Header Ads
Header Ads
Breaking News

ಅಪಾಯಕಾರಿ ಸ್ಥಿತಿಯಲ್ಲಿರುವ ಬಿ.ಸಿ ರೋಡ್ ರಸ್ತೆ

ಬಂಟ್ವಾಳ: ಅಪಾಯಕಾರಿಯಾಗಿರುವ ರಸ್ತೆ ಇಕ್ಕೆಲ್ಲ, ರಸ್ತೆ ಬದಿಯಲ್ಲಿ ಬಿದ್ದಿರುವ ಮಣ್ಣಿನ ರಾಶಿ, ಬಾಯ್ದೆರೆದು ನಿಂತಿರುವ ಕಾಂಕ್ರೀಟ್ ಚರಂಡಿ… ಇದು ನೂತನವಾಗಿ ನಿರ್ಮಾಣಗೊಂಡಿರುವ ಬಿ.ಸಿ.ರೋಡಿನ ಸರ್ವಿಸ್ ರಸ್ತೆಯಲ್ಲಿ ಕಾಣಸಿಗುವ ದೃಶ್ಯ.


ಎರಡು ತಿಂಗಳ ಕಾಲವಧಿಯಲ್ಲಿ ಪೂರ್ಣಗೊಳ್ಳಬೇಕಾಗಿದ್ದ ಬಿ.ಸಿ.ರೋಡಿನ ಸರ್ವಿಸ್ ರಸ್ತೆಯ ಕಾಂಕ್ರೀಟ್ ಕಾಮಗಾರಿ ಬರೊಬ್ಬರಿ ನಾಲ್ಕು ತಿಂಗಳ ಬಳಿಕ ಪೂರ್ಣಗೊಂಡಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಪೂರ್ಣ ಹಾಗೂ ಎಡವಟ್ಟು ಕಾಮಗಾರಿಯಿಂದಾಗಿ ವಾಹನ ಸವಾರರಿಗೆ ಹಾಗೂ ಪಾದಾಚಾರಿಗಳ ಪಾಲಿಗೆ ಅಪಾಯಕಾರಿಯಾಗಿದ್ದು ಈ ರಸ್ತೆಯಲ್ಲಿ ಪ್ರಾಣಭೀತಿ ಎದುರಾಗಿದೆ.
ನಗರದ ಕೊಳಚೆ ನೀರು ಸಹಿತ ಮಳೆ ನೀರು ಹರಿದು ಹೋಗಲು ನಿರ್ಮಿಸಿದ ಚರಂಡಿಗೆ ಹೃದಯಭಾಗದಲ್ಲಿ ಸ್ಲಾಬ್ ಅಳವಡಿಸದೇ ಬಿಡಲಾಗಿದೆ. ಇದರಿಂದಾಗಿ ಚರಂಡಿ ಇರುವ ಬಗ್ಗೆ ಗೊತ್ತಾಗದೆ ಕೊಳಚೆ ಗುಂಡಿಗೆ ಕೆಲವರು ಬಿದಿದ್ದಾರೆ. ಇದೀಗ ಅದಕ್ಕೆ ಸ್ಲಾಬ್ ಅಳವಡಿಸುವ ಬದಲು ಮುರಿದ ಬ್ಯಾರೀಕೇಡ್ ಇಡಲಾಗಿದೆ. ಹಳೆ ರಸ್ತೆಯನ್ನು ಅಗೆದ ಮಣ್ಣು, ಡಾಮಾರು ರಸ್ತೆ ಪಕ್ಕವೇ ರಾಶಿ ಬಿದ್ದು ನಗರದ ಅಂದಗೆಡಿಸಿದೆ.
ನಾಲ್ಕು ತಿಂಗಳು ಅಧಿಕ ಕಾಲವಕಾಶ ಪಡೆದುಕೊಂಡರೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಪೂರ್ಣ ಕಾಮಗಾರಿ ನಡೆಸಿರುವ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನೂ ಎರಡು ರಸ್ತೆಗಳು ಪರಸ್ಪರ ಜೋಡನೆಯ ಕಾಂಕ್ರೀಟ್ ಕಾಮಗಾರಿ ಅರೆಬರೆ ಸ್ಥಿತಿಯಲ್ಲಿದೆ. ಈಗಾಗಲೇ ಹೊಸ ರಸ್ತೆಯಲ್ಲಿ ವಾಹನ ಸಂಚಾರ ಆರಂಭಗೊಂಡಿದ್ದು ಅಸಮರ್ಪಕ ಕಾಮಗಾರಿಯಿಂದ ಅವಘಡ ಸಂಭವಿಸುವ ಮೊದಲು ಇಲಾಖೆ ಎಚ್ಚೆತ್ತುಕೊಳ್ಳಲಿ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಸರ್ವಿಸ್ ರಸ್ತೆಯ ನಿಧಾನಗತಿಯ ಕಾಮಗಾರಿಯ ಬಗ್ಗೆ ವಿ4 ನ್ಯೂಸ್ ವರದಿ ಪ್ರಕಟಿಸಿ ಸಂಬಂಧಪಟ್ಟ ಇಲಾಖೆಯನ್ನು ಎಚ್ಚರಿಸುವ ಪ್ರಯತ್ನ ನಡೆಸಿತ್ತು. ಇದೀಗ ರಸ್ತೆ ಕಾಮಾಗಾರಿ ಪೂರ್ತಿಯಾಗಿದೆ. ಆದರೆ ಅರೆಬರೆ ಸ್ಥಿತಿ ಇರುವುದರಿಂದ ಜನರು ತೊಂದರೆ ಪಡವಂತಾಗಿದೆ.
ವರದಿ: ಸಂದೀಪ್ ಬಂಟ್ವಾಳ

Related posts

Leave a Reply