Header Ads
Breaking News

ಅನ್ನ ಹಾಕುವ ಯಜಮಾನನಿಗೆ ಬೆಂಗಾವಲಾದ ಶ್ವಾನ

ಪ್ರೀತಿ ನೀಡಿದ ಯಜಮಾನನನ್ನು ಅಷ್ಟೇ ಪ್ರೀತಿಯಿಂದ ಸ್ಮರಣೆಯಲ್ಲಿ ಇರಿಸಿಕೊಂಡು ಬೆಂಗಾವಲಾಗುವ ಪ್ರಾಣಿ ನಾಯಿ. ಇದಕ್ಕೆ ಜೀವಂತ ನಿದರ್ಶನವೊಂದು ಮಂಗಳೂರು ಮಹಾನಗರದಲ್ಲಿದೆ. ಅನ್ನ ಹಾಕುವ ಅಂಗವಿಕಲ ವ್ಯಕ್ತಿಯೊಬ್ಬರನ್ನು ಎಡೆಬಿಡದೆ ಕಾಯುವ ಎರಡು ನಾಯಿಗಳಿವು.
ಅಂದಹಾಗೆ ಇವು ಪಂಚತಾರಾ ದರ್ಜೆಯ ಉಪಚಾರ ಪಡೆಯುವ ಉನ್ನತ ತಳಿಯ ನಾಯಿಗಳಲ್ಲ; ಸಾದಾ ನಾಯಿಗಳು. ಇವುಗಳ ಮಾಲಕನೂ ಸ್ಥಿತಿವಂತನಲ್ಲ, ಆತ ಖರೀದಿಸಿ ಸಾಕುತ್ತಿರುವ ನಾಯಿಗಳೂ ಇವಲ್ಲ; ಬದುಕಿನ ಬಂಡಿ ಸಾಗುತ್ತಿರುವ ಹಾದಿಯಲ್ಲಿ ಅಚಾನಕ್ ಜತೆಯಾದವರು.
ನಡೆಯಲು ಸಾಧ್ಯವಾಗದಷ್ಟು ಅಂಗವೈಕಲ್ಯ ಹೊಂದಿರುವ ಈ ವ್ಯಕ್ತಿ ತನ್ನ ಸಣ್ಣ ತಳ್ಳುಗಾಡಿಯ ಮೇಲೆ ಕುಳಿತು ಕೈಯಿಂದ ಗಾಡಿ ದೂಡುತ್ತಾ ನಗರದ ಹಂಪನಕಟ್ಟೆ, ಪಿವಿಎಸ್ ಮುಂತಾದೆಡೆ ಸಂಚರಿಸುತ್ತಾರೆ. ಹೀಗೆ ಸಂಚರಿಸುವಾಗ ಯಾರಾದರೂ ಹಣ ನೀಡಿದರೆ, ಅದರಿಂದ ಜೀವನ ಸಾಗಿಸುತ್ತಾರೆ. ಕೊಂಡ ಆಹಾರದಲ್ಲಿ ಈ ಎರಡು ನಾಯಿಗಳಿಗೆ ಪಾಲು ಇದ್ದೇ ಇದೆ. ಕಳೆದ ಆರೇಳು ವರ್ಷಗಳಿಂದ ಶ್ವಾನಗಳೆರಡು ಈ ವ್ಯಕ್ತಿಯ ಜತೆಯಾಗಿದ್ದು, ಚಾಚೂ ತಪ್ಪದೆ ಯಜಮಾನನ ಸೇವೆಗೈಯುತ್ತಿವೆ.
ತನ್ನ ಹೊಟ್ಟೆ ತುಂಬುವಷ್ಟು ಸಿಗದಿದ್ದರೂ ಈ ಎರಡು ಶ್ವಾನಗಳ ಹೊಟ್ಟೆ ತುಂಬಿಸುವುದನ್ನು ಮಾತ್ರ ಈ ವ್ಯಕ್ತಿ ಎಂದೂ ತಪ್ಪಿಸಿಲ್ಲ ಎಂದು ಈತನನ್ನು ಹತ್ತಿರದಿಂದ ಗಮನಿಸಿರುವ ನಗರದ ಜನರು ಹೇಳುತ್ತಾರೆ. ಸದ್ಯ ಈ ವ್ಯಕ್ತಿ ಯೊಂದಿಗೆ ಶ್ವಾನಗಳೆರಡು ಸದಾ ಜತೆಯಾಗಿರುವ ವೀಡಿಯೋ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ.

Related posts

Leave a Reply

Your email address will not be published. Required fields are marked *