

ಕಡಬ :- ಜ್ಯೂಸ್ ಸೆಂಟರ್ ಗೆ ಬಂದಿದ್ದ ಅಪ್ರಾಪ್ತ ಬಾಲಕಿಯ ಫೋಟೊ ತೆಗೆದು ವಾಟ್ಸಾಪ್ ಸ್ಟೇಟಸ್ ಹಾಕಿದ ಘಟನೆಗೆ ಸಂಬಂಧಿಸಿ ಜ್ಯೂಸ್ ಸೆಂಟರ್ ಗೆ ಹಿಂದೂ ಸಂಘಟನೆಯ ಕಾರ್ಯಕರ್ತರು ಜಮಾಯಿಸಿದ ಘಟನೆ ಜ. 2 ರ ಸಂಜೆ ನಡೆದಿದೆ.
ಅನ್ಯಕೋಮಿನ ವ್ಯಕ್ತಿ ಜ್ಯೂಸ್ ಸೆಂಟರ್ ಗೆ ಬಂದಿದ್ದ ಅಪ್ರಾಪ್ತ ಬಾಲಕಿಯ ಪೋಟೊ ತೆಗೆದು ತನ್ನ ವಾಟ್ಸಪ್ ನಲ್ಲಿ ಹಾಕಿದ್ದ ಈ ವಿಚಾರ ತಿಳಿಯುತ್ತಿದ್ದಂತೆ ಹಿಂದೂ ಸಂಘಟನೆಯ ಕಾರ್ಯಕರ್ತರು ಸಹಿತ ಅನೇಕರು ಜಮಾಯಿಸಿ ಅಂಗಡಿಯ ವ್ಯಕ್ತಿಗಳ ಮತ್ತು ಸೇರಿದ್ದ ಜನರ ಮಧ್ಯೆ ಮಾತಿನ ಚಕಮಕಿಯೂ ನಡೆಯಿತು. ಘಟನೆಗೆ ಸಂಬಂಧ ಡಿಲೈಟ್ ಬೇಕರಿ ಮಾಲಕ ಯಾಕೂಬ್ ನನ್ನು ಕಡಬ ಪೊಲೀಸರು ವಶಕ್ಕೆ ಪಡೆದಿದ್ದು ಬಾಲಕಿಯ ತಂದೆ ನೀಡಿದ ದೂರಿನ ಅನ್ವಯ ಸೈಬರ್ ಕ್ರೈಮ್ ಅಡಿಯಲ್ಲಿ ಪ್ರಕರಣ ಧಾಖಲಾಗಿದೆ.ಈ ಬಗ್ಗೆ ಪ್ರತಿಕ್ರಿಯಿಸಿರುವ ಸಂಘ ಪರಿವಾರದ ಪ್ರಮುಖರು ಘಟನೆಯನ್ನು ಖಂಡಿಸಿದ್ದಾರೆ. ಇನ್ನುಎರಡೂ ಧರ್ಮದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದ ಹಿನ್ನಲೆ ಕಡಬದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿದ್ದ ಹಿನ್ನಲೇ ಕಡಬ ಪೊಲೀಸರು ಹತ್ತು ಗಂಟೆಯ ವೇಳೆಗೆ ಪೇಟೆಯಲ್ಲಿನ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸಿದರು.