Header Ads
Header Ads
Header Ads
Breaking News

ಅಪ್ರಾಪ್ತ ಬಾಲಕಿಯರಿಗೆ ವೃದ್ಧನಿಂದ ಲೈಂಗಿಕ ಕಿರುಕುಳ ತಲೆಮರೆಸಿಕೊಂಡ ವೃದ್ಧ ನಿವಾಸಿ ಅಬ್ದುಲ್ ರಝಾಕ್ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಉಳ್ಳಾಲ: ಅಂಗಡಿಗೆ ಬರುತ್ತಿದ್ದ ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ 65 ರ ಹರೆಯದ ವೃದ್ಧ ಅಂಗಡಿ ಮಾಲೀಕನ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಅಂಗಡಿ ಮಾಲೀಕ ತಲೆಮರೆಸಿಕೊಂಡಿದ್ದಾನೆ.

ಉಚ್ಚಿಲ ನಿವಾಸಿ ಅಬ್ದುಲ್ ರಝಾಕ್ (65) ವಿರುದ್ಧ ದೂರು ದಾಖಲಾಗಿದೆ. ಉಚ್ಚಿಲದಲ್ಲಿ ದಿನಸಿ ಅಂಗಡಿ ಹೊಂದಿರುವ ಈತ ಬುಧವಾರದಂದು ಸಂಜೆ ಅಂಗಡಿಗೆ ಬಂದಿದ್ದ 7ರ ಹರೆಯದ ಬಾಲಕಿಗೆ ಅಂಗಡಿಯೊಳಗಡೆ ಕಿರುಕುಳ ನೀಡಿದ್ದ. ಈ ವಿಚಾರವನ್ನು ಬಾಲಕಿ ಮನೆಯಲ್ಲಿ ತಿಳಿಸಿದ್ದಳು. ಇದನ್ನು ಬಾಲಕಿ ತಾಯಿ ಮತ್ತು ಅಜ್ಜಿ ಅಂಗಡಿಗೆ ಬಂದು ಪ್ರಶ್ನಿಸಲು ಮುಂದಾದಾಗ ಉಡಾಫೆಯಿಂದ ವರ್ತಿಸಿದ್ದನು. ವಿಚಾರ ಹಬ್ಬುತ್ತಿದ್ದಂತೆ ಸ್ಥಳದಲ್ಲಿ ಎರಡು ಕೋಮಿನ ಜನ ಜಮಾಯಿಸಿ ಬಿಗುವಿನ ವಾತಾವರಣ ನಿರ್ಮಾಣವಾಯಿತು.

ಈ ವೇಳೆ ಆರೋಪಿತ ಅಬ್ದುಲ್ ರಝಾಕ್ ಸ್ಥಳದಿಂದ ತಲೆಮರೆಸಿಕೊಂಡಿದ್ದಾನೆ. ಸ್ಥಳಕ್ಕಾಗಮಿಸಿದ ಸಹಾಯಕ ಪೊಲೀಸ್ ಆಯುಕ್ತ ರಾಮರಾವ್ ಸಹಿತ ಉಳ್ಳಾಲ ಅಪರಾಧ ಹಾಗೂ ಕಾನೂನು ವಿಭಾಗದ ಉಪನಿರೀಕ್ಷಕರು ಜಮಾಯಿಸಿದ ಜನರನ್ನು ಚದುರಿಸಿ ವಾತಾವರಣವನ್ನು ತಿಳಿಗೊಳಿಸಿದರು. ಬಳಿಕ ಅಂಗಡಿಯನ್ನು ಮುಚ್ಚಿಸಿದ್ದಾರೆ. ಆರೋಪಿತ ರಝಾಕ್ ಅವರಿಗೆ ಮೂವರು ಬೆಳೆದುನಿಂತ ಮಕ್ಕಳಿದ್ದಾರೆಂದು ಸ್ಥಳಿಯರು ತಿಳಿಸಿದ್ದಾರೆ.

Related posts

Leave a Reply