Header Ads
Breaking News

ಅನಧಿಕೃತ ತಳ್ಳುಗಾಡಿಗಳ ವಿರುದ್ಧ ಕ್ರಮಕ್ಕೆ ಅಗ್ರಹ : ಕಾರ್ಕಳ ತಾಲೂಕು ಹೋಟೆಲ್ ಮಾಲಿಕರ ಸಂಘ ಒತ್ತಾಯ

ಕಾನೂನಿಗೆ ವಿರುದ್ಧವಾಗಿ ತಾಲೂಕು ವ್ಯಾಪ್ತಿಯಲ್ಲಿ ತಲೆಎತ್ತಿರುವ ಅನಧಿಕೃತ ತಳ್ಳುಗಾಡಿಗಳ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಕಾರ್ಕಳ ತಾಲೂಕು ಹೋಟೆಲ್ ಮಾಲಿಕರ ಸಂಘವು ಒತ್ತಾಯಿಸಿದೆ.

ಕಾರ್ಕಳದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಸಂಘದ ಪ್ರಮುಖರಾದ ಹರೀಶ್ ನಾಯಕ್ ಹೋಟೆಲ್, ರೆಸ್ಟೋರೆಂಟ್ ಉದ್ಯಮ ಸ್ಥಾಪನೆಗೆ ಸಾಲ ಮೂಲಕ ಲಕ್ಷಾಂತರ ರೂಪಾಯಿ ಬಂಡವಾಳ ಹೂಡಿ, ವಿವಿಧ ಇಲಾಖೆಗಳ ಮಾನ್ಯತೆ ಪತ್ರ ಪಡೆದು, ಸ್ಥಳೀಯಾಡಳಿತದಿಂದ ಪರವಾನಿಗೆ ಪಡೆದು ಕಾರ್ಮಿಕರ ಹಿತ ಕಾಪಾಡಿಕೊಂಡು ಗ್ರಾಹಕರಿಗೆ ಉತ್ತಮ ರೀತಿಯಲ್ಲಿ ಸೇವೆ ನೀಡಲಾಗುತ್ತಿದೆ ಎಂದ್ರು.

ಇನ್ನು ಅನಧಿಕೃತ ತಳ್ಳುಗಾಡಿ ವ್ಯಾಪಾರಕ್ಕೆ ಯಾವುದೇ ಮಾನದಂಡವಿಲ್ಲದೇ, ಶುಚಿತ್ವ ಪರಿಪಾಲಿಸಲು ಒತ್ತು ನೀಡಿದೇ ವ್ಯಾಪಾರಕ್ಕೆ ಅನುಮತಿ ನೀಡಲಾಗುತ್ತಿದೆ. ಇದರಿಂದ ತಿಂಡಿ ತಿನಸುಗಳ ದರ ಪಟ್ಟಿದಲ್ಲಿ ವ್ಯತ್ಯಯ ಕಂಡು ಬರುತ್ತಿದೆ. ಹೋಟೆಲ್, ರೆಸ್ಟೋರೆಂಟ್ ಉದ್ಯಮಕ್ಕೆ ಮಾರಕವಾಗಿ ಕೊಡಲಿಯೇಟು ಬೀಳುವಂತಾಗಿದೆ ಎಂದು ತಿಳಿಸಿದ್ರು.

ಈ ಸಂದರ್ಭದಲ್ಲಿ ಸಂಘದ ಪ್ರಮುಖರಾದ ಪ್ರಕಾಶ್ ಶೆಟ್ಟಿ, ಉದಯ ಲೂಯಿಸ್, ವಿಶ್ವನಾಥ ಕಾಮತ್, ನವೀನ್ ಶೆಟ್ಟಿ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *