Header Ads
Header Ads
Breaking News

ಅಮೃತಾ ವಿದ್ಯಾಲಯಂ ಎಲ್‌ಕೆಜಿ ಮತ್ತು ಯುಕೆಜಿ ವಿದ್ಯಾರ್ಥಿಗಳ ವಾರ್ಷಿಕ ಕ್ರೀಡಾಕೂಟ 2018-19

ಮಂಗಳೂರಿನ ಬೊಳೂರಿನಲ್ಲಿರುವ ಅಮೃತಾ ವಿದ್ಯಾಲಯಂನ ಎಲ್‌ಕೆಜಿ ಮತ್ತು ಯುಕೆಜಿ ವಿದ್ಯಾರ್ಥಿಗಳ ವಾರ್ಷಿಕ ಕ್ರೀಡಾಕೂಟ ೨೦೧೮-೧೯ ಕಾಲೇಜಿನ ಅವರಣದಲ್ಲಿ ನಡೆಯಿತು.ಕ್ರೀಡಾಕೂಟವನ್ನು ಮಂಗಳೂರಿನ ಶಾರದಾ ಪದವಿ ಪೂರ್ವ ಕಾಲೇಜಿನ ನಿವೃತ ಪ್ರಾಂಶುಪಾಲರಾದ ಡಾ.ಲೀಲಾ ಉಪದ್ಯಾಯ, ಮತ್ತು ಅಮೃತ ವಿದ್ಯಾಲಯಂನ ಉಪ ಪ್ರಾಂಶುಪಾಲರಾದ ಅನುಪಮಾ ರಾವ್ ಬಲೂನು ಮತ್ತು ಪಾರಿವಾಳ ಹಾರಿ ಬಿಡುವ ಮೂಲಕ ಚಾಲನೆ ನೀಡಿದರು.ಬಳಿಕ ಶಾರದಾ ಪದವಿ ಪೂರ್ವ ಕಾಲೇಜಿನ ನಿವೃತ ಪ್ರಾಂಶುಪಾಲರಾದ ಡಾ.ಲೀಲಾ ಉಪದ್ಯಾಯರವರು ಮಾತನಾಡಿ ನನಗೆ ಈ ಪುಟ್ಟ ಪುಟ್ಟ ಮಕ್ಕಳ ಮುಗ್ಧತೆಯನ್ನು ಕಂಡು ಬಹಳಾ ಸಂತೋಷವಾಗುತ್ತಿದೆ. ಅವರಲ್ಲಿ ಗೆಲುವು ಸೋಲಿನ ಚಿಂತೆಯಿಲ್ಲ ಅವರ ಪ್ರಪಂಚದಲ್ಲಿ ಅವರು ತೆಲಾಡುತ್ತಿದ್ದರು. ಇತ್ತಿಚಿನ ದಿನಗಳಲ್ಲಿ ಪ್ರತೀ ಮನೆಯಲ್ಲಿ ಅಪ್ಪ ಅಮ್ಮ ಒಂದು ಅಥವಾ ಎರಡು ಮಕ್ಕಳು ಇರುತ್ತಾರೆ ಅವರು ಆಟವಾಡುವುದೇ ಕಮ್ಮಿಯಾಗಿದೆ ಆದ್ದರಿಂದ ಶಾಲೆಗಳಲ್ಲಿ ಇಂತಹಾ ಆಟಗಳ ಅನಿವಾರ್ಯತೆ ಇದೆ ಎಂದು ಹೇಳಿದರು.ಬಳಿಕ ಉಪ ಪ್ರಾಂಶುಪಾಲರಾದ ಅನುಪಮಾ ರಾವ್ ಮಾತನಾಡಿ ಮಕ್ಕಳಿಗೆ ಅಧ್ಯಯನದಲ್ಲಿ ಆಸಕ್ತಿ ಬರಬೇಕಾದರೆ ಕ್ರೀಡೆ ಅತ್ಯಗತ್ಯ. ಕ್ರೀಡೆ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ ಎಂದು ಹೇಳಿದರು.

ಈ ವೇಳೆ ವಿದ್ಯಾರ್ಥಿಗಳು ಆಯೋಜಿಸಿದ್ದ ಅನೇಕ ಸ್ಪರ್ಧೆಯಲ್ಲಿ ಭಾಗವಹಿಸಿ ಸಂಭ್ರಮ ಪಟ್ಟರು. ವಿಶೇಷವಾಗಿ ಪೋಷಕರಿಗೂ ಕೆಲವು ಸ್ಪರ್ಧೆಯನ್ನು ಆಯೋಜಿಸಲಾಗಿತ್ತು ಒಟ್ಟಿನಲ್ಲಿ ಪೋಷಕರು ಮಕ್ಕಳೊಂದಿಗೆ ಮಕ್ಕಳಾಗಿ ಸಂಭ್ರಮ ಪಟ್ಟರು.

ಈ ಸಂದರ್ಭ ಪ್ರಾಂಶುಪಾಲರಾದ ರಾಮಚಂದ್ರ ಭಟ್, ಸಯೋಜಕರಾದ ಶೋಭಾ ರಾಣಿ, ಅಜಯ್ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply