Header Ads
Breaking News

ಅನಧಿಕೃತ ಅಂಗಡಿಗೆ ಅಕ್ರಮ ವಿದ್ಯುತ್ ಜೋಡಣೆ : ಅಧಿಕಾರಿಗಳೇ ಈ ಅಕ್ರಮದಲ್ಲಿ ಭಾಗಿ

ಉಡುಪಿ ಮಂಗಳೂರು ಗಡಿಭಾಗ ಹೆಜಮಾಡಿ ಪೊಲೀಸ್ ಚೆಕ್‍ಪೋಸ್ಟ್ ಬಳಿ ಸುಮಾರು ಐದು ತಿಂಗಳಿಂದ ಹೆದ್ದಾರಿ ಜಾಗದಲ್ಲಿ ಅನಧಿಕೃತವಾಗಿ ಕಾರ್ಯಚರಿಸುತ್ತಿರುವ ಅಂಗಡಿಯೊಂದಕ್ಕೆ ಸ್ಥಳೀಯ ಕಟ್ಟಡವೊಂದರ ಮಾಲಿಕರೇ ಅಕ್ರಮವಾಗಿ ವಿದ್ಯುತ್ ಸಂಪರ್ಕ ನೀಡಿದ್ದು, ಈ ಅಕ್ರಮದಲ್ಲಿ ಮೆಸ್ಕಾಂ ಅಧಿಕಾರಿಗಳೇ ಭಾಗಿಯಾದ್ದಾರೆ ಎಂಬುದಾಗಿ ಸಾರ್ವಜನಿಕರು ಆರೋಪಿಸಿದ್ದು, ಅದಕ್ಕೆ ಪೂರಕವಾಗಿ ಪೊಲೀಸ್ ರಕ್ಷಣೆಯಲ್ಲಿ ಹೆದ್ದಾರಿ ಇಲಾಖೆ ಆ ಗೂಡಂಗಡಿಯನ್ನು ತೆರವುಗೊಳಿಸಿದ್ದಾರೆ.

ಎಚ್‍ಟಿ ಸಂಪರ್ಕ ಹೊಂದಿರುವುದರಿಂದ ಪ್ರತೀ ತಿಂಗಳು ಇಲ್ಲಿಗೆ ಕಾಪು ಸಹಾಯಾಕ ಕಾರ್ಯನಿರ್ವಾಹಕ ಇಂಜಿಯರ್ ಹರೀಶ್ ಕುಮಾರ್‍ರವರೇ ರೀಡಿಂಗ್ ಮಾಡಲು ಬರುತ್ತಿದ್ದು, ಈ ಅಕ್ರಮ ಅವರ ಕಣ್ಣಮುಂದಿದ್ದರೂ ಯಾಕೆ ಮೌನವಹಿಸಿದ್ದಾರೆ, ಈ ಬಗ್ಗೆ ತಕ್ಷಣ ಮೇಲಾಧಿಕಾರಿಗಳು ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು, ತಪ್ಪಿದರೆ ಈ ಬಗ್ಗೆ ಹೋರಾಟ ಅನಿರ್ವಾಯವಾದೀತು ಎಂಬುದಾಗಿ ಘಟನಾ ಸ್ಥಳದಲ್ಲಿ ಸೇರಿದ ನೂರಕ್ಕೂ ಅಧಿಕ ಸಾರ್ವಜನಿಕರು ಎಚ್ಚರಿಸಿದ್ದಾರೆ.
ಟೋಲ್ ಪ್ರದೇಶದಲ್ಲಿ ಕಾರ್ಯಚರಿಸುತ್ತಿರುವ ಹತ್ತಾರು ಗೂಡಂಗಡಿಗಳು ಪೊಲೀಸ್ ಸೂಚನೆಯಂತೆ ರಾತ್ರಿ ಹತ್ತುವರೆಗೆ ಮುಚ್ಚುತ್ತಿದ್ದು, ಆದರೆ ಈ ಅನದಿಕೃತ ಅಂಗಡಿ ಮಾತ್ರ ಮುಂಜಾನೆಯವರೆಗೂ ಕಾರ್ಯಚರಿಸುತ್ತಿದ್ದ ಬಗ್ಗೆ, ಇತರೆ ವ್ಯಾಪಾರಿಗಳು ಪೊಲೀಸರ ಗಮನಕ್ಕೆ ತಂದಾಗ ಅವರು ಎಲ್ಲರಂತೆ ಹತ್ತುವರೆಗೆ ಅಂಗಡಿ ಮುಚ್ಚಲು ಲಿಖಿತ ಸೂಚನೆ ನೀಡಿದ್ದರು. ಈ ಬಗ್ಗೆ ಕಟ್ಟಡ ಮಾಲಿಕ ಪ್ರಸಾದ್ ಎಂಬಾತ ಪೊಲೀಸರೊಂದಿಗೆ ಖಾರವಾಗಿ ವರ್ತಿಸಿ ನಾನು ಜಿಲ್ಲಾಧಿಕಾರಿಗಳ ಅನುಮತಿ ಪಡೆದಿದ್ದೇನೆ ಎಂದಾಗ ಪೊಲೀಸ್ ಮೌನವಾದರು, ಪದೇ ಪದೇ ಈ ಅಂಗಡಿ ಬಗ್ಗೆ ದೂರುಗಳು ಬಂದಾಗ ಕಾಪು ಸರ್ಕಲ್ ಇನ್ಸ್‍ಪೆಕ್ಟರ್ ಪ್ರಕಾಶ್ ಸಹಿತ ಕಾಪು ಎಸ್ಸೈ ದಿಲೀಪ್ ಕಟ್ಟಡ ಮಾಲಿಕನಲ್ಲಿ ಡಿಸಿ ಆದೇಶ ಪ್ರತಿ ಕೇಳಿದಾಗ, ತಬ್ಬಿಬಾದ ಆತ ನನಗೆ ಮೌಕಿಕ ಅನುಮತಿ ನೀಡಿದ್ದಾರೆ ಎಂದಿದ್ದ.

ತಕ್ಷಣ ತೀಕ್ಣವಾದ ಪೊಲೀಸ್ ಅಧಿಕಾರಿಗಳು ಆತನನ್ನು ತರಾಟೆಗೆ ತೆಗೆದುಕೊಂಡಿದ್ದು, ಸರಿಯಾದ ಸಮಯಕ್ಕೆ ಮುಚ್ಚುವಂತೆ ಸೂಚನೆ ನೀಡಿದ್ದು, ಅದನ್ನು ಕಟ್ಟಡ ಮಾಲಿಕ ಒಪ್ಪಿದ್ದ. ಎರಡು ದಿನ ಕಳೆಯುತ್ತಿದಂತ್ತೆ ಮತ್ತೆ ಅದೇ ರಾಗ ಅದೇ ಹಾಡು, ಇದೀಗ ಹೆದ್ದಾರಿ ಇಲಾಖೆ ಪೊಲೀಸ್ ಇಲಾಖೆಯ ರಕ್ಷಣೆಯೊಂದಿಗೆ ಗೂಡಂಗಡಿ ತೆರವುಗೊಳಿಸುವ ಮೂಲಕ ಪ್ರಕರಣ ಸುಖಾಂತ್ಯ ಕಂಡಿದೆ.

Related posts

Leave a Reply

Your email address will not be published. Required fields are marked *