Header Ads
Breaking News

ಅನುವಾದ ಕ್ಷೇತ್ರದ ಉದ್ಯೋಗಾವಕಾಶಗಳ ಕಡಗೆ ಗಮನ ಅಗತ್ಯ : ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಬಿ.ಯಶೋವರ್ಮ

ಅನುವಾದಕ್ಷೇತ್ರದಲ್ಲಿ ಹಲವು ಉದ್ಯೋಗಾವಕಾಶಗಳಿವೆ. ಇಂತಹಉದ್ಯೋಗಾವಕಾಶ ಪಡೆಯುವುದಕ್ಕೆ ವಿದ್ಯಾರ್ಥಿಗಳು ಆದ್ಯತೆ ನೀಡಬೇಕು ಎಂದು ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಬಿ.ಯಶೋವರ್ಮ ಹೇಳಿದರು.

ಎಸ್.ಡಿ.ಎಂ ಸ್ನಾತಕೋತ್ತರಕಾಲೇಜಿನಇಂಗ್ಲೀಷ್ ವಿಭಾಗ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಹಾಗೂ ಸಮಾಜ-ವಿಜ್ಞಾನ ಮತ್ತು ಮಾನವಿಕ ವಿಜ್ಞಾನಗಳ ಅಂತರ್ ಸೃಷ್ಟಿಯ ಸಂಶೋಧನಾಕೇಂದ್ರದಜಂಟಿಆಶ್ರಯದಲ್ಲಿ ‘ಭಾಷಾಂತರಅಧ್ಯಯನ’ ಕುರಿತುಎರಡು ದಿನದರಾಜ್ಯಮಟ್ಟದಕಾರ್ಯಾಗಾರವು ಮಂಗಳವಾರ ಉದ್ಘಾಟನೆಗೊಂಡಿತು.

ಭಾಷಾಂತರಕ್ಷೇತ್ರದಲ್ಲಿ ಅವಕಾಶಗಳಿವೆ ಆದರೆಅದರ ಸದುಪಯೋಗವಾಗುತ್ತಿಲ್ಲ. ಮಾಧ್ಯಮ, ಜಾಹೀರಾತು, ಸಿನೆಮಾ, ಸರಕಾರಿಕಛೇರಿ, ಪೊಲೀಸ್ ಇಲಾಖೆ ಹೀಗೆ ಹಲವಾರುಕಾರ್ಯ ಕ್ಷೇತ್ರಗಳಲ್ಲಿ ಅನುವಾದ ಪ್ರಕ್ರಿಯೆ ಪ್ರಾಮುಖ್ಯತೆ ಪಡೆದುಕೊಂಡಿದೆ. ಆದರೆಜನರಿಗೆಇದರ ಬಗ್ಗೆ ಮಾಹಿತಿಕಡಿಮೆಯಿದೆ. ಕಡಿಮೆ ಸಮಯದಲ್ಲಿಎಲ್ಲವನ್ನುಕಲಿಯಲು ಸಾಧ್ಯವಿಲ್ಲ. ಆದರೆ ಮನಸ್ಸಿದ್ದಲ್ಲಿ ಯಾವುದೂಅಸಾಧ್ಯವಲ್ಲ. ಜಾಗತೀಕರಣದಿಂದ ಹಲವು ಕೃತಿಗಳು ಅನ್ಯ ಭಾಷೆಗಳಿಗೆ ಭಾಷಾಂತರಗೊಂಡಿವೆ. ಇದರಿಂದ ಬೇರೆ ಭಾಷೆಗಳ ಸಾಹಿತ್ಯಗಳು ನಮಗೆ ಪರಿಚಯವಾಗಿದೆ. ಯುವಜನರು ಹೆಚ್ಚು ಭಾಷಾಅಧ್ಯಯನ ಮಾಡಿಅನುವಾದಕ್ಷೇತ್ರದಲ್ಲಿ ಬಹಳಷ್ಟು ಮುಂದೆ ಹೋಗಬಹುದು. ಇದಕ್ಕಾಗಿ ವಿದ್ಯಾಭ್ಯಾಸದಅವಧಿಯಲ್ಲೇಆದ್ಯತೆ ನೀಡುಬೇಕು. ಒಬ್ಬ ವ್ಯಕ್ತಿಗೆ ಕನಿಷ್ಟ ಎರಡು ಭಾಷೆಯಜ್ಞಾನವಿರಬೇಕು. ಭಾಷಾಂತರ ಮಾಡುವಾಗ ಮೂಲ ಕೃತಿಗೆಧಕ್ಕೆತರಬಾರದು. ನೂರಕ್ಕೆ ನೂರು ಸರಿಯಾದರೆ ಮಾತ್ರಅದಕ್ಕೆ ಮೌಲ್ಯಎಂದುಡಾ.ಬಿ.ಯಶೋವರ್ಮಅಭಿಪ್ರಾಯಪಟ್ಟರು.

