Header Ads
Breaking News

ಅಪರಿಚಿತ ಶವ ಪತ್ತೆ: ಪತ್ತೆಗೆ ಮನವಿ

ಉಡುಪಿ: ನಿಟ್ಟೂರು ಅರ್ಕದಕಟ್ಟೆ ಮಾರ್ಗ ಸನಿಹದ ಗದ್ದೆ ಬಯಲಿನಲ್ಲಿ ಅಪರಿಚಿತ ಸುಮಾರು 45 ವರ್ಷ ಪ್ರಾಯದ ಗಂಡಸಿನ ಮೃತ ದೇಹವು ಪತ್ತೆಯಾದ ಘಟನೆ ಬುಧವಾರ ನಡೆದಿದೆ. ಶವವನ್ನು ಅಜ್ಜರಕಾಡು ಜಿಲ್ಲಾಸ್ಪತ್ರೆಯ ಶವಗಾರದಲ್ಲಿ ರಕ್ಷಿಸಿಡಲಾಗಿದೆ. ಅತಿ ಮದ್ಯ ಸೇವನೆಯಿಂದ ವ್ಯಕ್ತಿ ಸಾವಿನಪ್ಪಿದ್ದಾನೆಂದು ತಿಳಿದು ಬಂದಿದೆ. ಶವವನ್ನು ಸಾಗಿಸಲು ಇಲಾಖೆಗೆ ಸಮಾಜಸೇವಕ ನಿತ್ಯಾನಂದ ಒಳಕಾಡು ಉಚಿತ ಅಂಬುಲೇನ್ಸ್ ಸೇವೆ ಒದಗಿಸಿ ಸಹಕರಿಸಿದ್ದಾರೆ. ಮೃತ ವ್ಯಕ್ತಿಯ ವಿಳಾಸ ತಿಳಿದು ಬಂದಿಲ್ಲ. ಎಲ್ಲಪ್ಪ ಹೆಸರಿನಿಂದ ಸ್ಥಳಿಯರಲ್ಲಿ ಪರಿಚಯಿಸಿ ಕೊಂಡಿದ್ದ ಎಂಬ ಮಾಹಿತಿ ಲಭ್ಯವಾಗಿದೆ. ವಾರಸುದಾರರು ಜಿಲ್ಲಾಸ್ಪತ್ರೆಯ ನಾಗರಿಕ ಸಹಾಯ ಕೇಂದ್ರವನ್ನು ಸಂಪರ್ಕಿಸಲು ಸೂಚಿಸಲಾಗಿದೆ.

Related posts

Leave a Reply

Your email address will not be published. Required fields are marked *