Header Ads
Header Ads
Breaking News

ಅನ್ಯಗ್ರಹ ಜೀವಿಗಳ ವೇಷ ಧರಿಸಿ ಇತರರ ನೋವಿಗೆ ಸ್ಪಂದಿಸುತ್ತಿರುವ ಯುವಕರು

ಪಡುಬಿದ್ರಿ ಕಂಚಿನಡ್ಕದಲ್ಲಿ ಭಗವತಿ ಯುವಕರ ತಂಡ ಶಾರದಾ ಪೂಜೆಯ ಪ್ರಯುಕ್ತ ವಿಶಿಷ್ಟ ವೇಷ ಧರಿಸಿ ಗಮನಸೆಳೆದಿವೆ. ಅನ್ಯಗ್ರಹ ಜೀವಿಗಳ ವೇಷ ಧರಿಸಿ ಧನ ಸಂಗ್ರಹಿಸಿ ಸಮಾಜದಲ್ಲಿ ಇತರರ ನೋವಿಗೆ ಸ್ಪಂದಿಸುತಿದ್ದಾರೆ. ಈ ತಂಡವು ಪ್ರತೀ ತಿಂಗಳು ತಾವು ಪಡೆಯುವ ವೇತನದ ಒಂದಂಶವನ್ನು ಗ್ರೂಫ್‌ನಲ್ಲಿ ಸಂಗ್ರಹಿಸಿ,

ಅದನ್ನು ಸಮಾಜದ ಅಶಕ್ತರಿಗೆ ಧನ ಸಹಾಯವಾಗಿ ನೀಡುವ ಮೂಲಕ ಅವರ ನೋವಿಗೆ ಸ್ಪಂಧಿಸುವ ಕೆಲಸವನ್ನು ಮಾಡಿಕೊಂಡು ಬರುತ್ತಿವೆ. ಈ ಭಾರಿ ಪ್ರಡೆಟರ್ ಇಂಗ್ಲೀಷ್ ಚಿತ್ರದ ವಿಶಿಷ್ಟ ಜೀವಿಗಳ ವೇಷ ಧರಿಸಿ ಗುಂಪಿನ ಸದಸ್ಯ ಹರೀಶ್ ಪರಿಕಲ್ಪನೆಯಲ್ಲಿ ಸಂಘದ ಸದಸ್ಯರಾದ ಶಿವರಾಮ, ವಾಸು, ಪೂರ್ಣೇಶ್ ಹಾಗೂ ಅರ್ಜುನ್ ವೇಷ ಧರಿಸಿದ್ದಾರೆ.

Related posts

Leave a Reply