Breaking News

ಅಪೂರ್ವವಾಗುತ್ತಿರುವ ಆಷಾಡ ಮಾಸದ ಕಳಂಜ ಆಚರಣೆ, ನೆಕ್ರಾಜೆ ಕುಂಞಿ ಕಣ್ಣನ್ ನೇತೃತ್ವದ ಕಳಂಜ ತಂಡ


ಆಷಾಢ ಮಾಸ ಜಡಿಮಳೆಯ ಕಾರ್ಮೋಡಗಳ ಮಧ್ಯೆ ಹಿಂದಿನ ಸಾಮಾಜಿಕ ಮಾನಸಿಕ ಸ್ಥಿತ್ಯಂತರಗಳನ್ನು ದಾಟಲು ಕಂಡುಕೊಂಡ ಕಳಂಜದಂತಹ ಆಚರಣೆ ಇಂದು ಅಪೂರ್ವವೆನಿಸುತ್ತಿದ್ದರೂ ನಡೆದುಬರುತ್ತಿದೆ.
ಗಡಿನಾಡು ಕಾಸರಗೋಡಿನ ಬಹು ಭಾಷ ಸಂಸ್ಕೃತಿಯ ಧರೆಯಲ್ಲಿ ಮಲೆಯಾಳ ಸಂಸ್ಕೃತಿಯ ಭಾಗವಾದ ಕಳಂಜನಿಗೆ ಸರಿಯಾದ ಆಡಿತೈಯ, ಬೇಡಂ ತೈಯ ಮತ್ತು ಮರ್ಧಂ ತೈಯ ಆಷಾಡ ಮಾಸದಲ್ಲಿ ಮನೆಮನೆಗೆ ಕರೆದೊಯ್ಯುವ ವಿಶಿಷ್ಟ ಸಂಪ್ರದಾಯ ತಲೆತಲಾಂತರದಿಂದ ನಡೆದುಬಂದಿದೆ. ಕಾಸರಗೋಡು ನೆಕ್ರಾಜೆ ಸಮೀಪದ ನೆಕ್ರಾಜೆ ಗೋಪಲಕೃಷ್ಣ ತೀಯಾ ಸಮಾಜದ ಕುಂಞಿ ಕಣ್ಣನ್ ನೇತೃತ್ವದ ತಂಡ ಹಲವು ವರ್ಷಗಳಿಂದ ಆಡಿ ತೈಯವನ್ನು ಆಷಾಡ ಮಾಸದಲ್ಲಿ ನಡೆಸಿಕೊಂಡು ಬರುತ್ತಿದ್ದು, ಈ ಬಾರಿಯು ಕಾಸರಗೋಡು ನಗರದ ಪೇಟೆಯ ಮನೆ ಮನೆಗಳನ್ನು ಸಂದರ್ಶನ ನಡೆಸಿತು. ಕುಂಞಿ ಕಣ್ಣನ್ ತಂಡ ಆಡಿತೈಯವೊಂದನ್ನು ಮಾತ್ರ ಪ್ರದರ್ಶನ ನೀಡುತ್ತಿದ್ದು, ಆಟಿಯ ನಾಲ್ಕನೇ ದಿನ ನೆಕ್ರಾಜೆ ಗೋಪಾಲಕೃಷ್ಣ ಕ್ಷೇತ್ರದಲ್ಲಿ ಪ್ರಾರ್ಥನೆಗೈದು ಹೊರಟಿದ್ದಾರೆ. ಆಟಿಯ ಕೊನೆಯ ದಿನ ಸಮಾಪನ ನಡೆಸಲಿದ್ದಾರೆ. ಇವರ ಸಣ್ಣ ಮಗ ಸೂರಜ್ ಕುಂಞಿ ಕಣ್ಣನ್ ತಂಡದಲ್ಲಿ ಈ ಬಾರಿ ಆಡಿ ತೈಯದ ವೇಷ ಧರಿಸಿದ್ದು ವಿಶೇಷವಾಗಿತ್ತು.

Related posts

Leave a Reply