Header Ads
Header Ads
Breaking News

ಅಭಿವೃದ್ಧಿ ಕಾಣದ ಉದ್ಯಾವರ ಸಾರ್ವಜನಿಕ ರುದ್ರಭೂಮಿ

ಮಂಜೇಶ್ವರ: ಮಂಜೇಶ್ವರ ಗ್ರಾ. ಪಂ. ವ್ಯಾಪ್ತಿಯಲ್ಲಿರುವ ಉದ್ಯಾವರ ಮಾಡ ಸಮೀಪದ ಸಾರ್ವಜನಿಕ ರುಧ್ರ ಭೂಮಿ ವರ್ಷಗಳಿಂದ ಅಭಿವೃದ್ಧಿ ಕಾಣದೆ ಪಾಳು ಬಿದ್ದಿರುವುದಾಗಿ ಊರವರು ಆರೋಪಿಸುತಿದ್ದಾರೆ.ಇದರ ಸುತ್ತಲೂ ಪೊದರುಗಳು ತುಂಬಿದ್ದು ಮಾತ್ರವಲ್ಲದೆ ಇಲ್ಲಿಗೆ ಅಗಮಿಸಲು ಸರಿಯಾದ ದಾರಿಯ ವ್ಯವಸ್ಥೆ ಕೂಡಾ ಇಲ್ಲವೆನ್ನಲಾಗಿದೆ. ಈ ಸ್ಮಶಾನವನ್ನು ಗ್ಯಾಸ್ ಉಪಯೋಗಿಸಿ ಶವ ಶರೀರ ದಫನ ಮಾಡುವ ಸ್ಮಶಾನವಾಗಿ ಮಾರ್ಪಡಿಸಿ ಅಭಿವೃದ್ದಿಗೊಳಿಸಬೇಕೆಂಬುದಾಗಿ ಉದ್ಯಾವರ ಮಾಡ ಶ್ರೀ ಅರಸು ಮಂಜಿಷ್ಣಾರ್ ಕ್ಷೇತ್ರದ ಮೊಕ್ತೇಸರಾದ ದಯಾಕರ ಮಾಡ ಒತ್ತಾಯಿಸಿದ್ದಾರೆ.ಜಿಲ್ಲೆಯ ಕಿನಾನೂರು ಕರಿಂದಲಂ ಗ್ರಾ. ಪಂ. ನ ಚೂರಿಪಾರ ಎಂಬ ಸ್ಥಳದಲ್ಲಿ ಜಿಲ್ಲೆಯ ಪ್ರಥಮ ಗ್ಯಾಸ್ ಉಪಯೋಗಿಸಿ ಶವ ಶರೀರವನ್ನು ಧನ ಮಾಡುವ ಸ್ಮಶಾನ ನಿರ್ಮಾಣ ಕೆಲಸ ಪೂರ್ತೀಕರಣದ ಹಂತದಲ್ಲಿದೆ. ಬ್ಲೋಕ್ ಪಂ. ಯೋಜನೆ, ಜಿಲ್ಲಾ ಪಂ. ಯೋಜನೆಯಡಿಯಲ್ಲಿ 65 ಲಕ್ಷ ರೂ ವೆಚ್ಚದಲ್ಲಿ ಸ್ಮಶಾನ ನಿರ್ಮಾಣಗೊಳುತ್ತಿದೆ. ಇದೇ ರೀತಿ ಪಂ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮನಸ್ಸು ಮಾಡಿದರೆ ಇಂತಹ ಸ್ಮಶಾನವನ್ನು ಇಲ್ಲಿ ಕೂಡಾ ನಿರ್ಮಿಸಬಹುದಾಗಿದೆ.ಉದ್ಯಾವರ ಮಾಡ ಸ್ಮಶಾನದ ಪುರೋಗತಿಗೆ ಅಸಹಕಾರ ನೀಡುತ್ತಿರುವ ಮಂಜೇಶ್ವರ ಗ್ರಾ. ಪಂ. ಕಿನಾನೂರು – ಕರಿಂದಲ ಗ್ರಾಮ ಪಂ. ಈ ಯೋಜನೆಯನ್ನು ನೋಡಿ ಪಾಠ ಕಲಿಯಬೇಕಾಗಿದೆ ಎಂಬುದಾಗಿ ಸ್ಥಳೀಯರು ಹೇಳುತಿದ್ದಾರೆ.ಸುಮಾರು ಏಳು ವಾರ್ಡಿನ ಜನತೆ ಇದೇ ಸ್ಮಶಾನವನ್ನು ಆಶ್ರಯಿಸುತ್ತಿದೆ. ಸುಮಾರು ನೂರಕ್ಕೂ ಅಧಿಕ ವರ್ಷಗಳಿಂದ ಅಸ್ತಿತ್ವದಲ್ಲಿರುವ ಉದ್ಯಾವರ ಸ್ಮಶಾನವನ್ನು ಅವಗಣಿಸುತ್ತಿರುವ ಗ್ರಾ. ಪಂ. ಇನ್ನಾದರೂ ಬಹಿರಂಗ ವಿಷಧೀಕರಣ ನೀಡಬೇಕಾಗಿದೆ.