Header Ads
Header Ads
Breaking News

ಅಪಾಯದ ಬಿಂಬವಾಗಿರುವ ವಿದ್ಯುತ್ ಕಂಬ:ಸೆಕ್ಷನ್ ಅಧಿಕಾರಿಗಳಿಂದ ನಿರ್ಲ್ಯಕ್ಷ

ಮಂಜೇಶ್ವರ: ಮಂಜೇಶ್ವರ ಗ್ರಾಮ ಪಂಚಾಯತ್ ವ್ಯಾಪ್ತಿಯ 20ನೇ ವಾರ್ಡಿನ ಬಿ ಎಸ್ ನಗರದಲ್ಲಿ ಮರದ ವಿದ್ಯುತ್ ಕಂಬವೊಂದು ಗೆದ್ದಲು ಹಿಡಿದು ಅಪಾಯದಂಚಿನದಲ್ಲಿದ್ದು, ಬಳಿಕ ವರ್ಷಕ್ಕೆ ಮೊದಲು ತೆಂಗಿನ ಮರವೊಂದಕ್ಕೆ ಸ್ಟೇ ತಂತಿಯನ್ನು ಹಾಕಿದ್ದು ಕೂಡಾ ಇದೀಗ ಮುರಿದು ಬೀಳುವ ಸ್ಥಿತಿಯಲ್ಲಿದ್ದೂ ಅಪಾಯದ ಮುನ್ಸೂಚನೆಯನ್ನು ನೀಡುವಂತಿದೆ.ಮಂಜೇಶ್ವರ ಸೆಕ್ಷನ್ ವ್ಯಾಪ್ತಿಯಲ್ಲಿ ವಿದ್ಯುತ್ ಇಲಾಖೆಯವರ ಅನಾಸ್ಥೆಯಿಂದ ಹಲವು ಭಾಗಗಳಲ್ಲಿ ದುರಂತಗಳು ಸಂಭವಿಸುತಿದ್ದರೂ ಅದಕ್ಕಿಂತ ಮೊದಲು ಸ್ಥಳೀಯರು ಅಪಾಯವನ್ನು ಆಹ್ವಾನಿಸುವ ವಿದ್ಯುತ್ ಸಂಬಂಧಿತ ದೂರುಗಳನ್ನು ಸೆಕ್ಷನ್ ಕಚೇರಿಗೆ ನೀಡುತಿದ್ದರೂ ಇದಕ್ಕೆ ಮುತುವರ್ಜಿ ತೆಗೆದು ದುರಂತವನ್ನು ತಪ್ಪಿಸಲು ಬೇಕಾದ ಕ್ರಮವನ್ನು ಅನುಸರಿಸುವ ಬದಲು ದೂರು ನೀಡಿದವರಲ್ಲಿಯೇ ನಿರ್ಲ್ಯಕ್ಷದ ಅಸಂಬಂಧವಾದ ಉತ್ತರಗಳನ್ನು ನೀಡುತ್ತಿರುವ ಮಂಜೇಶ್ವರ ಸೆಕ್ಷನ್ ಅಸಿಸ್ಟಂಟ್ ಇಂಜಿಯರಿನ ವಿರುದ್ದ ನಾಗರಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ

.ಈ ಕಂಬವನ್ನು ಮಾತ್ರ ಬದಲಿಸಲು ಸಾಧ್ಯವಿಲ್ಲ ಎಲ್ಲಾ ಕಂಬಗಳನ್ನು ತೆರವುಗೊಳಿಸುವ ಸಂದರ್ಭ ಅಪಾಯವನ್ನು ಆಹ್ವಾನಿಸುವ ಕಂಬವನ್ನು ತೆರವು ಗೊಳಿಸುತ್ತೇವೆಂದು ಹೇಳಿರುವುದಾಗಿ ಸ್ಥಳೀಯ ನಿವಾಸಿ ನಾಸರ್ ಕೈರಳಿv4 ನ್ಯೂಸಿನೊಂದಿಗೆ ಆರೋಪಿಸಿದ್ದಾರೆ.ಈ ದಾರಿಯಾಗಿ ದಿನನಿತ್ಯ ಮದ್ರಸ ಹಾಗೂ ಶಾಲೆಗಳಿಗೆ ಹಲವಾರು ವಿದ್ಯಾರ್ಥಿಗಳು ತೆರಳುತಿದ್ದು, ಮಾತ್ರವಲ್ಲದೆ ಈ ಪರಿಸರದಲ್ಲಿ ಸುಮಾರು 20ಕ್ಕಿಂತಲೂ ಮಿಕ್ಕ ಕುಟುಂಬಗಳು ವಾಸವಾಗಿದೆ. ಅಪಾಯದ ಕಂಬವನ್ನು ತೆರವುಗೊಳಿಸಿ ಶೀಘ್ರವೇ ಹೊಸ ಕಂಬವನ್ನು ಸ್ಥಾಪಿಸದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಮಹಿಳೆಯರು ಮಕ್ಕಳು ಸಮೇತ ಮಂಜೇಶ್ವರ ವಿದ್ಯುತ್ ಸೆಕ್ಷನ್ ಕಚೇರಿ ಮುಂಬಾಗದಲ್ಲಿ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಲಿರುವುದಾಗಿ ಊರವರು ಹೇಳುತಿದ್ದಾರೆ. ವರ್ಕಾಡಿಯಲ್ಲಿ ವಿದ್ಯುತ್ ಅಧಿಕಾರಿಗಳ ನಿರ್ಲ್ಯಕ್ಷದಿಂದ ಆರು ವಿದ್ಯಾರ್ಥಿಗಳು ಸಾವನ್ನಪ್ಪಿರುವುದನ್ನು ಇಲ್ಲಿನ ನಿವಾಸಿಗಳು ನೆನಪಿಸುತ್ತಾ ಇದ್ದಾರೆ. ಸಂಬಂಧಪಟ್ಟವರು ಇತ್ತ ಕಡೆ ಗಮನ ಹರಿಸಬೇಕಾಗಿದೆ.

Related posts

Leave a Reply