Header Ads
Header Ads
Breaking News

ಅನುದಾನ ಹಂಚಿಕೆಯಲ್ಲಿ ತಾರತಮ್ಯ. ಗದ್ದಲದಲ್ಲೇ ಮುಳುಗಿದ ಸಿದ್ದಾಪುರ ಗ್ರಾಮಸಭೆ.

ಕುಂದಾಪುರ: ಸಿದ್ದಾಪುರ ಗ್ರಾಮಪಂಚಾಯತ್ ಸಭಾಭವನದಲ್ಲಿ ಮಂಗಳವಾರ ಬೆಳಗ್ಗೆ ನಡೆದ ಗ್ರಾಮಸಭೆ ಗಲಾಟೆ ಗದ್ದಲಗಳಿಗೆ ಕಾರಣವಾಯಿತು. ಪ್ರತೀ ಗ್ರಾಮ ಸಭೆಗೂ ಒಂದೊಂದು ಕಾರಣ ಹೇಳಿ ಪಂಚಾಯತ್ ರಾಜ್ ಇಂಜಿನಿಯರ್ ತಪ್ಪಿಸಿಕೊಳ್ಳುತ್ತಿದ್ದಾರೆ. ಅವರು ಗ್ರಾಮಸಭೆಯ ಕೇಂದ್ರಬಿಂದುವಾಗಿದ್ದು, ಕೂಡಲೇ ಅವರನ್ನು ಸಭೆಗೆ ಕರೆಸಿ ಎಂದು ಗ್ರಾಮಸ್ಥರು ಪಟ್ಟುಹಿಡಿದರು.ಪಂಚಾಯತ್ ರಾಜ್ ಇಂಜಿನಿಯರ್ ಕಣ್ಣಿನ ಶಸ್ತೃಚಿಕಿತ್ಸೆಗೆ ಒಳಗಾಗಿದ್ದು, ಸಭೆಗೆ ಬರಲಾಗುತ್ತಿಲ್ಲ ಎಂದು ಹೇಳಿದ್ದಾರೆ. ಅದೇ ವಿಷಯವಾಗಿ ಗಲಾಟೆ ಮಾಡಬೇಡಿ. ಗ್ರಾಮಸಭೆಯಲ್ಲಿ ಚರ್ಚಿಸಬೇಕಾದ ವಿಷಯಗಳು ಸಾಕಷ್ಟಿವೆ ಎಂದು ಜಿ.ಪಂ ಸದಸ್ಯ ರೋಹಿತ್ ಶೆಟ್ಟಿ ಮಾತಿಗೆ ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು, ನಾವು ಇಲ್ಲಿ ಗಲಾಟೆ ಮಾಡಲು ಬಂದಿಲ್ಲ. ಪಂಚಾಯತ್ ರಾಜ್ ಇಂಜಿನಿಯರ್ ಸಭೆಗೆ ನಿರಂತರವಾಗಿ ಗೈರಾಗುತ್ತಿರುವ ಬಗ್ಗೆ ಪ್ರಶ್ನಿಸುತ್ತಿದ್ದೇವೆ ಎಂದರು.ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿದ ಗ್ರಾಮಸ್ಥ ಭಾಸ್ಕರ್, ಮೂರು ವರ್ಷಗಳಲ್ಲಿ ಜನತಾ ಕಾಲನಿಗೆ ಏನು ಅನುದಾನ ಕೊಟ್ಟಿದ್ದೀರಿ ಎಂದು ಸ್ಪಷ್ಟಪಡಿಸಿ. ಕೇವಲ ಒಂದೇ ವಾರ್ಡಗೆ ಅನುದಾನವನ್ನು ನೀಡುತ್ತಿದ್ದೀರಿ. ಇದು ಸರಿಯಲ್ಲ ಎಂದರು. ಇದಕ್ಕೆ ಧ್ವನಿಗೂಡಿಸಿದ ಭೋಜ ಶೆಟ್ಟಿ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಅನುದಾನವನ್ನು ಹಂಚಿ. ಯಾವ ವಾರ್ಡ್‌ಗೂ ತಾರತಮ್ಯ ಮಾಡಬೇಡಿ ಎಂದರು.ಸಭೆಯಲ್ಲಿ ಜಿ.ಪಂ ಸದಸ್ಯ ರೋಹಿತ್ ಶೆಟ್ಟಿ, ತ.ಪಂ ಸದಸ್ಯ ವಾಸುದೇವ ಪೈ, ಅಧ್ಯಕ್ಷೆ ಸರೋಜಿನಿ ಶೆಟ್ಟಿ, ಉಪಾಧ್ಯಕ್ಷ ಭರತ್ ಕಾಮತ್, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Related posts

Leave a Reply