Header Ads
Header Ads
Header Ads
Breaking News

ಅಪೂರ್ವ ಜ್ಯುವೆಲ್ಲರ್‍ಸ್ ಚಿನ್ನಾಭರಣ ಮಳಿಗೆ ಬಿ.ಸಿ ರೋಡ್‌ನ ಕೃಷ್ಣ ಹೆರಿಟೇಜ್ ವಾಣಿಜ್ಯ ಸಂಕೀರ್ಣದಲ್ಲಿ ಉದ್ಘಾಟನೆ

ಬಂಟ್ವಾಳ: ಬಂಟ್ವಾಳ ಪರಿಸರದಲ್ಲಿ ಮನೆಮಾತಾಗಿರುವ ಪ್ರತಿಷ್ಠಿತ ಅಪೂರ್ವ ಜ್ಯವೆಲ್ಲರ್‍ಸ್‌ನ ನೂತನ ಚಿನ್ನದ ಮಳಿಗೆಯು ಬಿ.ಸಿ.ರೋಡಿನ ಬಸ್ ನಿಲ್ದಾಣದ ಬಳಿಯ ಕೃಷ್ಣ ಹೆರಿಟೇಜ್ ವಾಣಿಜ್ಯ ಸಂಕೀರ್ಣದಲ್ಲಿ ಉದ್ಘಾಟನೆಗೊಂಡಿತು. ಶ್ರೀ ಧನಲಕ್ಷ್ಮಿ ಪೂಜೆಯೊಂದಿಗೆ ನೂತನ ಮಳಿಗೆ ಶುಭಾರಂಭಗೊಳಿಸಲಾಯಿತು.

ಸಂಸ್ಥೆಯ ಮಾಲಕ ಸುನೀಲ್ ಅವರ ಮಾತೃಶ್ರೀ ಪ್ರಪುಲ್ಲ ಸೀತಾರಾಮ ಆಚಾರ್ಯ ಅವರು ದೀಪಪ್ರಜ್ವಲಗೊಳಿಸಿದರು. ಪುರಸಭೆ ಅಧ್ಯಕ್ಷ ರಾಮಕೃಷ್ಣ ಆಳ್ವ, ನ್ಯಾಯವಾದಿ ಅಶ್ವನಿ ಕುಮಾರ್ ರೈ, ಪುರಸಭೆ ಸದಸ್ಯ ಜಗದೀಶ್ ಕುಂದರ್ ಮೊದಲಾದವರು ಉಪಸ್ಥಿತರಿದ್ದು ನೂತನ ಮಳಿಗೆಗೆ ಶುಭ ಕೋರಿದರು.

ಕಳೆದ 11 ವರ್ಷಗಳಿಂದ ಬಿ.ಸಿ.ರೋಡು ಪರಿಸರದಲ್ಲಿ ನವೀನ ಮಾದರಿಯ ಚಿನ್ನಾಭರಣಗಳನ್ನು ಪರಿಚಯಿಸುತ್ತಾ ತನ್ನೆಲ್ಲಾ ಗ್ರಾಹಕರಿಗೆ ಅತ್ಯುತ್ತಮ ಸೇವೆ ನೀಡುತ್ತಾ ಸಾರ್ಥಕ್ಯವನ್ನು ಕಂಡಿದೆ. ಇನ್ನೂ ಅತ್ಯುತ್ತಮ ಹಾಗೂ ಹೆಚ್ಚಿನ ಸೇವೆ ಸಲ್ಲಿಸುವ ದೃಷ್ಟಿಯಿಂದ ಮಳಿಗೆಯನ್ನು ವಿಶಾಲ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ. ಬಿ‌ಐ‌ಎಸ್ ಹಾಲ್ ಮಾರ್ಕ್‌ನ ಆಭರಣಗಳು, ಗ್ರಾಹಕರ ಇಚ್ಛೆಗೆ ಅನುಗುಣವಾದ ವಿನ್ಯಾಸ, ಮಿತವಾದ ತಯಾರಿಕಾ ವೆಚ್ಚ, ಪ್ರಾಮಾಣಿಕ ಹಾಗೂ ಪಾರದರ್ಶಕ ವ್ಯವಹಾರ ಅಪೂರ್ವ ಜ್ಯವೆಲ್ಲರ್‍ಸ್‌ಬ ವೈಶಿಷ್ಟಯವಾಗಿದೆ. ಸುಲಭ ಮಾಸಿಕ ಕಂತಿನ ಅದೃಷ್ಟ ಯೋಜನೆಗಳು ಲಭ್ಯವಿದ್ದು ಎಲ್ಲಾ ತರದ ಚಿನ್ನ ಹಾಗೂ ಬೆಳ್ಳಿಯ ಆಭರಣಗಳು ಮತ್ತು ದೈವ ದೇವರ ಆಭರಣಗಳ ತಯಾರಿಕೆಯೂ ಕೂಡ ಇಲ್ಲಿದೆ. ಗ್ರಾಹಕರ ಬೇಡಿಕೆಗಣುಗುಣವಾಗಿ ಚಿನ್ನಾಭರಣಗಳನ್ನು ಆಕರ್ಷಕ ವಿನ್ಯಾಸದೊಂದಿಗೆ ಒದಗಿಸಲಾಗುವುದು ಎಂದು ಸಂಸ್ಥೆಯ ಮಾಲಿಕ ಸುನೀಲ್ ಅವರು ತಿಳಿಸಿದ್ದಾರೆ.

Related posts

Leave a Reply