Breaking News

ಅಪಪ್ರಚಾರವೇ ಬಿಜೆಪಿ ಬಂಡವಾಳ, ವಿಶ್ವಾಸ್ ಅಮೀನ್

ಕಾಂಗ್ರೆಸ್ ನಡೆಸಿದ ಅಭಿವೃಧ್ಧಿ ಕಾರ್ಯವನ್ನು ತನ್ನದೆ ಪಕ್ಷ ನಡೆಸಿದ್ದೆನ್ನುವುದು, ಇಲ್ಲ ಸಲ್ಲದ ಅಪಪ್ರಚಾರವನ್ನು ಪತ್ರಿಕೆಗಳಿಗೆ ನೀಡಿ ಪ್ರಚಾರ ಗಿಟ್ಟಿಸಿಕೊಳ್ಳುವುದು ಕಾಪು ಬಿಜೆಪಿಯ ಬಂಡವಾಳವಾಗಿದ್ದು, ಇವರ ಈ ತಂತ್ರಕ್ಕೆ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂಬುದಾಗಿ ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ವಿಶ್ವಾಸ್ ಅಮೀನ್ ಹೇಳಿದ್ದಾರೆ.ಕಾಪು ರಾಜೀವ ಭವನದಲ್ಲಿ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೆದ್ದು ಗದ್ದುಗೆ ಏರಿ ನಾಪತ್ತೆಯಾದ ನಮ್ಮ ಈ ಭಾಗದ ಸಂಸದೆ ಶೋಭ ಕರಂದ್ಲಾಜೆಗೆ ಕಾಪು ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಮಾತನಾಡುವ ನೈತಿಕ ಹಕ್ಕೇ ಇಲ್ಲ. ಕಾಪು ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಟೇಕೆ ಮಾಡುವ ಅವರು ಕಾಪು ಕ್ಷೇತ್ರದ ಅಭಿವೃದ್ಧಿಗೆ ಏನು ಕೊಡುಗೆ ನೀಡಿದ್ದಾರೆ ಎಂಬುದಾಗಿ ಪ್ರಶ್ನಿಸಿದ್ದಾರೆ. ಅಭಿವೃದ್ಧಿ ಬಿಡಿ ಮತ ಹಾಕಿ ಗೆಲ್ಲಿಸಿದ ಜನರು ತಮ್ಮನ್ನು ಭೇಟಿ ಮಾಡುವ ಸಮಯ ಮತ್ತು ವಿಳಾಸವನ್ನು ದಯಮಾಡಿ ತಿಳಿಸಿರಿ ಎಂದಿದ್ದಾರೆ.
ಸುಳ್ಳಿನ ಕಂತೆಯನ್ನೇ ಮುಂದಿನ ಚುನಾವಣೆಯ ಬಂಡಾವಳವನ್ನಾಗಿಸಿಕೊಂಡ ಬಿಜೆಪಿಗೆ ಜನತೆ ತಕ್ಕ ಉತ್ತರ ನೀಡಲಿದ್ದಾರೆ, ನಿಷ್ಠಾವಂತರನ್ನು ಬದಿಗೆ ಸರಿಸಿ ಹಣಕ್ಕೆ ಮಣೆ ಹಾಕಲಿರುವ ಕಾಪು ಬಿಜೆಪಿಯ ಬಣ್ಣ ಬಯಲಾಗಲಿದೆ ಎಂದಿದ್ದಾರೆ. ಈ ಸಂದರ್ಭ ಪ್ರಮುಖರಾದ ಅಜೀಜ್ ಹೆಜಮಾಡಿ, ಮಹಮ್ಮದ್ ಇಮ್ರಾನ್, ಮೆಲ್ವಿನ್, ಸಂತೋಷ್ ಬಂಗೇರ ಮುಂತಾದವರಿದ್ದರು.

ವರದಿ-ಸುರೇಶ್ ಎರ್ಮಾಳ್

Related posts

Leave a Reply