Breaking News

ಅಫಘಾನ್ ಸೇನಾ ನೆಲೆ ಮೇಲೆ ಉಗ್ರರ ದಾಳಿ, ಇಪ್ಪತ್ತಾರು ಯೋಧರ ಸಾವು

ಯೋಧರ ಸೇನಾ ನೆಲೆಯನ್ನು ಗುರಿಯಾಗಿಸಿಕೊಂಡು ತಾಲಿಬಾನ್ ಉಗ್ರರು ನಡೆಸಿದ ದಾಳಿಯಲ್ಲಿ ಅಫ್ಗಾನಿಸ್ತಾನದ 26 ಯೋಧರು ಸಾವನ್ನಪ್ಪಿದ್ದು, 13 ಯೋಧರು ಗಾಯಗೊಂಡಿದ್ದಾರೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
ಪ್ರತಿದಾಳಿ ನಡೆಸಿದ ಯೋಧರು ೮೦ಕ್ಕೂ?ಹೆಚ್ಚು ಉಗ್ರರನ್ನು ಹತ್ಯೆ ಮಾಡಿರುವುದಾಗಿ ಸಚಿವಾಲಯದ ವಕ್ತಾರ ಜನರಲ್ ದವ್ಲತ್ ವಾಜಿರಿ ತಿಳಿಸಿದ್ದಾರೆ. ವಿವಿಧೆಡೆಯಿಂದ ಸೇನಾ ನೆಲೆ ಮೇಲೆ ದಾಳಿ ನಡೆಸಿದ ೧೦೦ಕ್ಕೂ ಹೆಚ್ಚು ಉಗ್ರರ ವಿರುದ್ಧ ಸೇನಾಪಡೆ ಒಂದು ಗಂಟೆ ಹೋರಾಟ ನಡೆಸಿತು. ತಾಲಿಬಾನ್ ಉಗ್ರರು ಸೇನಾ ಪಡೆಗಳನ್ನು ಗುರಿಯಾಗಿಸಿಕೊಂಡು ನಡೆಸುತ್ತಿರುವ ದಾಳಿಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿವೆ.

Related posts

Leave a Reply