Header Ads
Breaking News

ಅಪರಿಚಿತ ವ್ಯಕ್ತಿಯೋರ್ವನಿಗೆ ಸಾರ್ವಜನಿಕ ಸ್ಥಳದಲ್ಲಿ ಬಿದ್ದು ಗಾಯ : ಜಿಲ್ಲಾಸ್ಪತ್ರೆಗೆ ದಾಖಲಿಸಿದ ಸಮಾಜ ಸೇವಕರು

ಉಡುಪಿಯ ಬನ್ನಂಜೆ ಸಾರ್ವಜನಿಕ ಸ್ಥಳದಲ್ಲಿ ಬಿದ್ದು ಗಾಯಾಳಾಗಿರುವ ಅಪರಿಚಿತ ವ್ಯಕ್ತಿಯನ್ನು ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲು ಪಡಿಸಿದ ಘಟನೆ ಸೋಮವಾರ ಬೆಳಗಿನಜಾವ ನಡೆದಿದೆ.ಗಾಯಾಳುವಿನ ತಲೆ ಭಾಗದಲ್ಲಿ ಗಂಭೀರ ಗಾಯವಾಗಿ ರಕ್ತ ಸೊರಿಕೆ ಕಂಡಿದೆ. ವಾಸು ನಾಯ್ಕ (27 ವ) ಮಂದಾರ್ತಿಯ ನಿವಾಸಿ ಎಂದು ಶಂಕಿಸಲಾಗಿದೆ. ವಾರಸುದಾರರು ಅಜ್ಜರಕಾಡು ಜಿಲ್ಲಾಸ್ಪತ್ರೆಯ ನಾಗರಿಕ ಸಹಾಯ ಕೇಂದ್ರವನ್ನು ತುರ್ತಾಗಿ ಸಂಪರ್ಕಿಸಲು ಸೂಚಿಸಲಾಗಿದೆ.ಗಾಯಾಳು ರಕ್ಷಣಾ ಕಾರ್ಯಚರಣೆಗೆ ಪಂಚರತ್ನ ಸೇವಾ ಟ್ರಸ್ಟ್ ಉಚಿತ ಅಂಬುಲೇನ್ಸ್ ಸೇವೆ ಒದಗಿಸಿದೆ. ಸ್ಥಳಿಯರಾದ ಉಮೇಶ ಶೇರಿಗಾರ, ಮುರಳಿಧರ ದೇವಾಡಿಗ, ದುರ್ಗೆಶ್ ದೇವಾಡಿಗ ಸಹಕರಿಸಿದ್ದಾರೆ

Related posts

Leave a Reply

Your email address will not be published. Required fields are marked *