Header Ads
Header Ads
Breaking News

ಅನುಮಾನಾಸ್ಪದ ರೀತಿಯಲ್ಲಿ ಯುವಕನ ಮೃತದೇಹ ಪತ್ತೆ ಕ್ಲಾಂಪ್ಲೆಕ್ಸ್ ಕಟ್ಟಡದಿಂದ ಬಿದ್ದು ಮೃತಪಟ್ಟಿರುವ ಶಂಕೆ

ಯುವಕನೋರ್ವ ಕಟ್ಟಡದಿಂದ ಬಿದ್ದು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕಾಪಿಕಾಡ್ ಎಂಬಲ್ಲಿ ಇಂದು ಬೆಳಗ್ಗೆ ಬೆಳಕಿಗೆ ಬಂದಿದೆ. ಪಟ್ಟ ಯುವಕನಾಗಿದ್ದಾರೆ.
ಕಾಪಿಕಾಡ್‌ನ ಭಗವತಿ ಕ್ಲಾಂಪ್ಲೆಕ್ಸ್ ಎಂಬ ಕಟ್ಟಡದಿಂದ ಬಿದ್ದು ನಿಶಾನ್ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಭಗವತಿ ಕಾಂಪ್ಲೆಕ್ಸ್‌ನ ಪಕ್ಕದ ಮನೆಯೊಂದರ ಅಂಗಳದಲ್ಲಿ ನಿಶಾನ್ ಅವರ ಮೃತದೇಹ ಪತ್ತೆಯಾಗಿದೆ.ಮೃತದೇಹದ ಕೈಯೊಂದು ಮುರಿದಿದ್ದರೆ, ತಲೆ ಸೇರಿದಂತೆ ಬೇರೆಲ್ಲೂ ಗಂಭೀರ ಗಾಯಗಳು ಗೋಚರಿಸುತ್ತಿಲ್ಲ. ಇವರ ಸಾವಿನ ಬಗ್ಗೆ ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ನಡುವೆ ನಿಶಾನ್ ಮಾದಕ ವ್ಯಸನಿಯಾಗಿದ್ದು, ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎಂದು ಹೇಳಲಾಗುತ್ತಿದೆ.
ಘಟನಾ ಸ್ಥಳಕ್ಕೆ ಆಗಮಿಸಿದ ಉಳ್ಳಾಲ ಠಾಣಾ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ತನಿಖೆ ಮುಂದುವರಿದಿದೆ.

Related posts

Leave a Reply