Header Ads
Header Ads
Breaking News

ಅಮೃತಧಾರಾ ಗೋಶಾಲೆಗೆ ಮಾಜಿ ಸಚಿವ ಪಾಲೇಮಾರ್ ಭೇಟಿ ದನ ಕಳ್ಳರ ಆಟ್ಟಹಾಸಕ್ಕೆ ಕೊನೆ ಹಾಡಬೇಕಿದೆ ಮಾಜಿ ಸಚಿವ ಕೃಷ್ಣ.ಜೆ. ಪಾಲೇಮಾರ್ ಹೇಳಿಕೆ

ಉಳ್ಳಾಲ: ಭಟ್ ಅವರು ಕೈಗೊಂಡಿರುವ ಅಮರಣಾಂತ ಉಪವಾಸಕ್ಕೆ ನ್ಯಾಯ ಸಿಗದೇ ಇದ್ದಲ್ಲಿ ಅವಿಭಜಿತ ದ.ಕ ಮತ್ತು ಉಡುಪಿ ಜಿಲ್ಲೆಯ ಜನತೆ ಅವರ ಹೋರಾಟದಲ್ಲಿ ಭಾಗಿಯಾಗಲಿದ್ದು, ಈ ಮೂಲಕ ದನ ಕಳ್ಳರ ಅಟ್ಟಹಾಸಕ್ಕೆ ಕೊನೆ ಹಾಡಬೇಕಿದೆ ಎಂದು ಜಿಲ್ಲೆಯ ಮಾಜಿ ಉಸ್ತುವಾರಿ ಸಚಿವರಾದ ಕೃಷ್ಣ .ಜೆ.ಪಾಲೇಮಾರ್ ಹೇಳಿದ್ದಾರೆ.

ಕೈರಂಗಳ ಪುಣ್ಯಕೋಟಿನಗರದ ಅಮೃತಧಾರಾ ಗೋಶಾಲೆಯಲ್ಲಿ ಐದನೇ ದಿನಕ್ಕೆ ಕಾಲಿಟ್ಟಿರುವ ಟಿ.ಜಿ.ರಾಜಾರಾಂ ಭಟ್ ನೇತೃತ್ವದಲ್ಲಿ ಅಮರಣಾಂತ ಉಪವಾಸ ಸತ್ಯಾಗ್ರಹ ಕ್ಕೆ ಭೇಟಿ ನೀಡಿ ಮಾತನಾಡಿದರು. ಅಮೃತಧಾರಾ ಗೋಶಾಲೆಯಿಂದ ಗೋವಿನ ದರೋಡೆ ನಂತರ ದೂರು ನೀಡಿದರೂ ಸರಿಯಾದ ಸಮಯಕ್ಕೆ ಪೊಲೀಸರು ಪರಿಶೀಲನೆ ನಡೆಸದೆ ತಾತ್ಸಾರ ಮನೋಭಾವನೆ ತೋರಿದ್ದಾರೆ. ಜಿಲ್ಲೆಯ ಜನತೆ ಗೋಮಾತೆಯ ಭಕ್ತರೇ ಆಗಿದ್ದಾರೆ. ಎಲ್ಲಾ ಧರ್ಮದವರು ಗೋವನ್ನು ಆರಾಧನೆ ಮಾಡುವವರೇ ಆಗಿದ್ದಾರೆ. ಆದರೆ ಅದರ ನಡುವೆ ದನಕಳ್ಳರನ್ನು ಪ್ರೋತ್ಸಾಹಿಸುವ ಕಾರ್ಯ ಸರಕಾರದಿಂದ ಆಗಿದೆ. ಅದಕ್ಕಾಗಿ ನಡೆಯುತ್ತಿರುವ ಅಮರಣಾಂತ ಉಪವಾಸದಲ್ಲಿ ಎರಡು ಜಿಲ್ಲೆಗಳ ಜನ ಬೆಂಬಲಿಸಲಿದ್ದಾರೆ. ಸರಕಾರದ ಕಣ್ಣಮುಚ್ಚಾಲೆ ಜನರಿಗೆ ಸಾಕಾಗಿದೆ. ದರೋಡೆಕೋರರಿಗೆ, ಕಳ್ಳಕಾಕರಿಗೆ ಅವಕಾಶ ಮಾಡಕೊಟ್ಟಿರುವ ಸರಕಾರಕ್ಕೆ ಜಾನುವಾರು ಮಾತ್ರವಲ್ಲ ಜನರನ್ನು ಸುರಕ್ಷಿತವಾಗಿ ಕಾಪಾಡಲು ಅಸಾಧ್ಯವಾಗಿದೆ ಎಂದು ಆರೋಪಿಸಿದರು.