Header Ads
Header Ads
Breaking News

ಅನಿಲ ಜಾಡಿ ಸಿಡಿದು ಮನೆಗೆ ಹಾನಿ

ಮೂಡುಬಿದಿರೆ: ಮಾರೂರು ಗಾಂದೊಟ್ಯದಲ್ಲಿ ಕೊಂಬು ವಾದಕ ಪ್ರಕಾಶ್ ದೇವಾಡಿಗ ಅವರ ಮನೆಯಲ್ಲಿ ಸಂಜೆ ಅನಿಲ ಜಾಡಿ ಸಿಡಿದು ಮನೆಗೆ ತೀವ್ರ ಹಾನಿಯುಂಟಾದ ಘಟನೆ ಸಂಭವಿಸಿದೆ.


ಪ್ರಕಾಶ್ ಅವರ ತಾಯಿ ಗುಲಾಬಿ ಎಂದಿನಂತೆ ಅಡುಗೆ ಸಿಲಿಂಡರ್ ಬಳಸುವಾಗ ತಕ್ಷಣ ಅದು ಸಿಡಿದು ಮಣ್ಣಿನ ಗೋಡೆ ಬಿರುಕುಬಿಟ್ಟು ಕುಸಿದಿದೆ ಎಂದು ಸ್ಥಳಕ್ಕೆ ಭೇಟಿ ನೀಡಿದ ಮೂಡುಬಿದಿರೆ ಕಂದಾಯ ನಿರೀಕ್ಷಕರು ತಿಳಿಸಿದ್ದಾರೆ. ಯಾರಿಗೂ ಜೀವಾಪಾಯ ಉಂಟಾಗಿಲ್ಲ. ಗ್ರಾಮಕರಣಿಕರೂ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

Related posts

Leave a Reply

Your email address will not be published. Required fields are marked *