Header Ads
Breaking News

ಅಭಿವೃದ್ಧಿಯ ಭರದಲ್ಲಿ ಮರಗಳ ಮಾರಣಹೋಮ : ಅರಣ್ಯ ಇಲಾಖೆ ಮತ್ತು ಮನಪಾ ಇಂಜಿನಿಯರ್‌ಗಳ ವಿರುದ್ಧ ಆಕ್ರೋಶ

ಸ್ಮಾರ್ಟ್‌ಸಿಟಿಯಾಗಲು ಹೊರಟಿರುವ ಮಂಗಳೂರಿನಲ್ಲಿ ಮರಗಳಿಗೆ ಕೊಡಲಿ ಏಟು ಬಿದ್ದಿದೆ. ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಮಾರ್ನೆಮಿಕಟ್ಟೆ ಎಂಬಲ್ಲಿ ರಸ್ತೆ ಅಭಿವೃದ್ಧಿ ಹೆಸರಿನಲ್ಲಿ ಬೃಹತ್ತಾಕಾರದ ಮರಗಳನ್ನು ಕಡಿದು ನಾಶ ಮಾಡಿದ್ದಾರೆ. ಈ ಬಗ್ಗೆ ಸಾಮಾಜಿಕ ಕಾರ್ಯಕರ್ತರು ಸೇರಿದಂತೆ ಪರಿಸರ ಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಸರ್ಕಾರದ ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ಮಂಗಳೂರು ನಗರ ಕೂಡ ಆಯ್ಕೆಗೊಂಡಿದೆ. ಆದರೆ ಸ್ಮಾರ್ಟ್‌ಸಿಟಿಯ ಕೆಲವೊಂದು ಕಾಮಗಾರಿಗಳು ಮಂಗಳೂರು ನಗರದಲ್ಲಿ ನಡೆಯುತ್ತಿದೆ. ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ರಸ್ತೆ ಮತ್ತು ಚರಂಡಿಯ ಕಾಮಗಾರಿಗಳು ನಡೆಯತ್ತಿದೆ. ಆದರೆ ಅದೇ ನೆಪದಲ್ಲಿ ಎಷ್ಟೋ ವರ್ಷಗಳಿಂದ ಜನರಿಗೆ ನೆರಳನ್ನು ಕೊಡುತ್ತಿರುವ ಮರಗಳಿಗೆ ಕೊಡಲಿ ಏಟು ಹಾಕಿದ್ದಾರೆ.

ಬೃಹತ್ತಾಕಾರದ ಮರಗಳನ್ನು ಕಡಿದಿರುವುದಕ್ಕೆ ಪರಿಸರ ಪ್ರೇಮಿಗಳು ಸಹಿತ ಸಾಮಾಜಿಕ ಕಾರ್ಯಕರ್ತರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮತ್ತು ಮಂಗಳೂರು ಪಾಲಿಕೆ ಇಂಜಿನಿಯರ್‌ಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪರಿಸರ ಪ್ರೇಮಿ ಶಶಿಧರ್ ಶೆಟ್ಟಿ ಅವರು ಮಾತನಾಡಿ, ಬೃಹತ್ತಾಕಾರದ ಮರ ಕಡಿಯಲು ಇವರಿಗೆ ಅಧಿಕಾರ ಕೊಟ್ಟವರು ಯಾರು?. ಮರ ಕಡಿಯಲು ನೀವು ನಿಮ್ಮ ಖುಷಿ ಮಾಡಿದ್ರೆ ಮುಂದಿನ ದಿನಗಳಲ್ಲಿ ನಾವು ನಮ್ಮ ಖುಷಿ ಮಾಡುತ್ತೇವೆ ಎಂದು ಎಚ್ಚರಿಕೆಯನ್ನು ನೀಡಿದ್ದಾರೆ.

ಮಂಗಳೂರು ನಗರದಾದ್ಯಂತ ರಸ್ತೆ, ಫುಟ್‌ಪಾತ್ ಅಗಲೀಕರಣ ಕಾರ್ಯ ನಡೆಯುತ್ತಿದೆ. ಭರದಿಂದ ಕೆಲಸಗಳು ನಡೆಯುತ್ತಿದೆ. ಅದರ ಜೊತೆಗೆ ರಸ್ತೆ ಬದಿಯಲ್ಲಿದ್ದ ಮರಗಳನ್ನು ಕಡಿದು ನಾಶ ಮಾಡುತ್ತಿದ್ದಾರೆ. ಇದೇ ರೀತಿ ಮರಗಳನ್ನು ಕಡಿದರೆ ಮಂಗಳೂರು ನಗರದಲ್ಲಿ ಬಿಸಿಲಿನ ಉರಿಯಲ್ಲಿ ತಾಳಲಾರದೆ ಜನರು ಸಂಕಷ್ಟ ಪಡಬೇಕಾಗಬಹುದು.

Related posts

Leave a Reply

Your email address will not be published. Required fields are marked *