Header Ads
Header Ads
Breaking News

ಅಫೀಮು ಡ್ರಗ್ಸ್‌ನಿಂದ ಅತ್ಯಾಚಾರ ಪ್ರಕರಣಗಳು ಜಾಸ್ತಿ: ಶೋಭಾ ಕರಂದ್ಲಾಜೆ

ಅಫೀಮು ಡ್ರಗ್ಸ್‌ನಿಂದ ಅತ್ಯಾಚಾರ ಪ್ರಕರಣಗಳು ಜಾಸ್ತಿಯಾಗಿದೆ. ಜಾಲವನ್ನು ಪತ್ತೆ ಹಚ್ಚುವ ಕೆಲಸವನ್ನು ಪೊಲೀಸರು ಮಾಡ್ತಿಲ್ಲ. ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕು. ಅಪರಾಧ ಜಾಲಗಳ ಮೂಲವನ್ನು ಪತ್ತೆ ಮಾಡಬೇಕು ಎಂದು ಮಂಗಳೂರಿನಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.

ಅವರು ಮಂಗಳೂರಿನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿ, ಸಂತ್ರಸ್ತೆಯ ಜೊತೆ ಮಾತನಾಡಿ ಬಂದಿದ್ದೇನೆ, ಆರೋಪಿಗಳು ಭಯಾನಕವಾಗಿ ಕೃತ್ಯ ಮಾಡಿದ್ದಾರೆ. ಮಂಗಳೂರಿನಲ್ಲಿ ಪೊಲೀಸರು ಸಂಪೂರ್ಣ ವಿಫಲರಾಗಿದ್ದಾರೆ. ವೈಫಲ್ಯ ಮರೆಮಾಚಲು ಆಫೀಮು ಗಾಂಜಾ ಮಾಫಿಯಾ ಇಲ್ಲ ಅಂತಾ ಹೇಳ್ತಾರೆ. ಪೊಲೀಸರಿಗೆ ಇಚ್ಛಾ ಶಕ್ತಿಯ ಕೊರತೆ ಇದೆ. ಪೊಲೀಸರು ಬೀಚ್‌ಗಳಲ್ಲಿ ಗಸ್ತು ತಿರುಗ್ತಾ ಇಲ್ಲ. ಶಾಲಾ ಕಾಲೇಜು ಪರಿಸರದಲ್ಲಿ ಗಸ್ತು ತಿರುಗ್ತಾ ಇಲ್ಲ ಎಂದು ಶೋಭಾ ಕರಂದ್ಲಾಜೆ ಕಿಡಿ ಕಾರಿದರು.

ಕನಸಲ್ಲಿ ಸಿಎಂ ಆಗೋದು ಸಿದ್ದರಾಮಯ್ಯನವರು. ನನಸಲ್ಲಿ ಯಡಿಯೂರಪ್ಪ ಸಿಎಂ ಆಗುತ್ತಾರೆ. ಯಡಿಯೂರಪ್ಪ ಸಿಎಂ ಆಗಲಿ ಅನ್ನೋದು ರಾಜ್ಯದ ಜನತೆಯ ಅಪೇಕ್ಷೆ. ಮೈತ್ರಿ ಪಕ್ಷಗಳು ಕಿತ್ತಾಡೋದು ಬಿಟ್ಟು ಅಭಿವೃದ್ಧಿ ಕೆಲಸ ಮಾಡಲಿ. ಸಿದ್ದರಾಮಯ್ಯ ಕಾಂಟ್ರವರ್ಸಿ ಕ್ರಿಯೆಟ್ ಮಾಡುತ್ತಿದ್ದಾರೆ. ಕುಮಾರಸ್ವಾಮಿ ಫಾಲೋ ಅಪ್ ಮಾಡಿದ್ದಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಲೇವಡಿ ಮಾಡಿದರು.

ರಾಮಂದಿರ ನಿರ್ಮಾಣದ ಬಗ್ಗೆ ಜನಾರ್ದನ ಪೂಜಾರಿ ಹೇಳಿಕೆ ಸ್ವಾಗತಾರ್ಹ. ಒಂದು ಕಾಲದಲ್ಲಿ ರಾಮಮಂದಿರ ಬಗ್ಗೆ ಪೂಜಾರಿ ಸಂಶಯ ವ್ಯಕ್ತಪಡಿಸಿದ್ದರು. ಈಗ ರಾಮಮಂದಿರ ಬಗ್ಗೆ ಪೂಜಾರಿ ಹೇಳಿದ್ದಾರೆ ಅಂದ್ರೆ ಮಂದಿರ ನಿರ್ಮಾಣ ಆಗುತ್ತೆ. ಕಾಂಗ್ರೆಸ್ ಕೋರ್ಟ್‌ನಲ್ಲಿ ರಾಮ ಮಂದಿರ ವಿರುದ್ಧ ಹೋರಾಡ್ತಾ ಇದೆ. ಕಾಂಗ್ರೆಸ್ ಕೆಟ್ಟ ರಾಜನೀತಿ ಅನುಸರಿಸುತ್ತಿದೆ. ಕಾಂಗ್ರೆಸ್‌ನಿಂದ ಸುಪ್ರೀಂಕೋರ್ಟ್ ವಿಚಾರಣೆ ಮುಂದೂಡಿದೆ ಎಂದು ಹೇಳಿದರು.

Related posts

Leave a Reply