Header Ads
Breaking News

ಅಪೂರ್ವ ಸಾಧಕ ಪ್ರಕಾಶ್ ಶೆಟ್ಟಿ 60ರ ಸಂಭ್ರಮೋತ್ಸವ : ಉಡುಪಿಯಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ

ಕೊಡುಗೈ ದಾನಿ, ಅಪೂರ್ವ ಸಾಧಕ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಪ್ರಕಾಶ್ ಶೆಟ್ಟಿ ಅವರ 60ರ ಸಂಭ್ರಮೋತ್ಸವ ಕಾರ್ಯಕ್ರಮ ಡಿಸೆಂಬರ್ 25ರಂದು ಮಂಗಳೂರಿನಲ್ಲಿ ನಡೆಯಲಿದೆ. ಈ ಪ್ರಯುಕ್ತ ಆಮಂತ್ರಣ ಪತ್ರಿಕೆಯ ಬಿಡುಗಡೆ ಹಾಗೂ ಪೂರ್ವಭಾವಿ ಸಭೆ ನಡೆಯಿತು. ಇತ್ತೀಚಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ದಾನಿಯೂ ಹಾಗೂ ಸಾಧಕರಾಗಿರುವ ಪ್ರಕಾಶ್ ಶೆಟ್ಟಿ ಅವರು ಪಡೆದಿದ್ದು ಅವರ ೬೦ರ ಸಂಭ್ರಮೋತ್ಸವವನ್ನು ಅದ್ಧೂರಿಯಾಗಿ ನಡೆಸಲು ಅವರ ಅಭಿಮಾನಿಗಳ ಬಳಕ ಕಾರ್ಯಕ್ರಮ ಹಮ್ಮಿಕೊಂಡಿದೆ. ಈ ಹಿನ್ನಲೆಯಲ್ಲಿ ಡಿಸೆಂಬರ್ 25ರಂದು ಮಂಗಳೂರಿನ ಗೋಲ್ಡ್‌ಫಿಂಚ್ ಹೊಟೇಲ್‌ನಲ್ಲಿ ಪ್ರಕಾಶಾಭಿನಂದನೆ 60ರ ಸಂಭ್ರಮೋತ್ಸವ ನಡೆಯಲಿದ್ದು ಇದರ ಹಿನ್ನಲೆಯಲ್ಲಿ ಆಮಂತ್ರಣ ಪತ್ರಿಕೆಯ ಬಿಡುಗಡೆ ಹಾಗೂ ಪೂರ್ವಭಾವಿ ಸಭೆ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನದಲ್ಲಿ ಅಭಿನಂದನಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಜಯಕರಶೆಟ್ಟಿ ಇಂದ್ರಾಳಿ ಇವರ ಮುಂದಾಳತ್ವದಲ್ಲಿ ನಡೆಯಿತು. ನೆರೆದ ಗಣ್ಯರು ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು. ಕಾರ್ಯಕ್ರಮದ ಬಗ್ಗೆ ಜಯಕರಶೆಟ್ಟಿ ಇಂದ್ರಾಳಿ ವಿವರಿಸಿದರು. ಉದ್ಯಮಿಗಳಾದ ಜೆರಿ ವಿನ್ಸೆಂಟ್ ಡಯಾಸ್, ಪುರುಷೊತ್ತಮ್ ಶೆಟ್ಟಿ, ಮನೋಹರ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

 

Related posts

Leave a Reply

Your email address will not be published. Required fields are marked *