Header Ads
Breaking News

ಅಪಾಯಕಾರಿ ಪ್ಲಾಸ್ಟಿಕ್ ತ್ಯಾಜ್ಯಕ್ಕೆ ಗ್ರಾ.ಪಂ.ಪಕ್ಕದಲ್ಲೇ ಬೆಂಕಿ: ಎಲ್ಲೂರು ಪಂಚಾಯತ್ ವಿರುದ್ಧ ಗ್ರಾಮಸ್ಥರ ಆಕ್ರೋಶ

ಗ್ರಾಮದ ಜನರಿಗೆ ಒಳಿತು ಕೆಡುಕುಗಳ ಬಗ್ಗೆ ಮಾಹಿತಿ ನೀಡಬೇಕಾಗಿದ್ದ ಕಾಪು ತಾಲೂಕಿನ ಎಲ್ಲೂರು ಗ್ರಾಮ ಪಂಚಾಯಿತಿ ತಾನೇ ಸ್ವತಃ ಅಪಾಯಕಾರಿ ಪ್ಲಾಸ್ಟಿಕ್ ತ್ಯಾಜ್ಯಕ್ಕೆ ಗ್ರಾ.ಪಂ. ಪಕ್ಕದಲ್ಲೇ ಬೆಂಕಿ ಇಕ್ಕುವ ಮೂಲಕ ಗ್ರಾಮದ ಜನರಿಗೆ ಮಾರಕ ರೋಗಭೀತಿ ಸೃಷ್ಠಿಸುತ್ತಿದೆ ಎಂದು ಜನತೆ ಆರೋಪಿಸುತ್ತಿದ್ದಾರೆ.

ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಸ್ಥಳೀಯ ನಿವಾಸಿ ಲಕ್ಷ್ಮೀನಾರಾಯಣ ಎಂಬವರು, ನಮಗೆ ಈ ಬಗ್ಗೆ ಮಾಹಿತಿ ಇಲ್ಲದೆ ಮನೆಯಲ್ಲಿ ಉತ್ಪತ್ತಿಯಾಗುತ್ತಿದ್ದ ಅಲ್ಪಸ್ವಲ್ಪ ಪ್ಲಾಸ್ಟಿಕ್ ಸಹಿತ ಇತರೆ ತ್ಯಾಜ್ಯಗಳನ್ನು ನಮ್ಮ ವಠಾರದಲ್ಲಿ ಸುಡುತ್ತಿದ್ದನ್ನು ಗಂಭೀರ ಅಪರಾಧ ಎಂಬುದಾಗಿ ಬಿಂಬಿಸಿದ ನಮ್ಮ ಗ್ರಾಮ ಪಂಚಾಯಿತಿ ಅಧಿಕಾರಿಗಳು ಇನ್ನು ಮುಂದೆ ತ್ಯಾಜ್ಯ ಸುಟ್ಟರೆ ಕಾನೂನು ಕ್ರಮ ಕೈಗೊಳ್ಳುವ ಬೆದರಿಕೆ ಹಾಕಿದ್ದಾರೆ.

ಆದರೆ ಇದೀಗ ಮನೆಮನೆಗಳಿಂದ ಸಂಗ್ರಹ ಮಾಡುವ ಪ್ಲಾಸ್ಟಿಕ್ ಸಹಿತ ಎಲ್ಲಾ ಬಗೆಯ ತ್ಯಾಜ್ಯಗಳನ್ನು ಗ್ರಾ.ಪಂ. ಹಿಂಭಾಗದ ತ್ಯಾಜ್ಯ ಗುಂಡಿಗೆ ಸುರಿದು ಬೆಂಕಿ ಇಡುತ್ತಿದ್ದಾರೆ. ಈ ಪರಿಸರದಲ್ಲಿ ನಲವತ್ತಕ್ಕೂ ಅಧಿಕ ವಾಸದ ಮನೆಗಳಿದ್ದು, ನೂರಕ್ಕೂ ಅಧಿಕ ಮಕ್ಕಳು, ಹಿರಿಯರು ವಾಸಿಸುವ ಪ್ರದೇಶ ಇದಾಗಿದೆ. ದಿನದ ಇಪ್ಪತ್ತನಾಲ್ಕು ಗಂಟೆಗಳೂ ತ್ಯಾಜ್ಯ ಗುಂಡಿಯಿಂದ ದಟ್ಟ ಹೊಗೆ ಇಡೀ ಪ್ರದೇಶವನ್ನು ದುರ್ನಾತ ಮಯವನ್ನಾಗಿಸುತ್ತಿದೆ. ಈ ಬಗ್ಗೆ ಗ್ರಾ.ಪಂ.ಗಮನಕ್ಕೆ ತಂದರೂ ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂಬುದಾಗಿ ಆರೋಪಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರಾ.ಪಂ. ಪಿಡಿಓ ಮಮತ ಶೆಟ್ಟಿ, ನಾವು ಮನೆಮನೆಗಳಿಂದ ಸಂಗ್ರಹ ಮಾಡುವ ತ್ಯಾಜ್ಯವನ್ನು ಜನರು ಒಣಗಿಸದೆ ನೀಡುವುದರಿಂದ ನಾವು ಅನಿವಾರ್ಯ ವಾಗಿ ಅದನ್ನು ಸುಡುವಂತಾಗಿದೆ ಎನ್ನುವ ಮೂಲಕ ತನ್ನ ಜವಾಬ್ದಾರಿ ಮರೆತು ಮಾತನಾಡಿರುವುದು ಜನರನ್ನು ಮತ್ತಷ್ಟು ಕೆರಳುವಂತೆ ಮಾಡಿದೆ. ತಕ್ಷಣವೇ ಈ ಸಮಸ್ಯೆಗೆ ಮುಕ್ತಿ ತೋರಿಸದಿದ್ದಲ್ಲಿ ಗ್ರಾ.ಪಂ. ಮುಂಭಾಗ ಗ್ರಾಮಸ್ಥರನ್ನು ಸೇರಿಸಿ ಪ್ರತಿಭಟಿಸೊದು ಅನಿವಾರ್ಯವಾದೀತು ಎಂಬುದಾಗಿ ಎಚ್ಚರಿಸಿದ್ದಾರೆ.

Related posts

Leave a Reply

Your email address will not be published. Required fields are marked *