Header Ads
Breaking News

ಅಪಘಾತದಲ್ಲಿ ಛಿದ್ರಗೊಂಡ ವ್ಯಕ್ತಿಯ ಗುರುತು ಪತ್ತೆ

ಕುಂದಾಪುರ: ಜೂನ್ರಂದು ಕೋಟೇಶ್ವರದ ಕಾಮತ್ ಪೆಟ್ರೋಲ್ ಬಂಕ್ ಬಳಿ ಅಪಘಾತದಿಂದ ಛಿದ್ರಗೊಂಡು ಬಿದ್ದಿದ್ದ ವ್ಯಕ್ತಿಯ ಗುರುತು ಪತ್ತೆ ಮಾಡುವಲ್ಲಿ ಕುಂದಾಪುರ ಪೊಲೀಸರು ಯಶಸ್ವಿಯಾಗಿದ್ದಾರೆ.
ಧಾರವಾಡ ಜಿಲ್ಲೆಯ ಉಮೇಶ್ ಬಸಪ್ಪ ಹಂಚಿನಾಳ್ ಮೃತ ವ್ಯಕ್ತಿಯಾಗಿದ್ದು ಮೃತ ವ್ಯಕ್ತಿಯ ಜೇಬಿನಲ್ಲಿದ್ದ ಸಿಮ್‌ನ ಆಧಾರದಲ್ಲಿ ಮೃತರ ಗುರುತು ಪತ್ತೆಯಾಗಿದೆ. ಘಟನೆ ಸಂದರ್ಭ ಉಮೇಶ್ ದೇಹ ಸಂಪೂರ್ಣ ಛಿದ್ರಗೊಂಡಿದ್ದು ಗುರುತು ಪತ್ತೆ ಕೂಡ ಅಸಾಧ್ಯವಾಗಿತ್ತು. ಘಟನೆಯಲ್ಲಿ ಅವನ ಬಟ್ಟೆಗಳು ಕೂಡ ಮಳೆ ನೀರಿನಿಂದ ಒದ್ದೆಯಾಗಿತ್ತು. ಮೃತನ ಎಲ್ಲಾ ವಸ್ತುಗಳನ್ನು ಸಂಚಾರಿ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದರು. ಅವನು ಧರಿಸಿದ್ದ ಬಟ್ಟೆಯನ್ನು ಒಣಗಿಸಿದ ಬಳಿಕ ಅದರಲ್ಲಿ ಸಿಮ್ ಒಂದು ಪತ್ತೆಯಾಗಿದ್ದು, ಈ ಸಿಮ್ ಮುಖಾಂತರ ಮೃತ ವ್ಯಕ್ತಿಯ ಜಾಡು ಪತ್ತೆಯಾಗಿದೆ. ನಂತರ ಅವರ ಮನೆಯವರನ್ನು ಸಂಪರ್ಕಿಸಿದಾಗ ಮೃತ ವ್ಯಕ್ತಿ ಉಮೇಶ್ ಬಸಪ್ಪ ಹಂಚಿನಾಳ್ ಎಂದು ಪತ್ತೆಯಾಗಿದ್ದಾನೆ.
ಮೃತ ಉಮೇಶ್‌ನ ತಂದ