Header Ads
Header Ads
Breaking News

ಅನಿಲ ಟ್ಯಾಂಕರ್ ಪಲ್ಟಿ ಗ್ಯಾಸ್ ಸೋರಿಕೆ ನಿಯಂತ್ರಣಕ್ಕೆ ಶಿರಾಡಿ ಕೊಡ್ಯಕಲ್ಲು ಬಳಿ ಘಟನೆ

 
ಉಪ್ಪಿನಂಗಡಿ: ಅನಿಲ ಟ್ಯಾಂಕರೊಂದು ಪಲ್ಟಿಯಾಗಿ ಅನಿಲ ಸೋರಿಕೆಯಾದ ಘಟನೆ ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಶಿರಾಡಿ ಗ್ರಾಮದ ಕೊಡ್ಯಕಲ್ಲು ತಿರುವಿನಲ್ಲಿ ಬುಧವಾರ ಸಂಜೆ ಸಂಭವಿಸಿದೆ. ಇದರಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ವ್ಯತ್ಯಯ್ಯವುಂಟಾಗಿದ್ದು, ಬೆಂಗಳೂರು ಹೋಗುವ ವಾಹನಗಳನ್ನು ಬದಲಿ ಮಾರ್ಗವಾಗಿ ಗುಂಡ್ಯಕ್ಕೆ ಕಳುಹಿಸಲಾಗುತ್ತಿದೆ.

ಮಂಗಳೂರಿನಿಂದ ಬೆಂಗಳೂರಿನ ದೇವನಂದಿ ಎಂಬಲ್ಲಿಗೆ ಇಂಡಿಯನ್ ಕಂಪೆನಿಯ ಎಲ್‌ಪಿ (ಲಿಕ್ವೀಡ್ ಪೆಟ್ರೋಲಿಯಂ) ಅನಿಲ ಸಾಗಿಸುತ್ತಿದ್ದ ಟ್ಯಾಂಕರ್ ಚಾಲಕನ ನಿಯಂತ್ರಣ ತಪ್ಪಿ ಕೊಡ್ಯಕಲ್ಲು ಎಂಬಲ್ಲಿ ರಸ್ತೆಗೆ ಉರುಳಿ ಬಿದ್ದಿದೆ. ಈ ಸಂದರ್ಭ ಟ್ಯಾಂಕ್‌ನಿಂದ ಅನಿಲ ಸೋರಿಕೆಯುಂಟಾಗಿತ್ತು. ತಕ್ಷಣವೇ ಉಪ್ಪಿನಂಗಡಿ ಪೊಲೀಸ್ ಠಾಣೆ ಹಾಗೂ ನೆಲ್ಯಾಡಿ ಹೊರಠಾಣೆಯ ಪೊಲೀಸರು ರಾಷ್ಟ್ರೀಯ ಹೆದ್ದಾರಿ ೭೫ರ ಮೂಲಕ ಬೆಂಗಳೂರಿಗೆ ತೆರಳುವ ವಾಹನಗಳನ್ನು ತಡೆದು ಬದಲಿ ಮಾರ್ಗದಲ್ಲಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

Related posts