹಕರಿಗೆ ನೀಡುವ ಗೌರವ ಮತ್ತು ಸೇವೆಗಳಿಂದ ಆಕರ್ಷಿತನಾದ ನಾನು ಇಷ್ಟು ಬೆಲೆ ಬಾಳುವ ವಾಹನವನ್ನು ಇದೆ ಶೋರುಂ ನಲ್ಲಿ ಖರೀಸಬೇಕೆಂದು ಇಲ್ಲಿ ಖರೀದಿಸಿದೆ ಇನ್ನೂ ಈ ವಾಹನದ ವಿಶೇಷ ಅಂದರೆ ಇದು ಸ್ಪೋರ್ಟ್ಸ್ ಬೈಕ್ ಮತ್ತು ಆರಾಮದಾಯಕ ಪ್ರಯಾಣಕ್ಕಾಗಿ ಈ ಬೈಕ್ ಮತ್ತು ಬೈಕ್ ನ ಮೇಲೆ ಕ್ರೇಝ್ ಇರುವವರಿಗೆ ಮಾತ್ರ ಇಷ್ಠು ಬೆಲೆಯ ಬೈಕ್‌ಗಳ ಬಗ್ಗೆ ತಿಳಿಯುತ್ತದೆಎ ಎಂದು ಹೇಳಿದರು.

ಬಳಿಕ ಮಂಗಳೂರಿನ ಮೊದಲ ಗ್ರಾಹಕರಾದ ಕಾರ್ತಿಕ್ ಹೆಗಡೆ ಅವರು ಕೇಕ್ ಕತ್ತರಿಸಿ ಅನಘ ಸುಸುಕಿ ಸಿಬ್ಬಂದಿಗಳೋಂದಿಗೆ ಸಂಭ್ರಮಿಸಿದರು.

ಹೌದು ಮೊಟ್ಟ ಮೊದಲ ಬಾರಿಗೆ ಮಂಗಳೂರಿಗೆ ಲಗ್ಗೆ ಇಟ್ಟ ಸುಸುಕಿ ಜಿಎಸ್‌ಎಕ್ಸ್ ಎಸ್ 750ಸಿಸಿ ಬೈಕ್ ವಿಶೇಷ ಇಂಜಿನ್ ಪವರ್ ಮತ್ತು 750ಸಿಸಿ ಹೊಂದಿz. ನಾಲ್ಕು ಸಿಲಿಂಡರ್ ಹಾಗೂ ಲಿಕ್ವಿಡ್ ಕೂಲಡ್ ಇಂಜಿನ್ ಹೊಂದಿದ್ದು ಅಷ್ಟೇ ಅಲ್ಲಾ ಎಲ್ಲಾ ರೀತಿಯ ರಸ್ತೆಗಳಿಗೆ ಹೊಂದಿಕೊಳ್ಳುವಂತೆ ನಿರ್ಮಿಸಲಾಗಿದೆ ಇನ್ನೂ ಎಂತವರನ್ನು ಒಮ್ಮೆ ತನ್ನತ್ತ ಸೆಳೆಯವುವಂತಹಾ ಆಕರ್ಷಕ ವೈಮಾಟ ಹೊಂದಿದ ಬೈಕ್ ಇದಾಗಿದೆ.

Related posts

Leave a Reply