Header Ads
Header Ads
Breaking News

ಅಪಘಾತ ವಲಯವಾದ ಸುಳ್ಯದ ಅಡ್ಕಾರ್ : ಕಾರು ಮತ್ತು ಲಾರಿ ನಡುವೆ ಮತ್ತೆ ಅಪಘಾತ

ಪದೇ ಪದೇ ವಾಹನ ಅಪಘಾತದಲ್ಲಿ ಸುದ್ದಿಯಾಗುತ್ತಿರುವ ಅಡ್ಕಾರ್‌ನಲ್ಲಿ ಅಕ್ಟೋಬರ್ ೧೭ರಂದು ರಾತ್ರಿ ಮತ್ತೆ ಅಪಘಾತವಾಗಿದ್ದು, ಕಾರಿನಲ್ಲಿದ್ದ ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.

ಸುಳ್ಯದಿಂದ ಕಾಸರಗೋಡು ಕಡೆಗೆ ತೆರಳುತ್ತಿದ್ದ ಶೆವರ್ಲೆ ಬೀಟ್ ಕಾರು ಹಾಗೂ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಲಾರಿ ನಡುವೆ ಅಡ್ಕಾರ್ ಮಾವಿನ ಕಟ್ಟೆ ಬಳಿ ಮುಖಾಮುಖಿ ಢಿಕ್ಮಿಯಾಗಿದೆ. ಘಟನೆಯಲ್ಲಿ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಕಾರಿನಲ್ಲಿದ್ದವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇತ್ತೀಚೆಗೆ ನಡೆದ ಸರಣಿ ಅಪಘಾತದಲ್ಲಿ ಒಟ್ಟು 7 ಮಂದಿ ಅಸುನೀಗಿದ್ದರು. ಈ ಭೀಕರ ಘಟನೆಯ ನೆನಪು ಮಾಸುವ ಮುನ್ನವೇ ಮತ್ತೊಂದು ದುರ್ಘಟನೆ ನಡೆದಿದೆಯಾದರೂ ಯಾವುದೇ ಅಪಾಯವಿಲ್ಲದೆ ಪ್ರಯಾಣಿಕರು ಪಾರಾಗಿರುವುದು ಅದೃಷ್ಟವೇ ಸರಿ. ಇತ್ತೀಚೆಗೆ ನಡೆದ ಸರಣಿ ಅಪಘಾತದಲ್ಲಿ ಒಟ್ಟು 7 ಮಂದಿ ಅಸುನೀಗಿದ್ದರು. ಈ ಭೀಕರ ಘಟನೆಯ ನೆನಪು ಮಾಸುವ ಮುನ್ನವೇ ಮತ್ತೊಂದು ದುರ್ಘಟನೆ ನಡೆದಿದೆಯಾದರೂ ಯಾವುದೇ ಅಪಾಯವಿಲ್ಲದೆ ಪ್ರಯಾಣಿಕರು ಪಾರಾಗಿದ್ದಾರೆ.

Related posts

Leave a Reply

Your email address will not be published. Required fields are marked *