Header Ads
Header Ads
Breaking News

ಅಪಾಯದ ಮಟ್ಟದಲ್ಲಿರುವ ತೆಂಕಿಲ ಗುಡ್ಡದ ಉನ್ನತ ಮಟ್ಟದ ಪರಿಶೀಲನೆಗೆ ಸ್ಥಳೀಯರ ಆಗ್ರಹ

ಪುತ್ತೂರು:  ಅಪಾಯದ ವಲಯ ಎಂದು ಹೆಸರಿಸಲಾದ ತೆಂಕಿಲ ದರ್ಖಾಸ್ ಗುಡ್ಡದ ಬಿರುಕು ಮತ್ತು ಅದರಲ್ಲಿ ಮುಂಬರುವ ಅಪಾಯ ಸಾಧ್ಯತೆಗಳ ಬಗ್ಗೆ ಉನ್ನತ ಮಟ್ಟದ ಪರಿಶೀಲನೆ ನಡೆಯಬೇಕು ಎಂದು ಇಲ್ಲಿನ ಸಂತ್ರಸ್ತರು ಹಾಗೂ ಗುಡ್ಡದ ತಳಭಾಗದಲ್ಲಿನ ನಿವಾಸಿಗಳು ಆಗ್ರಹಿಸಿದ್ದಾರೆ. ಇಲ್ಲಿನ ನಿವಾಸಿಗಳು ಸಭೆಯೊಂದನ್ನು ನಡೆಸಿ ಆ.30ರಂದು ಜಿಲ್ಲಾಧಿಕಾರಿ ಅವರನ್ನು ಭೇಟಿಯಾಗಿ ಮನವಿ ಅರ್ಪಿಸಲು ನಿರ್ಧಾರ ಕೈಗೊಂಡಿದ್ದಾರೆ. ಭೂವಿಜ್ಞಾನ ಇಲಾಖೆಯು ಸೇರಿದಂತೆ ಹಲವಾರು ತಂಡಗಳು ಈ ಗುಡ್ಡಕ್ಕೆ ಭೇಟಿ ನೀಡಿ ಪರಸ್ಪರ ವಿರುದ್ಧವಾದ ಹೇಳಿಕೆಗಳನ್ನು ನೀಡಿದ್ದಾರೆ. ಇದರಿಂದ ಗುಡ್ಡದ ಮೇಲಿರುವ ಹಾಗೂ ಗುಡ್ಡದ ತಪ್ಪಲಿನಲ್ಲಿರುವ ಸುಮಾರು 40ಕ್ಕೂ ಹೆಚ್ಚು ಕುಟುಂಬಗಳು ಆತಂಕಕ್ಕೆ ಈಡಾಗಿವೆ. ಆದ್ದರಿಂದ ಭೂವಿಜ್ಞಾನ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳು ಪರಿಶೀಲನೆ ನಡೆಸಬೇಕು ಎಂದು ಸಭೆಯಲ್ಲಿ ಆಗ್ರಹಿಸಲಾಯಿತು.

ಈ ತೆಂಕಿಲ ದರ್ಖಾಸ್ ಗುಡ್ಡದ ಮೇಲೆ ಕೆಸಿಡಿಸಿಗೆ ಸಂಬಂಧಿಸಿದ ನೂರಾರು ಎಕರೆ ಪ್ರದೇಶದಲ್ಲಿ ಗೇರು ಮರಗಳಿದ್ದು, ಇದರಲ್ಲಿ ಸುಮಾರು 1200 ಇಂಗುಗುಂಡಿಗಳನ್ನು ತೋಡಲಾಗಿದೆ. ಸುಮಾರು 4 ಫೀಟ್ ಆಳವಿರುವ ಈ ಇಂಗುಗುಂಡಿಗಳಲ್ಲಿ ನೀರು ಇಂಗುವ ಕಾರಣವೇ ಗುಡ್ಡ ಬಿರುಕು ಬಿಡಲು ಕಾರಣವಾಗಿದೆ. ಈ ಗುಡ್ಡದ ಪಕ್ಕದಲ್ಲಿಯೇ ಖಾಸಗಿ ಒಡೆತನದಲ್ಲಿರುವ ಜಾಗದಲ್ಲಿ ಬಂಡೆಗಳನ್ನು ಒಡೆಯಲು ಡೈನಾಮೈಟ್ (ಸಿಡಿಮದ್ದು) ಬಳಕೆಯಾಗುತ್ತಿದೆ. ಈ ಎರಡು ಕಾರಣಗಳಿಂದ ಗುಡ್ಡ ಬಿರುಕು ಬಿಟ್ಟಿರುವುದು ಎಂಬ ಅಭಿಪ್ರಾಯಗಳು ಸಭೆಯಲ್ಲಿ ಸ್ಥಳೀಯರಿಂದ ವ್ಯಕ್ತವಾಯಿತು. ಸಭೆಯಲ್ಲಿ ಸ್ಥಳೀಯರಾದ ಬಿ.ಎನ್.ಮುತ್ತಪ್ಪ, ಅಬ್ರಾಹಂ, ಲಿಂಗಪ್ಪ ಗೌಡ, ವಾಸುದೇವ ನಾಯಕ್, ಶಂಕರ ನಾಯಕ್, ಆನಂದ, ಜನಾರ್ಧನ ನಾಯಕ್, ಸತೀಶ್, ಸುಪ್ರಭಾ, ಹಾಗೂ ಮತ್ತಿತರರು ಹಾಜರಿದ್ದರು.

Related posts

Leave a Reply

Your email address will not be published. Required fields are marked *