ಸ್ಮಶಾನವನ್ನು ಗ್ಯಾಸ್ ರೀತಿಯಲ್ಲಿ ಅಸ್ತಿತ್ವಕ್ಕೆ ತಂದರೆ ಪರಿಸರವಾಸಿಗಳ ಕೆಲವು ಆಕ್ಷೇಪಗಳು ಇಲ್ಲದಾಗುವ ಸಾಧ್ಯತೆ ಕೂಡಾ ಇದೆ. ಇದೇ ಪರಿಸರದಲ್ಲಿ ಹಲವಾರು ಮನೆಗಳು ಇರುವ ಕಾರಣ ಈ ಸ್ಮಶಾನಕ್ಕೆ ಆ ಕುಟುಂಬದವರ ಆಕ್ಷೇಪ ಕೂಡಾ ಇದೆ. ಮಂಜೇಶ್ವರ ಗ್ರಾ. ಪಂ. ಅಧಿಕಾರದಲ್ಲಿರುವ ಯುಡಿಎಫ್ ಹಾಗೂ ಪ್ರತಿಪಕ್ಷವಾಗಿರುವ ಬಿಜೆಪಿ ಈ ಬೇಡಿಕೆಯನ್ನು ಅಂಗೀಕರಿಸಿ ಒಟ್ಟಾಗಿ ಸಹಕರಿಸಬೇಕಾಗಿ ಊರವರು ಒತ್ತಾಯಿಸುತಿದ್ದಾರೆ.ಬಂಗ್ರ ಮಂಜೇಶ್ವರ ರಮತ್ತಮಜಾಲಿನಲ್ಲಿರುವ ಅತ್ಯಂತ ಆಧುನಿಕ ಮಾದರಿ ಸ್ಮಸಾನವನ್ನು ಸಾರ್ವಜನಿಕರು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಹಾಗೂ ಊರವರ ಸಹಕಾರದಿಂದ ಸುಂದರವಾಗಿ ನಿರ್ಮಾಣಗೊಳಿಸಲಾಗಿದೆ. ಇದಕ್ಕೆ ಮಂಜೇಶ್ವರ ಗ್ರಾ. ಪಂ. 4 ಲಕ್ಷ ರೂ. ಕಾದಿರಿಸಿರುವುದಾಗಿಯೂ ತಿಳಿದು ಬಂದಿರುವುದಾಗಿಯೂ ಹೇಳುತಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂದಿನ ಬೋರ್ಡು ಸಭೆಯಲ್ಲಿ ಇದಕ್ಕೊಂದು ತೀರ್ಮಾನ ಕೈ ಗೊಳ್ಳುವಂತೆ ಊರವರು ಆಗ್ರಹಿಸಿದ್ದಾರೆ.ಈ ಬಗ್ಗೆ ಪ್ರತಿಕ್ರಿಯಿಸಿದ ಮಂಜೇಶ್ವರ ಗ್ರಾ. ಪಂ. ಅಧ್ಯಕ್ಷ ಅಬ್ದುಲ್ ಅಝೀಝ್ ಹಾಜಿಯವರು ಮಾತನಾಡಿ ಇದರ ಬಗ್ಗೆ ಸ್ಥಳೀಯರು ರುಧ್ರಭೂಮಿಯ ಸಮಿತಿಯ ಮುಂದಾಳತ್ವದಲ್ಲಿ ಕೋರ್ಟಿನಲ್ಲಿ ಧಾವೆಯನ್ನು ಹೂಡಿದ್ದರು. ಇದರಂತೆ ಅದರ ಸುತ್ತ ಶುಚಿತ್ವ ಗೊಳಿಸುವಂತೆ ಕೋರ್ಟು ಆದೇಶದ ನಿರ್ಧೇಶದ ಪ್ರಕಾರ ನಾವು ಅಲ್ಲಿಗೆ ತೆರಳಿದಾಗ ಅಲ್ಲಿಯ ಕೆಲವು ಸಮಾಜಘಾತಕ ಶಕ್ತಿಗಳು ನಮಗೆ ಅನುವು ಮಾಡಿ ಕೊಟ್ಟಿಲ್ಲ. ಮತ್ತೆ ನಾವು ಯಾವ ರೀತಿಯಲ್ಲಿ ಅಭಿವೃದ್ದಿ ಪಡಿಸಬೇಕೆಂಬುದಾಗಿ ಅವರು ಪ್ರಶ್ನಿಸಿದ್ದಾರೆ. ನಮಗೆ ಎಲ್ಲರೂ ಒಂದೇ ಯಾವುದೇ ಸಮಸ್ಯೆಗೂ ಸೂಕ್ತವಾದ ರೀತಿಯಲ್ಲಿ ನಾವು ಸ್ಪಂಧಿಸುತ್ತೇವೆ ಎಂಬುದಾಗಿ ಅವರು ಹೇಳಿದರು.

Related posts

Leave a Reply