Header Ads
Header Ads
Breaking News

ಅಪಾಯವನ್ನು ಆಹ್ವಾನಿಸುತ್ತಿರುವ ವಿದ್ಯುತ್ ತಂತಿ : ಇನ್ನೂ ಎಚ್ಚೆತ್ತುಕೊಳ್ಳದ ವಿದ್ಯುತ್ ಇಲಾಖೆ ಅಧಿಕಾರಿಗಳು

ಮಂಜೇಶ್ವರ: ಮಂಜೇಶ್ವರ ಗ್ರಾಮಪಂಚಾಯತ್ ವ್ಯಾಪ್ತಿಯ ಎರಡನೇ ವಾರ್ಡು ತೂಮಿನಾಡಿನಲ್ಲಿ ಕಾರ್ಯಾಚರಿಸುತ್ತಿರುವ ಕುಂಜತ್ತೂರು ಬಿಎಸ್‌ಎನ್‌ಎಲ್‌ಎಕ್ಸ್ ಚೇಂಚ್ ಕಚೇರಿಯ ಮುಂಭಾಗದ ರಸ್ತೆಯಲ್ಲಿ ವಿದ್ಯುತ್ ಕಂಬದಿಂದ ಹಾದು ಹೋಗುತ್ತಿರುವ ವಿದ್ಯುತ್ ಕಂಬಗಳು ಅಪಯಕಾರಿಯಾಗಿ ಜೋತು ಬಿದ್ದಿದೆ. ಇದು ಈ ರಸ್ತೆಯಿಂದ ಸಂಚರಿಸುತ್ತಿರುವ ವಾಹನಗಳಿಗೂ ತಾಗುತ್ತಿದೆ. ಕೂಡಲೇ ವಿದ್ಯುತ್ ಇಲಾಖೆಯವರು ಎಚ್ಚೆತ್ತುಕೊಂಡ ವಿದ್ಯುತ್ ತಂತಿಯನ್ನು ಸರಿಪಡಿಸಬೇಕಾಗಿದೆ.

ವಿದ್ಯುತ್ ತಂತಿ ಕೈಗೆಟಕುವ ರೀತಿಯಲ್ಲಿ ಅಪಾಯದಲ್ಲಿದ್ದರೂ ವಿದ್ಯುತ್ ಇಲಾಖೆಯವರು ಎಚ್ಚೆತ್ತುಕೊಂಡಿಲ್ಲ. ಈ ಬಗ್ಗೆ ಹಲವಾರು ಸಲ ಮಂಜೇಶ್ವರ ವಿದ್ಯುತ್ ಇಲಾಖೆಯವರಿಗೆ ಊರವರು ದೂರುಗಳನ್ನು ನೀಡಿದ್ದರೂ ಕ್ಯಾರೇ ಅಂದಿಲ್ಲ. ಈ ರಸ್ತೆ ತುಂಬಾ ಇಕ್ಕಟ್ಟಾಗಿದ್ದು, ಈ ರಸ್ತೆಯಲ್ಲಿ ಘನ ವಾಹನಗಳು ಸಂಚರಿಸುತ್ತಿರುವಾಗ ಚಾಲಕರು ಹರ ಸಾಹಸ ಪಡುತಿದ್ದಾರೆ. ಈ ಮಧ್ಯೆ ಇದೀಗ ಕೆಲವೊಂದು ಶಾಲಾ ವಾಹನಗಳು ನೇತಾಡಿಕೊಂಡಿರುವ ವಿದ್ಯುತ್ ತಂತಿಯನ್ನು ತಪ್ಪಿಸಿಕೊಂಡು ಹೋಗುತಿದ್ದರೂ, ಕೆಲವೊಂದು ವಾಹನಗಳಿಗೆ ಚಾಲಕರ ಗಮನಕ್ಕೆ ಬಾರದೆ ವಿದ್ಯುತ್ ತಂತಿ ತಾಗುತ್ತಿದೆ. ಈ ತಂತಿ ಕೂಡಾ ಹಲವು ಕಡೆಗಳಲ್ಲಿ ತುಕ್ಕು ಹಿಡಿದಿದ್ದು, ಇದರ ಭಾಗ ವಾಹನಗಳಿಗೆ ತಾಗಿದರೆ ಶಾಕ್ ಹೊಡೆದು ದುರಂತ ಸಂಭವಿಸದೇ ಇರಲಾರದು. ಕೂಡಲೇ ವಿದ್ಯುತ್ ಇಲಾಖೆಯ ಅಧಿಕಾರಿಗಳು ಎಚ್ಚೆತ್ತು ಸಮಸ್ಯೆಯನ್ನು ಸರಿಪಡಿಸಬೇಕಾಗಿದೆ.

Related posts

Leave a Reply

Your email address will not be published. Required fields are marked *