ಕುವೆಂಪು ಭಾಷಾ ಭಾರತಿ ಪ್ರಾಧಿಕಾರದಅಧ್ಯಕ್ಷರಾದ ಅಜಕ್ಕಳ ಗಿರೀಶ್ ಭಟ್ ದಿಕ್ಸೂಚಿ ಮಾತನ್ನುಆಡಿದರು. “ಅನುವಾದಗಳಲ್ಲಿ ಅಡಗಿಕೂರುವ ಭಾರತ ಮತ್ತುಯುರೋಪಿನ ನಂಟು’’ ಎಂಬ ಒಂದು ದಿನದ ಭಾಷಾಕಮ್ಮಟದಕುರಿತು ಪರಿಚಯ ನೀಡಿ ಮಾತನಾಡಿದಅವರು ‘ಅನುವಾದಮಾಡುವಾಗ ಸಾಹಿತ್ಯ, ಆಚಾರ-ವಿಚಾರಗಳ ಜ್ಞಾನವಿರಬೇಕು. ಭಾಷೆಯ ಮೇಲೆ ಅಭಿಮಾನವಿದ್ದಾಗ ಮಾತ್ರ ಭಾಷಾಂತರ ಸಾಧ್ಯ. ಇದುಇಂದೋ ನಿನ್ನೆಯೋ ಪ್ರಾರಂಭವಾದುದಲ್ಲ. ಪಂಪ ರನ್ನರದ್ದುಕೂಡಒಂದುರೀತಿಯಲ್ಲಿಅನುವಾದವೇಆಗಿದೆ. ಅನುವಾದದಆದ್ಯತೆ ಸಾಹಿತ್ಯಕ್ಕೆ ಮಾತ್ರವಲ್ಲ, ಜಾಹೀರಾತು, ಸಿನೆಮಾಗಳಲ್ಲೂ ಇದೆ. ವೈಚಾರಿಕ ವಿಷಯಗಳಲ್ಲಿ, ಜ್ಞಾನದ ಹಲವಾರು ಕ್ಷೇತ್ರಗಳಲ್ಲಿ ಅನುವಾದ ಕೆಲಸ ಕಡಿಮೆ. ಆದರೆಜನರಿಗೆಇದರಲ್ಲಿ ಆಸಕ್ತಿ ಇಲ್ಲ. ಕನ್ನಡದ ಮೇರು ಲೇಖಕ ಡಿ.ವಿ.ಜಿ ಹೆಸರುಎಲ್ಲೂಉಲ್ಲೇಖವಿಲ್ಲ. ಅವರಕೊಡುಗೆಅಂತೂಅಪಾರ. ಆದರೆಅವರ ಕೃತಿಗಳು ಅನುವಾದಗೊಳ್ಳದೇ ಇರುವುದು ಸಾಹಿತ್ಯಕ್ಕೆದೊಡ್ಡ ನಷ್ಟ. ಪದಗಳ ಮೇಲೆ ವ್ಯಾಮೋಹವಿದ್ದರೆ ಭಾಷಾಜ್ಞಾನವನ್ನೂ ಬೆಳೆಸಬಹುದು’ ಎಂದು ಹೇಳಿದರು

ಎಸ್.ಡಿ.ಎಂಕಾಲೇಜಿನ ಪ್ರಾಂಶುಪಾಲ ಪ್ರೊ. ಎಸ್ ಸತೀಶ್ಚಂದ್ರಕಾರ್ಯಕ್ರಮದಅಧ್ಯಕ್ಷತೆ ವಹಿಸಿ ಶುಭಕೋರಿದರು. ಈ ಸಂದರ್ಭದಲ್ಲಿಇಂಗ್ಲೀಷ್ ವಿಭಾಗದ ಮುಖ್ಯಸ್ಥರಾದಪಿ.ಶಂಕರನಾರಾಯಣ ಅತಿಥಿಗಳನ್ನು ಸ್ವಾಗತಿಸಿದರು. ಈ ಕಾರ್ಯಕ್ರಮದಲ್ಲಿಎಸ್.ಡಿ.ಎಂ ಸ್ನಾತಕೋತ್ತರಕಾಲೇಜಿನಡೀನ್ ಬಿ. ಗಣಪಯ್ಯ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಸದಸ್ಯೆಡಾ. ಚೈತ್ರ, ಇಂಗ್ಲೀóಷ್À ವಿಭಾಗದಎಲ್ಲಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿ ಶ್ರೀನಿಧಿ ಕಾರ್ಯಕ್ರಮ ನಿರೂಪಿಸಿದರು.
– ತೇಜಸ್ವಿನಿ ಆರ್.ಕೆ

Related posts

Leave a Reply

Your email address will not be published. Required fields are marked *