Header Ads
Header Ads
Header Ads
Breaking News

ಅಭಯ ಆಶ್ರಯದಲ್ಲಿ ವಿಶ್ವ ಫಿಸಿಯೋಥೆರಪಿ ದಿನಾಚರಣೆ ನಿಟ್ಟೆ ಫಿಸಿಯೋಥೆರಪಿ ಕಾಲೇಜಿನ ಆಶ್ರಯದಲ್ಲಿ ಕಾರ್ಯಕ್ರಮ

ಕೊಣಾಜೆ ನಮ್ಮ‌ಆರೋಗ್ಯ ಸದಾ ಚೆನ್ನಾಗಿಟ್ಟುಕೊಳ್ಳಬೇಕಾದರೆ ಸಮತೋಲಿತ ಆಹಾರ ಅತಿ ಮುಖ್ಯ. ಹಾಗೆಯೇ ಯೋಗ, ವ್ಯಾಯಾಮ

ಇತರ ಲವಲವಿಕೆಯ ಚಟುವಟಿಕೆಗಳು ಅಗತ್ಯವಾಗಿದ್ದು ಅವೆಲ್ಲವು ನಮ್ಮ ಆರೋಗ್ಯವನ್ನು ಸದಾ ಕಾಪಾಡುತ್ತದೆ ಎಂದು ಕ್ಷೇಮ ಡೀನ್ ಪ್ರೊ. ಡಾ. ಸತೀಶ್ ಕುಮಾರ್ ಭಂಡಾರಿ ಹೇಳಿದರು.

ಕೆಲವೊಮ್ಮೆ ನೋವು ನಿವಾರಕ ಔಷಧಿ ಅನಿವಾರ್ಯವಾದರೂ ಅದು ವಿಪರೀತವಾಗಬಾರದು. ವಯಸ್ಸು ಹೆಚ್ಚಾದರಂತೂ ನೋವು ನಿವಾರಕ ಔಷಧಗಳ ವಿಪರೀತ ಬಳಕೆ ಸಲ್ಲದು. ಅಂತಹ ಸಂದರ್ಭಗಳಲ್ಲಿ ನೋವು ಇಲ್ಲದಂತೆ ರೋಗ ಗುಣಪಡಿಸುವಲ್ಲಿ ಶಾರೀರಿಕ ಚಿಕಿತ್ಸಕರ ಸೇವೆ ಪ್ರಮುಖವಾದುದು ಎಂದು ನುಡಿದರು.

ಕಾರ್ಯಕ್ರಮದಲ್ಲಿ ಕಾರುಣ್ಯ ವತಿಯಿಂದ ಅಭಯ ಆಶ್ರಯ ವಾಸಿಗಳಿಗೆ ದಿನನಿತ್ಯ ಬಳಸುವ ಪರಿಕರಗಳ ಹಾಗೂ ವಿದ್ಯಾರ್ಥಿಗಳಿಗೆ ಕ್ರೀಡಾ ಪರಿಕರ ವಿತರಿಸಲಾಯಿತು. ಬೆನ್ನುಮೂಳೆಯ ಚಿಕಿತ್ಸೆಯ ಕುರಿತಾಗಿ ನಿಖಿಲ್ ಎನ್ ಪಿ ಹಾಗೂ ಮೇಘನಾ ಬಾಳಿಗಾ ಮಾಹಿತಿ ನೀಡಿದರು.

ಅಭಯ ಆಶ್ರಯದ ಅಧ್ಯಕ್ಷ ಶ್ರೀನಾಥ್ ಹೆಗ್ಡೆ , ಎಂ. ಕೆ. ರಾಕೇಶ್ ಕೃಷ್ಣ ಹಾಗೂ ಕಾರುಣ್ಯ ಕಾರ್ಯದರ್ಶಿ ಡಾ. ಅಜಿತ್ ಎಸ್. ಸುಮಾಮ್ ಸನ್ನಿ ಉಪಸ್ಥಿತರಿದ್ದರು.

ವರದಿ: ಆರೀಪ್ ಕಲ್ಕಟ್ಟ ಉಳ್ಳಾಲ

Related posts

Leave a Reply