Header Ads
Header Ads
Header Ads
Breaking News

ಅಬುಧಾಬಿ ಕರ್ನಾಟಕ ಸಂಘದಿಂದ ಕನ್ನಡ ರಾಜ್ಯೋತ್ಸವ ನ.೩ರಂದು ನಡೆಯಲಿರುವ ಕಾರ್ಯಕ್ರಮ ಇಂಡಿಯನ ಸೋಷಿಯಲ್ ಆಂಡ್ ಕಲ್ಚರಲ್ ಸೆಂಟರ್‌ನಲ್ಲಿ ಕಾರ್ಯಕ್ರಮ

ಅಬುಧಾಬಿ ಕರ್ನಾಟಕ ಸಂಘದ ವತಿಯಿಂದ ನವೆಂಬರ್ ೩ ಶುಕ್ರವಾರದಂದು ಅಬುಧಾಬಿ ಇಂಡಿಯನ್ ಸೋಷಿಯಲ್ ಆಂಡ್ ಕಲ್ಚರಲ್ ಸೆಂಟರ್‌ನಲ್ಲಿ ಕರ್ನಾಟಕ ರಾಜ್ಯೋತ್ಸವವನ್ನು ಬಹಳ ಅದ್ದೂರಿಯಾಗಿ ಆಚರಿಸಲಾಗವುದು.

ಕಾರ್ಯಕ್ರಮವು ಬೆಳಿಗ್ಗೆ 10.30 ಕ್ಕೆ ಸರಿಯಾಗಿ ಪ್ರಾರಂಭವಾಗಲ್ಲಿದ್ದು ಯು ಎ ಯಿ ಯಲ್ಲಿನ ಕನ್ನಡಿಗರ ಮಹಾ ಪೋಷಕರಾದ ಡಾ! ಬಿ ಆರ್ ಶೆಟ್ಟಿ ಹಾಗೂ ಅವರ ಧರ್ಮಪತ್ನಿ ಡಾ! ಚಂದ್ರಕುಮಾರಿ ಶೆಟ್ಟಿ ಅವರು ಗೌರವ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಲಿದ್ದಾರೆ. ಶಾಯರಿ ಸಾಮ್ರಾಟ್ ಎಂದೆ ಪ್ರಖ್ಯಾತಿ ಪಡೆದಿರುವ ಅಸಾದುಲ್ಲಾ ಬೇಗ್ ರವರು ಮುಖ್ಯ ಅತಿಥಿಗಳಾಗಿ ಆಗಮಿಸಲ್ಲಿದ್ದಾರೆ.
ಈ ವರ್ಷದ ದಾ ರಾ ಬೇಂದ್ರೆ ಪ್ರಶಸ್ತಿಯನ್ನು ಯಕ್ಷಗಾನ ಕಲಾವಿದ ಶೇಖರ್ ಡಿ ಶೆಟ್ಟಿಗಾರ್ ಅವರಿಗೆ ನೀಡಲಾಗುವುದು. 2012 ರ ಮಿಸ್ಟರ್ ಕರ್ನಾಟಕ ಪ್ರಶಸ್ತಿ ವಿಜೇತ Sಂಓ‌ಆಂಐWಔ‌ಔ‌ಆ ನ ಯುವ ನಟ ಸಾಹಿಲ್ ಅವರು ಕಾರ್ಯಕ್ರಮದ ನಿರೂಪಣೆ ಮಾಡಲಿದ್ದಾರೆ.  ಕರ್ನಾಟಕದ ಸಂಘ ಅಬುಧಾಬಿಯ ಸದಸ್ಯರಿಂದ ನೃತ್ಯ ಸಂಗೀತ ಹಾಗು ಇತರ ಮನೋರಂಜನೆ ಕಾರ್ಯಕ್ರಮಗಳು ನಡೆಯಲಿದೆ.
ಈ ಸಂದರ್ಭದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಅತ್ಯುನ್ನತ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸನ್ಮಾನ ನೀಡಿ ಗೌರವಿಸಲಾಗುವುದು.  ಆದರ್ಶ ದಂಪತಿ ಸ್ಪರ್ಧೆ ಯು ಈ ಕಾರ್ಯಕ್ರಮಕ್ಕೆ ಇನ್ನಷ್ಟು ಮೆರಗು ನೀಡಲಿರುವುದು. ಯು ಎ ಯಿ ಯಲ್ಲಿರುವ ಕನ್ನಡಿಗರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಬೇಕಾಗಿ ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷರಾದ ಸರ್ವೋತ್ತಮ್ ಶೆಟ್ಟಿಯವರು ಕೋರಿದ್ದಾರೆ.

ಪ್ರಶಾಂತ್ ನಾಯರ್
ರಮೇಶ್ ಸುವರ್ಣ

Related posts

Leave a Reply