Header Ads
Breaking News

ಅಮೃತ ಆರೋಗ್ಯ ಮೇಳ -ಸ್ವಾಸ್ಥ್ಯ ಸಂಭ್ರಮ : ಜನವರಿ 12 ರಂದು ನಡೆಯಲಿರುವ ಅಮೃತ ಆರೋಗ್ಯ ಮೇಳ

ಸಾರ್ವಜನಿಕರ ಹಿತದೃಷ್ಟಿಯಿಂದ ಸರಕಾರ ರೂಪಿಸುವ ಯೋಜನೆಗಳ ಮಾಹಿತಿಯನ್ನು ನೀಡಿ ಇದರ ಸಂಪೂರ್ಣ ಪ್ರಯೋಜನ ಪಡೆಯಲು ನೆರವಾಗುವಂತೆ ಮಾಡುವುದು ಹಾಗೂ ಸರಕಾರಿ ಆಸ್ಪತ್ರೆಯಲ್ಲಿ ಮತ್ತು ಖಾಸಗಿ ಆಸ್ಪತ್ರೆಗಳ ಸಹಭಾಗಿತ್ವದಲ್ಲಿ ಪಡೆಯಬಹುದಾದ ಆರೋಗ್ಯ ಸೇವೆಗಳ ಸಮಗ್ರ ಮಾಹಿತಿ ಮತ್ತು ಉಚಿತ ತಪಾಸಣಾ ಶಿಬಿರವೇ ಅಮೃತ ಆರೋಗ್ಯ ಮೇಳ – ಸ್ವಾಸ್ಥ್ಯ ಸಂಭ್ರಮ. ಜನವರಿ 12 ರಂದು ಮಂಗಳೂರಿನ ಅಮೃತ ವಿದ್ಯಾಲಯದಲ್ಲಿ ನಡೆಯಲಿದೆ.

ಸುಮಾರು 20 ವರ್ಷಗಳಿಂದ ಮಾತಾ ಅಮೃತಾನಮದಮಯಿ ಮಠ ಸಾಕಷ್ಟು ಉಚಿತ ತಪಾಸಣ ಶೀಬಿರಗಳನ್ನು ಹಮ್ಮಿಕೊಂಡು ಬಂದಿದೆ. ಈ ಬಾರಿಯೂ ಕೂಡ ಮಂಗಳೂರಿನ ಮಾತಾ ಅಮೃತಾನಂದಮಯಿ ಇವರ ಆಶ್ರಯದಲ್ಲಿ ಜಿಲ್ಲಾ ವೆನ್ ಲಾಕ್ ಆಸ್ಪತ್ರೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ದಕ್ಷಿಣ ಕನ್ನಡ, ಆಯುಷ್ ಇಲಾಖೆ, ಸಮುದಾಯ ದಂತ ವಿಭಾಗ, ಮಣಿಪಾಲ ಕಾಲೇಜು ಆಫ್ ಡೆಂಟಲ್ ಸಯನ್ಸ್‍ಸ್ಸ ಮತ್ತು ಅತ್ತಾವರ ಮಂಗಳೂರು ಇದರ ವತಿಯಿಂದ ಸ್ವಾಮಿ ವಿವೇಕಾನಂದರ ಜನ್ಮದಿನ ಹಾಗೂ ರಾಷ್ಟ್ರೀಯ ಯುವ ದಿನದ ಅಂಗವಾಗಿ ಅಮೃತ ವಿದ್ಯಾಲಯದಲ್ಲಿ ಅಮೃತ ಆರೋಗ್ಯ ಮೇಳ – ಸ್ವಾಸ್ಥ್ಯ ಸಂಭ್ರಮ ಬೃಹತ್ ಬಹು ವಿಶೇಷತಾ ಉಚಿತ ವೈದ್ಯಕೀಯ ನೇತ್ರ ತಪಾಸಣೆ, ದಂತ ಚಿಕಿತ್ಸಾ ಶಿಬಿರ ಮತ್ತು ರಕ್ತದಾನ ಶಿಬಿರ ಜನವರಿ 12 ರಂದು ನಡೆಯಲಿದೆ ಎಂದು ಆಯೋಜಕರಾದ ಡಾ. ದೇವದಾಸ್ ಸುದ್ದಿಗೋಷ್ಠಿಯಲ್ಲಿ ಮಾಹಿತಿಯನ್ನು ನೀಡಿದರು. ಇದೊಂದು ವಿನೂತನ ರೀತಿಯ ಕಾರ್ಯಕ್ರಮವಾಗಿದ್ದು ಅಮ್ಮ್ಮನವರ ಸಾನಿಧ್ಯದಲ್ಲಿ ನಡೆಯಲಿದೆ ಎಂದರು.

ಆನಂತರ ಡಾ.ರಾಜೇಶ್ವರಿ ದೇವಿ ಅವರು ಮಾತನಾಡಿ, ಆರೋಗ್ಯ ಇಲಾಖೆ ವತಿಯಿಂದ ನಡೆಯುವ ಹಲವಾರು ಯೋಜನೆಗಳನ್ನು ಜನಸಾಮಾನ್ಯರಿಗೆ ಮುಟ್ಟಿಸುವ ನಿಟ್ಟಿನಲ್ಲಿ ಮಹತ್ವಾಕಾಂಕ್ಷೆ ಯೋಜನೆಗಳನ್ನು ಜಾರಿ ಮಾಡಲಾಗುತ್ತೆ. ಈ ಯೋಜನೆಗಳು ಜನರಿಗೆ ತಲುಪಬೇಕಾದ್ರೆ ಆರೋಗ್ಯ ಮೇಳಗಳು ನಡೆಯುವುದರಿಂದ ಜನಸಾಮಾನ್ಯರಿಗೆ ಮುಟ್ಟಿಸಲು ಉಪಯೋಗವಾಗುತ್ತದೆ. ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಲ್ಲಿ ಬಂದ ಆಯುಷ್ಮಾನ್ ಕಾರ್ಡ್‍ನ ಕುರಿತಾಗಿ ಸಾಕಷ್ಟು ಮಾಹಿತಿಯನ್ನು ನೀಡಲಾಯಿತ್ತು. ಆಯುಷ್ಮಾನ್ ಕಾರ್ಡ್‍ನ ಪ್ರಯೋಜನಗಳೇನು? ಯಾವ ರೀತಿಯಾಗಿ ಪಡೆಯಬಹುದು, ಜೊತೆಗೆ ವೈದ್ಯಕೀಯ ಶಿಬಿರದಲ್ಲಿ ಲಭ್ಯವಿರುವ ಸೇವೆಗಳ ಕುರಿತಾಗಿ ಸವಿಸ್ತøತವಾದ ಮಾಹಿತಿಯನ್ನು ಆರೋಗ್ಯ ಮೇಳದಲ್ಲಿ ತಿಳಿಸಿಕೊಡಲಾಗುತ್ತೆ ಎಂದು ಹೇಳಿದರು. ಸುದ್ದಿಗೊಷ್ಠಿಯಲ್ಲಿ ಮಾತಾ ಅಮೃತಾನಂದಮಯಿ ಸೇವಾ ಸಮಿತಿ ಅಧ್ಯಕ್ಷರು ಡಾ. ವಸಂತಕುಮಾರ್ ಪೇರ್ಲ, ಡಾ. ಶರತ್ ಕುಮಾರ್, ಡಾ. ಸುಚಿತ್ರ ರಾವ್, ಉಪಸ್ಥಿತರಿದ್ದರು.

 

Related posts

Leave a Reply

Your email address will not be published. Required fields are marked *