Header Ads
Header Ads
Breaking News

ಅನುದಾನಿತ ಅನುದಾನರಹಿತ ಶಾಲೆ ಎಂದು ಪಕ್ಷಪಾತ  ಮಾಡಬಾರದು: ಪರ್ಯಾಯ ಪಲಿಮಾರು ಶ್ರೀ ಹೇಳಿಕೆ

ಅನುದಾನಿತ, ಅನುದಾನರಹಿತ ಶಾಲೆ ಎಂದು ಸರ್ಕಾರ ಪಕ್ಷಪಾತ ಮಾಡಬಾರದು. ಸರಕಾರಕ್ಕೆ ಅಪ್ಪ ಅಮ್ಮನ ಜವಬ್ದಾರಿ ಇದೆ.ಎಲ್ಲಾ ಶಾಲೆಯ ಮಕ್ಕಳಿಗೂ ಸಮವಸ್ತ್ರ ನೀಡುವುದು ಸರ್ಕಾರದ ಕರ್ತವ್ಯ ಅಂತ ಪರ್ಯಾಯ ಪಲಿಮಾರು ವಿದ್ಯಾಧೀಶ ತೀರ್ಥ ಶ್ರೀಪಾದರು ಸರಕಾರಕ್ಕೆ ಕಿವಿ ಮಾತು ಹೇಳಿದ್ದಾರೆ.

ಉಡುಪಿ ಕೃಷ್ಣಮಠದ ರಾಜಾಂಗಣದಲ್ಲಿ ನಡೆದ ಅನುದಾನಿತ ಶಾಲೆಗಳ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ ಕಾರ್ಯಕ್ರಮದಲ್ಲಿ ಸಮವಸ್ತ್ರ ವಿತರಿಸಿ ಮಾತನಾಡಿದರು.ಯಾವುದೇ ಶಾಲೆಯಿರಲಿ ಪಕ್ಷಪಾತ ಮಾಡಬಾರದು. ಸರ್ಕಾರ ಮಾಡಬೇಕಾದ ಕೆಲಸವನ್ನು ಅನುದಾನಿತ ಶಾಲೆಗಳು ಮಾಡುತ್ತಿದೆ.ಇದರಿಂದ ಸರ್ಕಾರದ ಭಾರ ಕೆಳಗಿಳಿಯಿತು.28 ಸಾವಿರ ಶಾಲೆಗಳಿಗೆ ಬೀಗ ಹಾಕುತ್ತಾರಂತೆ. ಅನುದಾನಿತ ಶಾಲೆಗಳ ಕೈಯಲ್ಲಿ ಆ ಶಾಲೆ ಇದ್ರೆ ಬೀಗ ಹಾಕುವ ಪ್ರಶ್ನೆ ಬರುತ್ತಿರಲಿಲ್ಲ. ಬೀಗ ಹಾಕುವ ಬದಲು ಶಾಲೆಯ ಮಕ್ಕಳ ಒಕ್ಕೂಟಕ್ಕೆ ಒಪ್ಪಿಸಲಿ. ಒಕ್ಕೂಟ ಇಂತಹ ಶಾಲೆಗಳನ್ನು ನಡೆಸುವುದಕ್ಕೆ ಸನ್ನಧವಾಗಿದೆ ಎಂದರು.

Related posts

Leave a Reply