Breaking News

ಅಬುದಾಬಿ : ಸಾಹೆಬಾನ್ ವತಿಯಿಂದ ಬೃಹತ್ ಇಫ್ತಾರ್ ಸಂಗಮ

 ಅಬುದಾಬಿ : ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ನೆಲೆಸಿರುವ ಉರ್ದು ಭಾಷೆ ಮಾತನಾಡುವ ಹನಫಿ ಮುಸಲ್ಮಾನರು ತಮ್ಮ ನಾಡು ನುಡಿಗೆ ತಮ್ಮದೇ ಆದ ಕೊಡುಗೆ ನೀಡುತ್ತಾಬಂದಿದ್ದಾರೆ. ಅರಬ್ ಸಂಯುಕ್ತ ಸಂಸ್ಥಾನದಲ್ಲಿ ಅನಿವಾಸಿಗಳಾಗಿ ಉದ್ಯಮಗಳಲ್ಲಿ ತೊಡಗಿಸಿಕೊಂಡಿರುವ ಸಾಹೆಬಾನ್ ಸಮುದಾಯದ ಹಲವು ಮಂದಿಯ ಗಡಣ ತಮ್ಮ ನಾಡುನುಡಿ ಸಂಸ್ಕೃತಿ ಯ ಸೊಗಡನ್ನು ಕಾಪಿಟ್ಟುಕೊಂಡು ” ಸಾಹೆಬಾನ್ ಬಿಸಿನೆಸ್ ಕಮ್ಯೂನಿಟಿ ” ಎಂಬ ಹೆಸರಿನಲ್ಲಿ ಸತತ 14 ವರ್ಷಗಳಿಂದ ಅಬು ಧಾಬಿಯಲ್ಲಿ ಕಾರ್ಯಾಚರಿಸುತ್ತಿದ್ದು,ಹತ್ತು ಹಲವು ಸಾಮಾಜಿಕ ಮತ್ತು ಜನಪರ ಕಾರ್ಯಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದೆ. ಪ್ರತಿವರ್ಷದಂತೆ ಈ ಬಾರಿಯೂ ಅಬುದಾಬಿ  ಸೋಶಿಯಲ್ ಸೆಂಟರ್ ನಲ್ಲಿ ಅದ್ದೂರಿಯಾಗಿ ಇಫ್ತಾರ್ ಸಂಗಮ ನಡೆಸಿ ಕೊಡುವ ಮೂಲಕ ಅನಿವಾಸಿ ಕರಾವಳಿಯ ಕನ್ನಡಿಗರನಡುವಣ ಸುಭದ್ರ ಸಂಬಂಧಕ್ಕೆ ಭದ್ರ ಬುನಾದಿ ಹಾಕಿ ಕೊಟ್ಟಿದೆ. ಈ ಬಾರಿಯೂ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಬ್ಯಾರಿ ಮತ್ತು ಸಾಹೆಬಾನ್ ಸಮುದಾಯದ ಕನ್ನಡಿಗರು ಪುಣ್ಯಮಾಸವಾದ ರಮಳಾನ್ ನ ಇಫ್ತಾರ್ ಸಂಗಮದಲ್ಲಿ  ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಿದರು.ಕಾರ್ಯಕ್ರಮವು ಕಿರಾತ್ ಪಠಣದೊಂದಿಗೆ ಆರಂಭ ಗೊಂಡಿತು. ಸಾಹೆಬಾನ್ ಕಮ್ಯೂನಿಟಿ ಯ ಅಧ್ಯಕ್ಷರಾದ ಸುಹೈಲ್ ಕುದ್ರೋಳಿ ಮಾತನಾಡಿ ” ಸಾಹೇಬನ್ ಸಮುದಾಯ ಶಿಕ್ಷಣ ಕ್ಷೇತ್ರದಲ್ಲಿ ಸಾಧಿಸಿರುವ ಶ್ರೇಯೋಭಿವೃದ್ಧಿ ಗಮನಾರ್ಹ, ನಾವು ಸಾದಿಸಬೇಕಾಗಿದ್ದು ಇನ್ನೂ ಇದೆ, ಪ್ರಸಕ್ತ ಬೇಡಿಕೆಗಳಿಗೆ ಅನುಸಾರವಾಗಿ ಪದವಿ, ಇಂಜಿನಿಯರಿಂಗ್ ಗಳಿಗೆ ಮಾತ್ರಾ ನಾವು ಕಲಿಕೆ ಸೀಮಿತ ಗೊಳಿಸಬಾರದು, ಒಂದು ಹೆಜ್ಜೆ ಮುಂದಿಟ್ಟು ಉನ್ನತ ಶಿಕ್ಷಣ, ಪಿಹೆಚ್ ಡಿ ಗಳಿಸುವುದು ನಮ್ಮ ಗುರಿಯಾಗಬೇಕು ಎಂದ ಒತ್ತಿ ಹೇಳಿದ ಅವರು,    ಶಿಕ್ಷಣ, ಸಬಲೀಕರಣ ಮತ್ತು ಆರ್ಥಿಕ ಅಭಿವೃದ್ಧಿಯ ಬಗ್ಗೆ ಸಮುದಾಯ ಹೆಚ್ಚು ಗಮನ ಹರಿಸಬೇಕೆಂದು ಕರೆ ನೀಡಿದರು.ಬ್ಯಾರೀಸ್ ವೆಲ್ಫೇರ್ ಫೋರಮ್ ನ ಅಧ್ಯಕ್ಷ ಮುಹಮ್ಮದ್ ಅಲಿ ಉಚ್ಚಿಲ, ಪ್ರಧಾನ ಕಾರ್ಯದರ್ಶಿ ಅಬ್ದುಲ್ಲಾ ಮದುಮೂಲೆ ಇಫ್ತಾರ್ ಸಂಗಮದಲ್ಲಿ ಉಪಸ್ಥಿತರಿದ್ದರು.

Related posts

Leave a Reply